ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಡಿಕೇಟ್ ಬ್ಯಾಂಕಿನ ಷೇರು ಕುಸಿಯುತ್ತಿದೆ ಎಚ್ಚರ!

By Mahesh
|
Google Oneindia Kannada News

ಬೆಂಗಳೂರು, ಜುಲೈ 29: ಕರ್ನಾಟಕದ ಮಣಿಪಾಲ್ ಮೂಲದ ಸಿಂಡಿಕೇಟ್ ಬ್ಯಾಂಕಿಗೆ ಟೈಂ ಸರಿಯಿಲ್ಲ, ಸಿಂಡಿಕೇಟ್ ಬ್ಯಾಂಕ್ ಷೇರು ಹೊಂದಿರುವವರಿಗೂ ಇದು ಕೆಟ್ಟಕಾಲ. ಬ್ಯಾಂಕಿನ ಮೊದಲ ತ್ರೈಮಾಸಿಕ ಫಲಿತಾಂಶ ಡಲ್ ಆದ ಬೆನ್ನಲ್ಲೇ ಬುಧವಾರ ಷೇರುಗಳು ನೆಲಕ್ಕೆ ಕುಸಿಯುತ್ತಿವೆ.

ಸಿಂಡಿಕೇಟ್ ಬ್ಯಾಂಕ್ ತನ್ನ ಮೊದಲ ತ್ರೈಮಾಸಿಕ ವರದಿಯಲ್ಲಿ ಶೇ 38ರಷ್ಟು ನಿವ್ವಳ ಲಾಭದಲ್ಲಿ ನಷ್ಟ ಅನುಭವಿಸಿದೆ. ಹೀಗಾಗಿ ಬ್ಯಾಂಕಿನ ಷೇರುಗಳು ಬುಧವಾರ ಸುಮಾರು ಶೇ 9ರಷ್ಟು ಆರಂಭಿಕ ಕುಸಿತ ಕಂಡಿದೆ. ನಂತರ ಚೇತರಿಕೆಯ ಹಾದಿಯಲ್ಲಿದ್ದರೂ ಇಳಿಕೆ ಮುಂದುವರೆದಿದೆ.

Syndicate Bank shares tumble 9% as Q1 net dips

ಬಿಎಸ್ ಇನಲ್ಲಿ 90.15ರು ಮೌಲ್ಯದಂತೆ 9.03% ಕುಸಿದಿದ್ದರೆ, ಎನ್ ಎಸ್ ಇನಲ್ಲಿ 9% ಕುಸಿತ ಕಂಡು 90 ರು ಆಸುಪಾಸಿನಲ್ಲಿ ವಹಿವಾಟು ನಡೆಸಿದೆ. ಬುಧವಾರ ಮಧ್ಯಾಹ್ನದ ವೇಳೆಗೆ ಈ ಪರಿಸ್ಥಿತಿ ಕಂಡು ಬಂದಿದ್ದು, ಕಳೆದ 52 ವಾರಗಳಲ್ಲೇ ಕಾಣದ ಕಡಿಮೆ ಮೊತ್ತಕ್ಕೆ ಷೇರುಗಳು ಕುಸಿದಿರುವುದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ. [ಷೇರುಪೇಟೆಯಲ್ಲಿ ಸಿಂಡಿಕೇಟ್ ಬ್ಯಾಂಕಿನ ವಹಿವಾಟು ಅಂಕಿ ಅಂಶ]

ಸಿಂಡಿಕೇಟ್ ಬ್ಯಾಂಕಿನ ಮಾರುಕಟ್ಟೆ ಮೌಲ್ಯ ಕೂಡಾ 592.54 ಕೋಟಿ ರು ಕಳೆದುಕೊಂಡು 5,968.46 ಕೋಟಿ ರುಗೆ ಕುಸಿದಿದೆ.

ದೇಶದ ಅತ್ಯಂತ ಹಳೆಯ ವಾಣಿಜ್ಯ ಬ್ಯಾಂಕ್ ಗಳಲ್ಲಿ ಒಂದೆನಿಸಿರುವ ಸಿಂಡಿಕೇಟ್ ಬ್ಯಾಂಕ್ ತನ್ನ ಮೊದಲ ತ್ರೈಮಾಸಿಕದಲ್ಲಿ ನಿವ್ವಳ ಲಾಭದಲ್ಲಿ 301.98 ಕೋಟಿ ರು ನಂತೆ ಶೇ 38ರಷ್ಟು ಇಳಿಕೆ ಕಂಡಿತ್ತು. ಕಳೆದ ವರ್ಷ 2014-15ರಲ್ಲಿ ಏಪ್ರಿಲ್ -ಜೂನ್ ಅವಧಿಯಲ್ಲಿ 485.42 ಕೋಟಿ ರು ದಾಖಲಿಸಿತ್ತು.

ಜೂನ್ ತ್ರೈಮಾಸಿಕದಲ್ಲಿ 6,323.42 ಕೋಟಿ ರುಗೆ ಆದಾಯ ಏರಿಕೆಯಾಗಿದ್ದು ವರ್ಷದ ಕೆಳಗೆ 5,523 ಕೋಟಿ ರು ಪಡೆದುಕೊಂಡಿತ್ತು ಎಂದು ಬಿಎಸ್ ಇ ಗೆ ಸಂಸ್ಥೆ ತಿಳಿಸಿದೆ. (ಪಿಟಿಐ)

English summary
Shares of Syndicate Bank plunged 9 per cent today(July 29) after the company reported 38 per cent decline in net profit for the first quarter of the fiscal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X