ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಟಾ ಮೋಟಾರ್ಸ್​ ನಿಂದ 1500 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್

ಟಾಟಾ ಮೋಟಾರ್ಸ್​ ಸಂಸ್ಥೆ ತನ್ನ ವ್ಯವಸ್ಥಾಪಕ ದರ್ಜೆಯಲ್ಲಿ ಉದ್ಯೋಗ ಕಡಿತ ಮಾಡಲು ನಿರ್ಧರಿಸಿದ್ದು, ಸುಮಾರು 1500 ಉದ್ಯೋಗಿಗಳಿಗೆ ಪಿಂಕ್​ ಸ್ಲಿಪ್​ ನೀಡಿದೆ.

By Mahesh
|
Google Oneindia Kannada News

ಮುಂಬೈ, ಮೇ 24: ಟಾಟಾ ಮೋಟಾರ್ಸ್​ ಸಂಸ್ಥೆ ತನ್ನ ವ್ಯವಸ್ಥಾಪಕ ದರ್ಜೆಯಲ್ಲಿ ಉದ್ಯೋಗ ಕಡಿತ ಮಾಡಲು ನಿರ್ಧರಿಸಿದ್ದು, ಸುಮಾರು 1500 ಉದ್ಯೋಗಿಗಳಿಗೆ ಪಿಂಕ್​ ಸ್ಲಿಪ್​ ನೀಡಿದೆ.

ಕಂಪನಿಯಲ್ಲಿರುವ ವೈಟ್ ಕಾಲರ್ ಶ್ರೇಣಿಯ 13 ಸಾವಿರಕ್ಕೂ ಹೆಚ್ಚು ವ್ಯವಸ್ಥಾಪಕ ದರ್ಜೆಯ ಹುದ್ದೆಗಳ ಪೈಕಿ ಶೇ. 10 ರಿಂದ 12 ಉದ್ಯೋಗಗಳನ್ನು ಕಡಿತ ಮಾಡಲಾಗಿದೆ ಎಂದು ಕಂಪನಿಯ ಎಂಡಿ ಮತ್ತು ಸಿಇಒ ಗುಂಟೆರ್​ ಬುಟ್ಸ್ಚೆಕ್ ತಿಳಿಸಿದ್ದಾರೆ.

Tata Motors cuts up to 1,500 managerial jobs

2016-17ನೇ ಆರ್ಥಿಕ ವರ್ಷದ ಕಂಪನಿಯ ಹಣಕಾಸು ವ್ಯವಹಾರದ ಕುರಿತು ಮಾಹಿತಿ ನೀಡಿದ ನಂತರ ಉದ್ಯೋಗ ಕಡಿತ ಮಾಡಿರುವ ನಿರ್ಧಾರವನ್ನು ಪ್ರಕಟಿಸಿದರು. ಕಂಪನಿಯ ತೀರ್ಮಾನದಿಂದ ಬ್ಲೂ ಕಾಲರ್​ ಕೆಲಸಗಾರರು ಅಥವಾ ಸಾಮಾನ್ಯ ಕಾರ್ಮಿಕ ವರ್ಗಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ.

2017ನೇ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಎಲ್​ ಆಂಡ್​ ಟಿ ಕಂಪನಿ 14 ಸಾವಿರ ಉದ್ಯೋಗಿಗಳಿಗೆ ಪಿಂಕ್​ ಸ್ಲಿಪ್​ ನೀಡಿತ್ತು. ಎಚ್​ಡಿಎಫ್​ಸಿ ಬ್ಯಾಂಕ್​ ಸಹ 10 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿತ್ತು. ಐಟಿ ಕಂಪನಿಗಳಾದ ಇನ್ಫೋಸಿಸ್, ವಿಪ್ರೋ, ಟಿಸಿಎಸ್ ಕಂಪನಿಗಳು ಈಗಾಗಲೇ ಒಂದು ಸುತ್ತಿನ ಪಿಂಕ್ ಸ್ಲಿಪ್ ಜಾಥ ನಡೆಸಿವೆ. (ಪಿಟಿಐ)

English summary
Tata Motors today said it has reduced its managerial workforce by up to 1,500 people domestically as part of an organisational restructuring exercise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X