ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್ ಖಾತೆಗೆ ಲಿಂಕ್ ಆಗಿಲ್ಲದಿದ್ರೂ ಆಧಾರ್ ಆಧಾರಿತ ವ್ಯವಹಾರ ಸಾಧ್ಯ

ಡಿಜಿಟಲ್ ವ್ಯವಹಾರಗಳಿಗೆ ಹೊಸ ಸ್ಪರ್ಶ ನೀಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಆಧಾರ್ ಸಂಖ್ಯಾಧಾರಿತ ವ್ಯವಹಾರಗಳಿಗೆ ಹೆಚ್ಚಿನ ಒತ್ತು ನೀಡಲು ಸರ್ಕಾರ ಮುಂದಾಗಿದೆ.

|
Google Oneindia Kannada News

ನವದೆಹಲಿ, ಫೆಬ್ರವರಿ 21: ಶೀಘ್ರದಲ್ಲೇ, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯು ನಮ್ಮ ಬ್ಯಾಂಕ್ ಗಳ ಖಾತೆಗೆ ಲಿಂಕ್ ಆಗಿರದಿದ್ದರೂ ಆ 14 ಅಂಕಿಗಳುಳ್ಳ ಸಂಖ್ಯೆ ನಿಮ್ಮೆಲ್ಲಾ ಪಾವತಿಗಳಿಗೆ ಏಕೈಕ ಮೂಲಾಧಾರವಾಗಲಿದೆ.

ಆದರೆ, ಅದಕ್ಕಾಗಿ ಈ ವರ್ಷ ಸೆಪ್ಟಂಬರ್ ತನಕ ಕಾಯಬೇಕಿದೆ. ಏಕೆಂದರೆ, ಆ ವೇಳೆಗೆ ದೇಶದ ಕೆಲ ಪೋಸ್ಟ್ ಆಫೀಸ್ ಗಳು ಬ್ಯಾಂಕುಗಳಾಗಿ ಮೇಲ್ದರ್ಜೆಗೆ ಏರುವುದರಿಂದ ಆಧಾರ್ ಮೂಲಕವೇ ನಮ್ಮೆಲ್ಲಾ ನಗದು ವ್ಯವಹಾರಗಳನ್ನು ನಡೆಸಲು ಸುಗಮವಾಗಲಿದೆ.

Soon, make payments with your Aadhaar number without linking it to a bank

ಈ ಬಗ್ಗೆ ಮಂಗಳವಾರ ವಿವರಣೆ ನೀಡಿದ ಭಾರತೀಯ ಅಂಚೆ ಇಲಾಖೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎ.ಪಿ. ಸಿಂಗ್, ''ಸದ್ಯಕ್ಕೀಗ, ಆಧಾರ್ ಕಾರ್ಡ್ ಕೇವಲ ಗುರುತಿನ ಪತ್ರವಾಗಿಯಷ್ಟೇ ಉಪಯೋಗಿಸಲ್ಪಡುತ್ತಿವೆ. ಸೆಪ್ಟಂಬರ್ ವೇಳೆಗೆ ದೇಶದಲ್ಲಿ ಆಯ್ದ650 ನಗರಗಳ ಅಂಚೆ ಕಚೇರಿಗಳು ಬ್ಯಾಂಕುಗಳಾಗಿ ಪರಿವರ್ತನೆಗೊಂಡಾಗ ಆಧಾರ್ ಕಾರ್ಡ್ ಸಂಖ್ಯೆಯ ಮೂಲಕವೇ ಎಲ್ಲಾ ರೀತಿಯ ನಗದು ವ್ಯವಹಾರಗಳನ್ನು ನಡೆಸಲು ಅನುಕೂಲವಾಗಲಿದೆ'' ಎಂದರು.

''ಈಗಾಗಲೇ ಆಧಾರ್ ಕಾರ್ಡ್ ಆಯೋಗವು, ಕೇವಲ ಆಧಾರ್ ಸಂಖ್ಯೆಯನ್ನುಪಯೋಗಿಸಿ ನಿರ್ದಿಷ್ಟ ಸಂಖ್ಯೆಯ ವ್ಯಕ್ತಿಗೆ ಆನ್ ಲೈನ್ ಮೂಲಕ ಹಣ ಹಾಕಬಹುದಾದ ಮಾರ್ಗಗಳ ಬಗ್ಗೆ ಪ್ರಾಯೋಗಿಕವಾಗಿ ಅಧ್ಯಯನ ನಡೆಸಿದೆ'' ಎಂದು ವಿವರಿಸಿದರು.

''ಕೇಂದ್ರ ಸರ್ಕಾರವು ದೇಶದ ಎಲ್ಲಾ ಪಡಿತರ ವ್ಯವಹಾರಗಳನ್ನು ಆಧಾರ್ ನಡಿ ತರಲು ಸಜ್ಜಾಗಿರುವ ಹಿನ್ನೆಲೆಯಲ್ಲಿ ಈ ಪ್ರಾಯೋಗಿಕ ಪರೀಕ್ಷೆಗಳನ್ನು ಕೈಗೊಳ್ಳಲಾಗಿತ್ತು. ಅದೀಗ ಯಶಸ್ವಿಯಾಗಿದ್ದು ಅದನ್ನು ದೇಶದ ಪೋಸ್ಟಲ್ ಬ್ಯಾಂಕ್ ಯೋಜನೆಗೂ ಅಳವಡಿಸಿಕೊಳ್ಳಲಾಗುವುದು'' ಎಂದು ತಿಳಿಸಿದರು.

English summary
Soon, after the selected post offices in India turn up into postal banks, our Adhaar number will be the single point payment address even though they are not linked to the bank accounts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X