ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಸಿಎಸ್ ನಿಂದ 16,000 ಕೋಟಿ ರೂ. ಷೇರು ಮರು ಖರೀದಿ; ಏನಿದು?

16,000 ಕೋಟಿ ಮೌಲ್ಯದ ಷೇರುಗಳನ್ನು ಮರು ಖರೀದಿ ಮಾಡಲು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ಆಡಳಿತ ಮಂಡಳಿ ನಿರ್ಧರಿಸಿದೆ. ಈ ಮೂಲಕ ಇನ್ಫೋಸಿಸ್, ವಿಪ್ರೋ ಸೇರಿದಂತೆ ಹಲವು ಐಟಿ ಕಂಪೆನಿಗಳ ಮೇಲೆ ಟಾಟಾ ಪರೋಕ್ಷ ಒತ್ತಡ ಹೇರಿದೆ.

By Sachhidananda Acharya
|
Google Oneindia Kannada News

ಬೆಂಗಳೂರು, ಫೆಬ್ರವರಿ 20: ಮಾರುಕಟ್ಟೆಯಲ್ಲಿರುವ 16,000 ಕೋಟಿ ಮೌಲ್ಯದ ಷೇರುಗಳನ್ನು ಮರು ಖರೀದಿ (ಬೈ ಬ್ಯಾಕ್) ಮಾಡಲು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಆಡಳಿತ ಮಂಡಳಿ ನಿರ್ಧರಿಸಿದೆ. ಈ ಮೂಲಕ ಇನ್ಫೋಸಿಸ್, ವಿಪ್ರೋ ಸೇರಿದಂತೆ ಹಲವು ಐಟಿ ಕಂಪೆನಿಗಳ ಮೇಲೆ ಟಾಟಾ ಪರೋಕ್ಷ ಒತ್ತಡ ಹೇರಿದೆ.[ಏರೋ ಇಂಡಿಯಾ: ಕ್ಷಿಪಣಿ ಬಿಡಿಭಾಗ ಉತ್ಪಾದನೆಗೆ ಟಾಟಾ ರೇತಿಯಾನ್ ಡೀಲ್]

ಟಿಸಿಎಸ್ ನಿರ್ಗಮಿತ ಸಿಇಒ ಮತ್ತು ಎಂಡಿ ನಟರಾಜನ್ ಚಂದ್ರಶೇಖರನ್ ತಮ್ಮ ಕೊನೆಯ ದಿನದ ಅಧಿಕಾರವಧಿಯಲ್ಲಿ ಈ ಘೋಷಣೆ ಮಾಡಿದ್ದಾರೆ. ಅವರು ನಾಳೆಯಿಂದ ಟಾಟಾ ಸಮೂಹ ಸಂಸ್ಥೆಯ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲಿದ್ದಾರೆ. ಟಿಸಿಎಸ್ ಆಡಳಿತ ಮಂಡಳಿ ಬೈ ಬ್ಯಾಕ್ ಘೋಷಣೆ ಮಾಡುತ್ತಿದ್ದಂತೆ ಬಾಂಬೆ ಷೇರು ಮಾರುಕಟ್ಟೆಯಲ್ಲಿ ಟಿಸಿಎಸ್ ಷೇರುಗಳ ಮೌಲ್ಯ ಶೇಕಡಾ 4 ರಷ್ಟು ಹೆಚ್ಚಾಗಿದ್ದು 2,506 ರೂಪಾಯಿಗೆ ಏರಿಕೆ ಕಂಡಿದೆ.[2 ಲಕ್ಷ ರುಪಾಯಿ ಮೇಲಿನ ಆಭರಣದ ನಗದು ಖರೀದಿಗೆ ಶೇ 1ರಷ್ಟು ತೆರಿಗೆ]

ಬೈ ಬ್ಯಾಕ್ ಯಾಕೆ?

ಬೈ ಬ್ಯಾಕ್ ಯಾಕೆ?

ಸಾಮಾನ್ಯವಾಗಿ ಷೇರು ಮಾರುಕಟ್ಟೆಯಲ್ಲಿ ಕಂಪೆನಿಯ ಷೇರುಗಳ ಮೌಲ್ಯ ಕುಸಿತವಾದಾಗ ಕಂಪೆನಿಯೇ ಷೇರುಗಳನ್ನು ಖರೀದಿಸುವುದು ರೂಢಿಯಲ್ಲಿದೆ. ಅದರಲ್ಲೂ ಹೆಚ್ಚಿನ ನಗದು ಹೊಂದಿರುವ ಐಟಿ ಕಂಪೆನಿಗಳಲ್ಲಿ ಈ ರೀತಿಯ ಕ್ರಮಗಳು ಸಾಮಾನ್ಯ. ಇದೀಗ ಅಪನಗದೀಕರಣ ಮತ್ತು ಎಚ್1-ಬಿ ವೀಸಾ ಸಮಸ್ಯೆಯ ನಂತರ ಮಾರುಕಟ್ಟೆಯಲ್ಲಿ ಷೇರುಗಳ ಬೆಲೆ ಕುಸಿತವಾಗುತ್ತಿದ್ದಂತೆ ಐಟಿ ಕಂಪೆನಿಗಳು ಷೇರು ಮರು ಖರೀದಿಗೆ ಹೊರಟಿವೆ.

ಪ್ರತಿಸ್ಪರ್ಧಿಗಳಲ್ಲೂ ಇದೇ ಚರ್ಚೆ

ಪ್ರತಿಸ್ಪರ್ಧಿಗಳಲ್ಲೂ ಇದೇ ಚರ್ಚೆ

ಈಗಾಗಲೇ ವಿಪ್ರೋ ಮತ್ತು ಇನ್ಫೋಸಿಸ್ ನಂಥ ಸಾಫ್ಟ್ ವೇರ್ ದೈತ್ಯ ಕಂಪೆನಿಗಳಲ್ಲಿ ಷೇರು ಬೈ ಬ್ಯಾಕ್ ಚರ್ಚೆಯಲ್ಲಿದೆ. ಇನ್ಫೋಸಿಸ್ ಮಾಜಿ ಮುಖ್ಯಸ್ಥರುಗಳಾದ ಟಿ.ವಿ ಮೋಹನ್ ದಾಸ್ ಪೈ ಮತ್ತು ವಿ ಬಾಲಕೃಷ್ಣನ್ ಕಂಪೆನಿಯ ಷೇರುಗಳ ಬೈ ಬ್ಯಾಕ್ ಮಾಡುವಂತೆ ಸಲಹೆ ನೀಡಿದ್ದಾರೆ. ಇದೇ ವೇಳೆಗೆ ಟಿಸಿಎಸ್ ಬೈ ಬ್ಯಾಕ್ ಘೋಷಣೆಯನ್ನು ಮಾಡಿಯೇ ಬಿಟ್ಟಿದೆ. ಇದರಿಂದ ಉಳಿದ ಕಂಪೆನಿಗಳೂ ಇದೇ ನಡೆಯನ್ನು ಅನುಸರಿಸುವ ಅನಿವಾರ್ಯತೆಯನ್ನು ಟಿಸಿಎಸ್ ಸೃಷ್ಟಿಸಿದೆ.

ಕಂಪೆನಿಗೂ ಲಾಭ

ಕಂಪೆನಿಗೂ ಲಾಭ

ಷೇರು ಬೈ ಬ್ಯಾಕ್ ಮಾಡುವುದರಿಂದ ಷೇರುದಾರರಿಗೆ ಹಣ ನೀಡಿದಂತಾಗುತ್ತದೆ. ಇನ್ನೊಂದು ಕಡೆಯಲ್ಲಿ ಟ್ಯಾಕ್ಸ್ ಉಳಿಸಲೂ ಕಂಪೆನಿಗೆ ಇದು ಸಹಾಯಕವಾಗುತ್ತದೆ. ಕೈಯಲ್ಲಿರುವ ಹಣವನ್ನು ಕಂಪೆನಿ ವಿನಿಯೋಗಿಸುವುದರಿಂದ ನಿವ್ವಳ ಲಾಭ ಇಳಿಕೆಯಾಗುತ್ತದೆ. ಇದರಿಂದ ತೆರಿಗೆಯೂ ಕಡಿಮೆಯಾಗುತ್ತದೆ.

ಭರ್ಜರಿ ಬೆಲೆ

ಭರ್ಜರಿ ಬೆಲೆ

ಒಟ್ಟು 5.6 ಕೋಟಿ ಷೇರುಗಳನ್ನು 2,850ರೂಪಾಯಿಯ ಬೆಲೆಯಲ್ಲಿ ಟಿಸಿಎಸ್ ಕಂಪೆನಿ ಖರೀದಿಸಲಿದೆ. ಸದ್ಯದ ಮಾರುಕಟ್ಟೆ ದರಕ್ಕಿಂತ ಇದು ಶೇಕಡಾ 18ರಷ್ಟು ಹೆಚ್ಚಾಗಿದೆ. ಇದರಿಂದ ಷೇರು ಮಾರುಕಟ್ಟೆಯಲ್ಲಿ ಕಂಪೆನಿಯ ಷೇರುಗಳ ಮೌಲ್ಯದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

ಕಾಗ್ನಿಝಂಟ್ ಪ್ರತಿತಂತ್ರ

ಕಾಗ್ನಿಝಂಟ್ ಪ್ರತಿತಂತ್ರ

ಸದ್ಯ ಟಾಟಾ ಕಂಪೆನಿ ಬಳಿ 40,000 ಕೋಟಿ ನಗದು ಹಣವಿದ್ದರೆ, ಇನ್ಫೋಸಿಸ್ ಬಳಿ 34,000 ಕೋಟಿ ಹಾಗೂ ವಿಪ್ರೋ ಬಳಿಯಲ್ಲಿ 33,000 ಕೋಟಿ ಹಣವಿದೆ. ಇವುಗಳನ್ನು ಷೇರು ಬೈ ಬ್ಯಾಕ್ ಮಾಡಲು ಉಪಯೋಗಿಸಿಕೊಳ್ಳಬಹುದಾಗಿದೆ. ಇತ್ತೀಚೆಗೆ ಟಿಸಿಎಸ್ ಪ್ರತಿಸ್ಪರ್ಧಿ ಕಾಗ್ನಿಝಂಟ್ ಮುಂದಿನ ಎರಡು ವರ್ಷಗಳಲ್ಲಿ 22,700 ಕೋಟಿ ಹಣವನ್ನು ಷೇರುದಾರರಿಗೆ ಮರಳಿಸುವುದಾಗಿ ಹೇಳಿದೆ. ಷೇರು ಬೈ ಬ್ಯಾಕ್ ಮತ್ತು ಡಿವಿಡೆಂಡ್ ರೂಪದಲ್ಲಿ ಇದು ಷೇರುದಾರರ ಕೈ ಸೇರಲಿದೆ.

English summary
The board of Tata Consultancy Services (TCS) announced that it will buyback or repurchase its shares up to Rs.16,000 crore. This share buyback announcement from a IT giant will put pressure on other top IT companies to follow suit with similar offers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X