ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ 500 ಹಾಗೂ 2,000 ನೋಟು ನೋಡಲು ಹೇಗಿದೆ?

500 ಹಾಗೂ 1000 ರು ಮುಖಬೆಲೆ ನೋಟುಗಳ ಬಂದ್ ವಿಚಾರ ಹಾಗೂ ಹೊಸ 500 ಹಾಗೂ 2,000 ರು ಬೆಲೆ ನೋಟುಗಳ ಬಗ್ಗೆ ವಿವರಣೆ ನೀಡಲು ಅರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರು ಸುದ್ದಿಗೋಷ್ಠಿ ಕರೆದಿದ್ದರು.

By Mahesh
|
Google Oneindia Kannada News

ನವದೆಹಲಿ, ನವೆಂಬರ್ 08: ಮಂಗಳವಾರ ಮಧ್ಯರಾತ್ರಿಯಿಂದ 500 ಹಾಗೂ 1000 ರು ಮುಖಬೆಲೆಯ ನೋಟುಗಳು ಬೆಲೆ ಕಳೆದುಕೊಂಡು ಬರೀ ಕಾಗದದ ಚೂರುಗಳಾಗಲಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಈ ನೋಟುಗಳ ಮಾನ್ಯತೆ ರದ್ದು ಪಡಿಸಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಮುಂದಾಗಿರುವುದನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಸ್ವಾಗತಿಸಿದೆ.[500 ಹಾಗೂ 1000 ರು ಕರೆನ್ಸಿ ನೋಟು ಚಲಾವಣೆ ಬಂದ್: ಮೋದಿ]

This is what the new Rs 500 and Rs 2,000 notes look like ; RBI

This is what the new Rs 500 and Rs 2,000 notes look like ; RBI

500 ಹಾಗೂ 1000 ರು ಮುಖಬೆಲೆ ನೋಟುಗಳ ಬಂದ್ ವಿಚಾರ ಹಾಗೂ ಹೊಸ 500 ಹಾಗೂ 2,000 ರು ಬೆಲೆ ನೋಟುಗಳ ಬಗ್ಗೆ ವಿವರಣೆ ನೀಡಲು ಅರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರು ಸುದ್ದಿಗೋಷ್ಠಿ ಕರೆದಿದ್ದರು.[ಎಲ್ಲರ ಕೈಲೂ ದೊಡ್ಡ ನೋಟು , ದೇಶದೆಲ್ಲೆಡೆ ಎಟಿಎಂಗಳಲ್ಲಿ ನೂಕು ನುಗ್ಗಲು]

ಹೊಸ ನೋಟುಗಳನ್ನು ನವೆಂಬರ್ 10ರಿಂದ ಚಲಾವಣೆಗೆ ತರಲಾಗುತ್ತದೆ ಎಂದು ಹೊಸ ನೋಟುಗಳ ಪ್ರತಿಯನ್ನು ಪ್ರದರ್ಶಿಸಿದರು.

This is what the new Rs 500 and Rs 2,000 notes look like ; RBI

This is what the new Rs 500 and Rs 2,000 notes look like ; RBI

ನವೆಂಬರ್ 11ರಿಂದ ಎಲ್ಲಾ ಎಟಿಎಂಗಳಲ್ಲಿ ಪ್ರತಿ ದಿನ ವ್ಯವಹಾರದ ಮಿತಿ 2,000 ರು ಗಳಿಗೆ ಸೀಮಿತವಾಗಲಿದೆ. ಈಗ ಜನ ಸಾಮಾನ್ಯರು ತಮ್ಮ ಬಳಿ ಇರುವ 500 ಹಾಗೂ 1,000 ರು ಗಳನ್ನು ಬ್ಯಾಂಕ್ ,ಅಂಚೆ ಕಚೇರಿ, ಎಟಿಎಂಗಳಲ್ಲಿ ನೀಡಿ 100 ರು ನೋಟುಗಳಿಗೆ ಬದಲಾಯಿಸಿಕೊಳ್ಳಬಹುದು.[ನೋಟಿಗೆ ಕಡಿವಾಣ : ಎಲ್ಲರೂ ತಿಳಿಯಬೇಕಾಗಿರುವುದೇನು?]

ಊರ್ಜಿತ್ ಪಟೇಲ್ : ನಕಲಿ ನೋಟು ಹಾವಳಿ ತಡೆಗಟ್ಟಲು ಸರ್ಕಾರ ತೆಗೆದುಕೊಂಡಿರುವ ಕ್ರಮಕ್ಕೆ ಆರ್ ಬಿಐ ಸಂಪೂರ್ಣ ಸಹಕಾರ ನೀಡಲಿದೆ. ನೋಟುಗಳ ಉತ್ಪಾದನೆ ಹೆಚ್ಚಳ ಮಾಡುತ್ತಿದ್ದೇವೆ. ಹೊಸ ನೋಟುಗಳು ಹೆಚ್ಚು ಸುರಕ್ಷಿತವಾಗಿದ್ದು, ನವೆಂಬರ್ 10ರಿಂದ ಚಲಾವಣೆಗೆ ಬರಲಿವೆ ಎಂದು ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಹೇಳಿದರು. [ನಕಲಿ ನೋಟು ಜಾಲ ಮಟ್ಟಹಾಕಿದ ನರೇಂದ್ರ ಮೋದಿ]

ಹೊಸ ನೋಟುಗಳು ಹಾಗೂ ನಕಲಿ ನೋಟುಗಳ ನಡುವಿನ ಗೊಂದಲಕ್ಕೆ ತೆರೆ ಎಳೆದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಅವರು ಮಾತನಾಡಿ, ಈ ಹೊಸ 500 ಹಾಗೂ 2,000 ಮುಖಬೆಲೆ ನೋಟುಗಳು 'ಮಹಾತ್ಮಾ ಗಾಂಧಿ ಸರಣಿ' ಬ್ಯಾಂಕ್ ನೋಟುಗಳು ಎಂದು ಹೆಸರು ಪಡೆಯಲಿವೆ. ನವೆಂಬರ್ 10ರಿಂದ ಚಲಾವಣೆಗೊಳ್ಳಲಿದೆ. [ಮೋದಿಗೆ ಹ್ಯಾಟ್ಸಾಫ್ ಎಂದ ರಜನಿ]

ಮಂಗಳವಾರ ಮಧ್ಯರಾತ್ರಿಯ ನಂತರ 500 ಹಾಗೂ 1000 ನೋಟು ಚಲಾವಣೆ ಮಾಡಿದರೆ ಅಪಾಯಕ್ಕೆ ಆಹ್ವಾನ ನೀಡಿದಂತೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಹೆಚ್ಚಿನ ಮಾಹಿತಿಗೆ ದೆಹಲಿ ಹಾಗೂ ಮುಂಬೈನಲ್ಲಿ ಆರ್ ಬಿಐ ಕಂಟ್ರೋಲ್ ರೂಮ್ ತೆರೆಯಲಿದ್ದು ಕೆಲ ದಿನಗಳ ಮಟ್ಟಿಗೆ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ.

ಹೊಸ 500 ರು ನೋಟಿನಲ್ಲಿ ಕೆಂಪುಕೋಟೆ ಚಿತ್ರವಿದೆ. ಸ್ವಚ್ಛಭಾರತ ಚಿನ್ಹೆ ಇದೆ.ಜತೆಗೆ ಎಂದಿನಂತೆ ಮಹಾತ್ಮಾ ಗಾಂಧೀಜಿ ಚಿತ್ರವಿರಲಿದೆ. 2000 ರು ನೋಟಿನಲ್ಲಿ ಮಂಗಳಯಾನದ ಚಿತ್ರವಿದೆ, ಸ್ವಚ್ಛಭಾರತ ಚಿನ್ಹೆ, ಮಹಾತ್ಮಾ ಗಾಂಧಿ ಚಿತ್ರವಿದೆ.

English summary
Prime Minister Narendra Modi announced today that the Rs 500 and Rs 1,000 notes will be pulled out of circulation from midnight. He also announced that the new notes of Rs 500 and Rs 2,000 would be printed soon and the Reserve Bank of India had approved of the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X