ಸರ್ಚ್ ಇಂಜಿನ್ ಗೂಗಲ್ ಹೊಸ ಲೋಗೋ ಸುತ್ತಾ ಪ್ರದಕ್ಷಿಣೆ
ಬೆಂಗಳೂರು, ಸೆ. 02: ಸರ್ಚ್ ಇಂಜಿನ್ ದಿಗ್ಗಜ ಗೂಗಲ್ ತನ್ನ ಸರ್ಚ್ ಇಂಜಿನ್ ಲೋಗೋ ಬದಲಾಯಿಸಿದೆ. ಹೊಚ್ಚ ಹೊಸ ಫಾಂಟ್ ನೊಂದಿಗೆ ಲೋಗೋ ವಿಶ್ವದೆಲ್ಲೆಡೆ ಬ್ರೌಸರ್ ಗಳಲ್ಲಿ ಕಾಣಿಸಿಕೊಂಡಿದೆ. ಇತ್ತೀಚೆಗಷ್ಟೇ ಆರಂಭವಾದ ಅಲ್ಫಾಬೆಟ್ ಕಂಪನಿಯ ಭಾಗವಾಗಿರುವ ಗೂಗಲ್ 2013ರ ನಂತರ ಇದೇ ಮೊದಲ ಬಾರಿಗೆ ಹೊಸ ಚಿನ್ಹೆ ಪಡೆದುಕೊಂಡಿದೆ.
ವಿಶೇಷ
ದಿನಗಳಲ್ಲಿ
ಗೂಗಲ್
ಡೂಡ್ಲ್
ಮೂಲಕ
ಸಂಭ್ರಮಾಚರಣೆ
ಮಾಡುವುದನ್ನು
ಗಮನಿಸಿರಬಹುದು.
ಈಗ
ಹೊಸ
ಲೋಗೋ
ಕೂಡಾ
ಡೂಡ್ಲ್
ಮಾದರಿಯಲ್ಲಿ
ವಿಡಿಯೋ
ಮೂಲಕ
ಜನರಿಗೆ
ಪರಿಚಯ
ನೀಡಲಾಗುತ್ತಿದೆ.
ಹೊಸ
ಲೋಗೋ
ಬಗ್ಗೆ
ಕೆಲ
ಪ್ರಮುಖ
ಅಂಶಗಳು
ಇಲ್ಲಿವೆ.
*
1998ರಿಂದ
ಇಲ್ಲಿ
ತನಕ
ಸುಮಾರು
6
ಬಾರಿ
ಗೂಗಲ್
ತನ್ನ
ಲೋಗೋ
ಬದಲಾಯಿಸಿದೆ.
ಈಗಿನದು
7ನೇ
ಲೋಗೋವಾಗಿದ್ದು,
ಮೊದಲ
ಬಾರಿಗೆ
ಹೊಸ
ಫಾಂಟ್
ಬಳಕೆ
ಮಾಡಲಾಗಿದೆ.
*
ಹೊಸ
ಲೋಗೋ
ಬಗ್ಗೆ
ಮಾಹಿತಿ
ನೀಡಲು
ಗೂಗಲ್
ಡೂಡ್ಲ್
ಬಳಸಿದ್ದು
ಇದೇ
ಮೊದಲು.
*
ರೇಖಾಗಣಿತದ
ಆಧಾರ
ಹೊಂದಿದ್ದರೂ
ಶಾಲಾ
ಪುಸ್ತಕದ
ಅಕ್ಷರಗಳ
ಮುದ್ರಣದಂತೆ
ಸರಳವಾಗಿದೆ.
*
e
ಅಕ್ಷರವನ್ನು
ಮೊದಲ
ಲೋಗೋವಿನಂತೆ
ಉಳಿಸಿಕೊಳ್ಳಲಾಗಿದೆ.
ಸ್ವಲ್ಪ
ಬಾಗಿರುವ
ಈ
ಅಕ್ಷರವು
ಗೂಗಲ್
ಸದಾ
ಕಾಲ
ಬದಲಾವಣೆಗೆ
ವಿಶಿಷ್ಟತೆಗೆ
ಒಗ್ಗಿಕೊಳ್ಳುತ್ತದೆ
ಎಂಬುದನ್ನು
ಸೂಚಿಸುತ್ತದೆ.
*
ಹೊಸ
ಲೋಗೋ
ಮಾದರಿ
ಜೊತೆಗೆ
new
san-serif
typedace
ಫಾಂಟ್
ಬಳಸಿ
ಪ್ರಾಡೆಕ್ಟ್
ಸಾನ್ಸ್
ಫಾಂಟ್
ಗಳನ್ನು
ಎಲ್ಲಾ
ಗೂಗಲ್
ಉತ್ಪನ್ನಗಳಿಗೂ
ಬಳಸಲು
ಯೋಜಿಸಲಾಗಿದೆ.
*
ಗೂಗಲ್
ನ
ಹಳೆ
ಲೋಗೋ
14,000
ಬೈಟ್ಸ್
ಇತ್ತು.
ಹೊಸ
ಲೋಗೋ
305
ಬೈಟ್ಸ್
ಇದೆ.
*
ಮೊಬೈಲಿನಲ್ಲಿ
ಬ್ಯಾಡ್
ವಿಂಡ್ತ್
ಅನುಗುಣವಾಗಿ
ಲೋಗೋ
ಚಿನ್ಹೆ
ಬದಲಾಗುತ್ತದೆ.
* ಗೂಗಲ್ ಲೋಗೋದಲ್ಲಿ ನೀಲಿ, ಹಸಿರು, ಹಳದಿ, ಕೆಂಪು ಬಣ್ಣವನ್ನು ಉಳಿಸಿಕೊಳ್ಳಲಾಗಿದೆ.
* ಹೊಸ ಲೋಗೋದ ಶಾರ್ಟ್ ವರ್ಷನ್ ನಲ್ಲೂ ದೊಡ್ಡ ಲೋಗೋವಿನ ಬಣ್ಣಗಳನ್ನು ಬಳಸಿಕೊಳ್ಳಲಾಗಿದೆ. ಈ ಹಿಂದಿನಂತೆ g ಬಳಸುತ್ತಿಲ್ಲ.
ಲೋಗೋ
ಬದಲಾವಣೆ
ಬಗ್ಗೆ
ವಿಡಿಯೋ
ನೋಡಿ:
(ಒನ್ ಇಂಡಿಯಾ ಸುದ್ದಿ)