ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಧಾ ಗೋಪಾಲಕೃಷ್ಣನ್ ಇನ್ಫಿಯ ಅತಿ ಹೆಚ್ಚು ಷೇರುಗಳ ಒಡತಿ

By Mahesh
|
Google Oneindia Kannada News

ಬೆಂಗಳೂರು, ಜ.12: ಇನ್ಫೋಸಿಸ್ ಸಹ ಸ್ಥಾಪಕ ಎಸ್ ಗೋಪಾಲಕೃಷ್ಣನ್ ಅವರ ಪತ್ನಿ ಸುಧಾ ಗೋಪಾಲಕೃಷ್ಣನ್ ಅವರ ಬಳಿ ಅತಿ ಹೆಚ್ಚು ಇನ್ಫೋಸಿಸ್ ಷೇರುಗಳನ್ನು ಹೊಂದಿದ್ದು ರೋಹನ್ ಮೂರ್ತಿ ಅವರನ್ನು ಹಿಂದಿಕ್ಕಿದ್ದಾರೆ.

ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆಯ ಪ್ರವರ್ತಕ ಷೇರುದಾರರ ಪಟ್ಟಿಯಲ್ಲಿ ಸುಧಾ ಗೋಪಾಲಕೃಷ್ಣನ್ ಅವರು ಅಗ್ರಸ್ಥಾನಕ್ಕೇರಿದ್ದಾರೆ. ಸುಧಾ ಅವರ ಬಳಿ ಇರುವ ಒಟ್ಟು ಷೇರುಗಳ ಸಂಖ್ಯೆ 2,45,89,250 ದಾಟುತ್ತದೆ.[ಇನ್ಫೋಸಿಸ್ಸಿಗೆ ಶುಭ ಶುಕ್ರವಾರ, ಅಪರಿಮಿತ ಲಾಭ!]

ಅಕ್ಟೋಬರ್-ಡಿಸೆಂಬರ್ 2014ರ ತ್ರೈಮಾಸಿಕದ ಗಣತಿಯಂತೆ ಒಟ್ಟಾರೆ ಷೇರುಗಳಿಗೆ ಹೋಲಿಸಿದರೆ ಶೇ.2.14 ಷೇರುಗಳನ್ನು ಸುಧಾ ಅವರು ಹೊಂದಿದ್ದಾರೆ.ಸುಧಾ ಅವರ ಬಳಿಕ ಎನ್.ಆರ್.ನಾರಾಯಣಮೂರ್ತಿ ಅವರ ಮಗ ರೋಹನ್ ಮೂರ್ತಿ ಅವರು ಎರಡನೇ ಸ್ಥಾನದಲ್ಲಿದ್ದು, ಶೇ.1.38 ಷೇರುಗಳನ್ನು ಹೊಂದಿದ್ದಾರೆ.

Sudha Gopalakrishnan now largest promoter shareholder in Infosys

ಸ್ಥಾಪಕರು, ಅವರ ಕುಟುಂಬ ಸದಸ್ಯರು ಸೇರಿದಂತೆ ಇನ್ಫೋಸಿಸ್‌ನ ಪ್ರವರ್ತಕರು ಶೇ.13.08 ಷೇರುಗಳನ್ನು ಹೊಂದಿದ್ದಾರೆ ಎಂದು ಇನ್ಫೋಸಿಸ್ ಕಂಪನಿ ತಿಳಿಸಿದೆ. ಮೂರ್ತಿ ಕುಟುಂಬ ಶೇ 3.44 ಷೇರು ಪಾಲು ಹೊಂದಿದ್ದರೆ, ನಿಲೇಕಣಿ ಕುಟುಂಬ ಶೇ 2.29 ರಷ್ಟು ಪಾಲು ಹೊಂದಿದೆ. [ಇನ್ಫಿ ಮೂರ್ತಿ ಮಗ ರೋಹನ್ ಈಗ ಉಪಾಧ್ಯಕ್ಷ]

ಕಳೆದ ಡಿಸೆಂಬರ್ ತೈಮಾಸಿಕದ ಕೊನೆಗೆ ಇನ್ಫೋಸಿಸ್ ಸಹ ಸ್ಥಾಪಕ ನಾರಾಯಣ ಮೂರ್ತಿ, ನಂದನ್ ನಿಲೇಕಣಿ, ದಿನೇಶ್ ಕೆ, ಎಸ್ ಡಿ ಶಿಬುಲಾಲ್ ಅವರ ಪತ್ನಿ ಕುಮಾರಿ ಶಿಬುಲಾಲ್ ಹಾಗೂ ಇತರೆ ಕುಟುಂಬ ಸದಸ್ಯರೆಲ್ಲರೂ ಸೇರಿ ಸುಮಾರು 6,484 ಕೋಟಿ ರು ಮೌಲ್ಯದ 32.6 ಮಿಲಿಯನ್ ಷೇರುಗಳನ್ನು ಮಾರಾಟ ಮಾಡಿದರು. ಗೋಪಾಲಕೃಷ್ಣನ್ ಅವರು ಶೇ 3.41 ರಷ್ಟು ಪಾಲು ಹೊಂದಿದ್ದರು. (ಪಿಟಿಐ)

English summary
Sudha Gopalakrishnan, wife of Infosys co-founder S Gopalakrishnan, is the largest promoter shareholder at the country's second-biggest software services firm with 2.14 percent stake at the end of October-December 2014 quarter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X