ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

300 ಕೋಟಿ ರುಪಾಯಿ ಮಾರಾಟ ಮಾಡಿದ ಒಂದು ರುಪಾಯಿ ಕ್ಯಾಂಡಿ

ಒಂದು ರುಪಾಯಿ ಕ್ಯಾಂಡಿಯನ್ನು ಅಂಗಡಿಗಳಲ್ಲಿ ಚಿಲ್ಲರೆ ಬದಲಿಗೆ ಕೊಡುವುದಕ್ಕೆ ಅಂತ ಇಟ್ಟುಕೊಂಡಿರುತ್ತಾರೆ. ಆ ಲೆಕ್ಕಾಚಾರವನ್ನೇ ಬದಲಿಸಿದ 'ಪಲ್ಸ್' ಭಾರೀ ವ್ಯಾಪಾರವನ್ನೇ ಮಾಡಿದೆ. ಅದರ ಯಶಸ್ಸಿನ ಗಾಥೆ ತಿಳಿಯಲು ಮುಂದೆ ಓದಿ

|
Google Oneindia Kannada News

ಬೆಂಗಳೂರು, ಮಾರ್ಚ್ 8: ಒಂದು ರುಪಾಯಿ ಬೆಲೆಯ ಈ ಕ್ಯಾಂಡಿ ಜಾದೂ ಮಾಡಿದೆ. ಈಗ ಹೇಳುತ್ತಿರುವುದು 'ಪಲ್ಸ್' ಬಗ್ಗೆ. ನೂರಿಪ್ಪತ್ತೈದು ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಪಲ್ಸ್ 300 ಕೋಟಿ ರುಪಾಯಿಯಷ್ಟು ಮಾರಾಟ ಮಾಡಿದೆ. ಈ ಸರಾಸರಿ ಲೆಕ್ಕದಲ್ಲೇ ಹೇಳುವುದಾದರೆ ಪ್ರತಿ ಭಾರತೀಯ ಮೂರು ಸಲ ಈ ಕ್ಯಾಂಡಿ ತಿಂದ ಹಾಗಾಯಿತು.

ಸಾಮಾನ್ಯವಾಗಿ ಚಿಲ್ಲರೆ ಬದಲಿಗೆ ಅಂಗಡಿಗಳಲ್ಲಿ ಈ ರೀತಿ ಕ್ಯಾಂಡಿಗಳನ್ನು ಕೊಡ್ತಾರೆ. ಆದರೆ ಪಲ್ಸ್ ವಿಚಾರವೇ ಬೇರೆ. ಜನರು ಅದನ್ನು ಸಿಕ್ಕಾಪಟ್ಟೆ ಖರೀದಿಸುತ್ತಿದ್ದಾರೆ. ಕಚ್ಚಾ ಮಾವಿನಕಾಯಿ ರುಚಿಯ ಈ ಕ್ಯಾಂಡಿಯ ತಯಾರಕರು ಡಿಎಸ್ ಗ್ರೂಪ್. ರಜನೀಗಂಧ ಪಾನ್ ತಯಾರಿಸುವ ಅದೇ ಡಿಎಸ್ ಗ್ರೂಪ್ ನವರು.[ಮುಖೇಶ್ ಅಂಬಾನಿ ದೇಶದ ನಂಬರ್ 1 ಸಿರಿವಂತ, ಆಸ್ತಿ ಜಸ್ಟ್ 1.74 ಲಕ್ಷ ಕೋಟಿ]

Success story of the favourite candy in town: Pulse

ಅದರ ಪ್ರತಿಸ್ಪರ್ಧಿಗಳು ಕನಸಿನಲ್ಲೂ ಊಹಿಸದ ಮಟ್ಟಕ್ಕೆ ಪಲ್ಸ್ ನ ಮಾರಾಟ ಹೆಚ್ಚಿದೆ. ಎಂಟು ತಿಂಗಳಲ್ಲಿ ನೂರು ಕೋಟಿ ರುಪಾಯಿಯ ವ್ಯಾಪಾರ ಮಾಡಿದೆ. ಇದು ಕೋಕ್ ಜೀರೋ ತಂಪುಪಾನೀಯದ ದಾಖಲೆಗೆ ಸಮನಾದದ್ದು. ಪಲ್ಸ್ ನ ದೇಸಿ ರುಚಿ ಎಲ್ಲ ವಯೋಮಾನದವರ ನಾಲಗೆಗೆ ರುಚಿ ಹಿಡಿಸಿದೆ.

ಇಂಥ ಉತ್ಪನ್ನದ ಕಲ್ಪನೆ ಮೂಡಿದ್ದ 2013ರಲ್ಲಿ. ಬಿಡುಗಡೆಯಾಗಿದ್ದು 2015ರಲ್ಲಿ. ಮಾವಿನ ಕಾಯಿಯನ್ನು ಉಪ್ಪು-ಖಾರದ ಜೊತೆಗೆ ತಿನ್ನುವುದನ್ನು ಎಲ್ಲರೂ ಇಷ್ಟ ಪಡುತ್ತಾರೆ ಎಂಬ ಸಂಗತಿ ಕಂಡುಕೊಂಡ ತಂಡ ಪಲ್ಸ್ ನ ಸಿದ್ಧಪಡಿಸಿತು. ಇದರ ಸಲುವಾಗಿ ವಿಶೇಷವಾದ ಮಾರಾಟ ಪ್ರಯತ್ನವೋ ಮತ್ತೊಂದನ್ನೋ ಡಿಎಸ್ ಗ್ರೂಪ್ ಮಾಡಲಿಲ್ಲ. ಅದಾಗಲೇ ಇದ್ದ ಅದರ ಮಾರಾಟ ಜಾಲವನ್ನೇ ಬಳಸಿ ಮಾರಾಟ ಆರಂಭಿಸಿತು.[ಸುಡು ಬಿಸಿಲಿಗೂ ಕೊರೆವ ಚಳಿಗೂ ಈ ಜಾಕೆಟ್, ಕೇಂದ್ರ ಸಚಿವರಿಂದ ಬಿಡುಗಡೆ]

ಪಲ್ಸ್ ಮಾರಾಟ ಸಾಧ್ಯತೆ ಇನ್ನೂ ಹೆಚ್ಚಿದೆ ಎಂದು ಅರಿತ ಡಿಎಸ್ ಗ್ರೂಪ್ ಇದೀಗ ಸಿಂಗಾಪೂರ್, ಯುಕೆ ಮತ್ತು ಯುಎಸ್ ನಲ್ಲೂ ಮಾರಾಟ ಆರಂಭಿಸಿದೆ. ಜತೆಗೆ ಇದರ ತಯಾರಿಗೆ ಬಳಸುವ ವಿಧಾನದ ಪೇಟೆಂಟ್ ಕೂಡ ಮಾಡಿಸಲು ಚಿಂತನೆ ನಡೆಸಿದೆ. ಈ ಬಗ್ಗೆ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

English summary
A 1 rupee candy 'pulse' in a two years clocks Rs 300 crore in sales. Can you believe that almost every Indian would have had this candy at least three times?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X