ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆಯಲ್ಲೇ ಕುಳಿತು ಎಸ್ ಬಿಐ ಲೋನ್ ಪಡೆಯಿರಿ

|
Google Oneindia Kannada News

ಮುಂಬೈ, ಮೇ 30: ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಸಿಹಿಸುದ್ದಿಯೊಂದಿದೆ. ಇನ್ನು ಮುಂದೆ ಯಾವುದೇ ಬಗೆಯ ಸಾಲ ಪಡೆಯಲು ಸರತಿ ಸಾಲಿನಲ್ಲಿ ನಿಂತುಕೊಂಡು ಸಮಯ ಮತ್ತು ಶ್ರಮ ವ್ಯರ್ಥವಾಯಿತು ಎಂದು ದೂರಬೇಕಾಗಿಲ್ಲ.

ಗೃಹ ಸಾಲ, ಚಿನ್ನದ ಸಾಲ, ವಾಹನ ಸಾಲಕ್ಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಎಸ್ ಬಿಐ ಅವಕಾಶ ಮಾಡಿಕೊಟ್ಟಿದೆ. ಎಸ್‌ಬಿಐ ಸಂಸ್ಥೆಯ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಹೊಸ ಸೇವೆಗೆ ಮುಂಬೈನಲ್ಲಿ ಚಾಲನೆ ನೀಡಿದ್ದಾರೆ.[ಏರ್ ಇಂಡಿಯಾ ಆಸ್ತಿ ಎಸ್ ಬಿಐ ಮಡಿಲಿಗೆ]

sbi

ಗ್ರಾಹಕರು ತಮ್ಮ ಅರ್ಹತೆ, ಸಾಲಮೊತ್ತ ಸೇರಿದಂತೆ ಎಲ್ಲಾ ಮಾನದಂಡಗಳನ್ನು ಅರಿತೇ ಅರ್ಜಿ ಸಲ್ಲಿಸಬೇಕು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಗ್ರಾಹಕರಿಗೆ ಕೂಡಲೇ ವಿದ್ಯುನ್ಮಾನ-ಅನುಮೋದನೆ ಸಿಗುತ್ತದೆ. ನಂತರ ಬ್ಯಾಂಕ್ ಅಧಿಕಾರಿ ಅರ್ಜಿದಾರರನ್ನು ಸಂಪರ್ಕಿಸಿ ಎಲ್ಲ ಕೆಲಸ ಕಾರ್ಯ ಪೂರೈಸಲಿದ್ದಾರೆ.[ಆನ್ ಲೈನ್ ನಲ್ಲಿ ಆದಾಯ ತೆರಿಗೆ ಗೈಡ್]

ಗ್ರಾಹಕರು ಅಗತ್ಯ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬಹುದು. ಸಾಲ ಅರ್ಜಿಯ ಸಂಸ್ಕರಣೆಯ ಅವಧಿ ಕಡಿಮೆಯಿದೆ,. ಮುಂದೆ ಮೊಬೈಲ್ ಮೂಲಕವೂ ಈ ಬಗೆಯ ಸೌಲಭ್ಯ ವಿಸ್ತರಿಸುವ ಚಿಂತನೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಸ್ ಬಿಐ ವೆಬ್ ತಾಣಕ್ಕೆ ಪ್ರವೇಶ ಮಾಡಿದರೆ ಮತ್ತಷ್ಟು ಮಾಹಿತಿ ತಿಳಿದುಕೊಳ್ಳಬಹುದು.

English summary
Country's largest lender State Bank of India launched an online customer acquisition solution through which one can apply for home, car, education and personal loans online. SBI chairperson Arundhati Bhattacharya launched the application that will help customers gauge their eligibility and get a quote personalized to their requirement, the bank said in a statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X