ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಲಸ ಬಿಡುವ ನೋಟಿಸ್ ಅವಧಿ 3ರಿಂದ ಒಂದು ತಿಂಗಳಿಗೆ ಇಳಿಸಲು ಒತ್ತಾಯ

ಕೆಲಸ ಬಿಡುವ ಮುನ್ನ ಮೂರು ತಿಂಗಳು ನೋಟಿಸ್ ಅವಧಿಯಲ್ಲಿ ಕೆಲಸ ಮಾಡಬೇಕು ಎಂಬುದು ಬಹುತೇಕ ಐಟಿ ಹಾಗೂ ಬಿಪಿಒ ಉದ್ಯೋಗಿಗಳ ಪಾಲಿಗಿರುವ ನಿಯಮ. ಇದನ್ನು ಒಂದು ತಿಂಗಳಿಗೆ ಇಳಿಸಬೇಕು ಎಂದು ಒತ್ತಾಯಿಸಿ ಆನ್ ಲೈನ್ ಅಭಿಯಾನ ಆರಂಭವಾಗಿದೆ

|
Google Oneindia Kannada News

ಬೆಂಗಳೂರು, ಮಾರ್ಚ್ 2: ಐಟಿ ಕಂಪನಿಗಳಲ್ಲಿ ಸದ್ಯಕ್ಕೆ ಇರುವ ಕೆಲಸ ಬಿಡುವ ನೋಟಿಸ್ ಅವಧಿಯನ್ನು ಮೂರು ತಿಂಗಳಿಂದ ಒಂದು ತಿಂಗಳಿಗೆ ಇಳಿಸಲು ಕೇಂದ್ರ ಸರಕಾರ ಮಧ್ಯಪ್ರವೇಶಿಸಬೇಕು ಎಂದು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದು, ಅದಕ್ಕೆ ಈ ವರೆಗೆ ಕನಿಷ್ಠ 34 ಸಾವಿರ ಮಂದಿ ಬೆಂಬಲ ಸೂಚಿಸಿದ್ದಾರೆ.

ಲತೀಫ್ ಬನ್ಸಾಲ್ ಎಂಬುವರು ತನ್ನ change.org ಅರ್ಜಿಯನ್ನು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರ ಹೆಸರಿನಲ್ಲಿ ಸಲ್ಲಿಸಿದ್ದು, 90 ದಿನಗಳ ನೋಟಿಸ್ ಅವಧಿಯಲ್ಲಿ ಕೆಲಸ ಮಾಡುವುದಕ್ಕೆ ಸಮರ್ಥನೀಯ ಕಾರಣಗಳಿಲ್ಲ ಎಂದು ಹೇಳಿದ್ದಾರೆ. "ವೈಯಕ್ತಿಕ ಕಾರಣಗಳಿಗಾಗಿ ಕೆಲಸ ಬಿಡುವವರನ್ನು ಮೂರು ತಿಂಗಳ ಕಾಲ ನೋಟಿಸ್ ಅವಧಿಯಲ್ಲಿ ಕೆಲಸ ಮಾಡಬೇಕೆನ್ನುವುದು ಸರಿಯಲ್ಲ" ಎಂದು ಬನ್ಸಾಲ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.['ಬೇಕೆಂತಲೇ ಹೊಸಬರಿಗೆ ಕಡಿಮೆ ಸಂಬಳ ಕೊಡುತ್ತಿವೆ ಐಟಿ ಕಂಪೆನಿಗಳು']

Bandaru Dattatreya

ಯಾವುದೇ ಜವಾಬ್ದಾರಿ ಅಥವಾ ಕೆಲಸವನ್ನು ಮತ್ತೊಬ್ಬ ವ್ಯಕ್ತಿಗೆ ಅಥವಾ ತಂಡಕ್ಕೆ ವರ್ಗಾಯಿಸುವುದಕ್ಕೆ ಒಂದು ತಿಂಗಳ ಅವಧಿ ಸಾಕು. ನಾನು ಮುಖ್ಯವಾದ ಹಾಗೂ ಅಷ್ಟೇನೂ ಮುಖ್ಯವಾದ ಕೆಲಸಗಳನ್ನು ವರ್ಗಾಯಿಸಿದ್ದೇನೆ. ಗರಿಷ್ಠ ಅಂದರೆ ಹದಿನೈದು ದಿನ ಸಾಕು ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಈ ರೀತಿ ಮೂರು ತಿಂಗಳ ಮುಂಚೆ ರಾಜೀನಾಮೆ ನೀಡುವ ವಿಧಾನವೇ ವಾಸ್ತವದ್ದಲ್ಲ. ಏಕೆಂದರೆ ನೋಟಿಸ್ ಅವದಿಯನ್ನು ಸಹಿಸುವುದೇ ಕಷ್ಟ. ಅದರ ಜೊತೆಗೆ ಆ ಉದ್ಯೋಗಿಯನ್ನು ತುಂಬ ಕೆಟ್ಟದಾಗಿ ನಡೆಸಿಕೊಳ್ತಾರೆ. ಯಾರು ನೋಟಿಸ್ ಅವಧಿ ಪೂರೈಸುವುದಿಲ್ಲವೋ ಅವರನ್ನು ಕಪ್ಪು ಪಟ್ಟಿಗೆ ಸೇರಿಸುತ್ತಾರೆ. ಜೊತೆಗೆ ಅನುಭವದ ಪ್ರಮಾಣ ಪತ್ರವನ್ನೂ ಕೊಡೋದಿಲ್ಲ ಎಂದು ಅರ್ಜಿಯಲ್ಲಿ ಬನ್ಸಾಲ್ ಹೇಳಿದ್ದಾರೆ.[ಒಳ್ಳೆ ಜನರು ಕೂಡ ಕೆಲವು ತಪ್ಪು ಮಾಡ್ತಾರೆ: ಇನ್ಫಿ ಮೂರ್ತಿ]

ಮೂರು ತಿಂಗಳ ನೋಟಿಸ್ ಅವಧಿ ಎಂಬುದು ಉದ್ಯೋಗಿಗಳಿಗೆ ಮತ್ತೊಂದು ಕಡೆ ಉತ್ತಮ ಅವಕಾಶ ತಪ್ಪಿಸಲು ಮಾಡಿಕೊಂಡಿರುವ ವಿಧಾನ. ಇದನ್ನು ತಪ್ಪಿಸಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಇದು ಐಟಿ ವಲಯದಲ್ಲಿ ಮಾತ್ರವಲ್ಲ, ಬಿಪಿಒ ಮತ್ತಿತರ ವಲಯದಲ್ಲೂ ಇದೆ. ಇದು ತಪ್ಪಬೇಕು ಎಂದು ಕಂಪನಿಯೊಂದರ ಉದ್ಯೋಗಿ ಮಧುಸೂದನ್ ಅವರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.

English summary
An online petition seeking government intervention to make IT firms reduce the mandatory notice period to four weeks is gaining momentum. At least 34,000 people have supported the demand so far.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X