ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಲಿಫ್ ಕಾರ್ಟ್ ವಿಲೀನ ಪ್ರಕ್ರಿಯೆಯಿಂದ ಹಿಂದೆ ಸರಿದ ಸ್ನ್ಯಾಪ್ ಡೀಲ್

|
Google Oneindia Kannada News

ಇ ಕಾಮರ್ಸ್ ಕಂಪನಿಯಾದ ಸ್ನ್ಯಾಪ್ ಡೀಲ್ ಸೋಮವಾರ ಫ್ಲಿಪ್ ಕಾರ್ಟ್ ವಿಲೀನ ಪ್ರಕ್ರಿಯೆ ಮಾತುಕತೆಯಿಂದ ಹಿಂದೆ ಸರಿದಿದೆ. ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವುದಾಗಿ ಅದು ಹೇಳಿಕೊಂಡಿದೆ.

ಫ್ಲಿಪ್ ಕಾರ್ಟ್ ನ 6 ಸಾವಿರ ಕೋಟಿ ರು. ಆಫರ್ ಒಪ್ಪಿದ ಸ್ನಾಪ್ ಡೀಲ್ ?ಫ್ಲಿಪ್ ಕಾರ್ಟ್ ನ 6 ಸಾವಿರ ಕೋಟಿ ರು. ಆಫರ್ ಒಪ್ಪಿದ ಸ್ನಾಪ್ ಡೀಲ್ ?

ಸ್ನ್ಯಾಪ್ ಡೀಲ್ ತನ್ನ ವ್ಯವಹಾರವನ್ನು ಫ್ಲಿಪ್ ಕಾರ್ಟ್ ಗೆ ಮಾರಾಟ ಮಾಡುವುದಕ್ಕೆ 900-950 ಮಿಲಿಯನ್ ಅಮೆರಿಕನ್ ಡಾಲರ್ ನ ವ್ಯವಹಾರಕ್ಕೆ ಮುಂದಾಗಿತ್ತು.

Snapdeal terminates talks for takeover by Flipkart

"ಸ್ನ್ಯಾಪ್ ಡೀಲ್ ಕಳೆದ ಹಲವು ತಿಂಗಳಿಂದ ತಾಂತ್ರಿಕ ಆಯ್ಕೆಗಳ ಪರಿಶೀಲನೆ ನಡೆಸಿತ್ತು. ಇದೀಗ ಕಂಪನಿಯು ಸ್ವತಂತ್ರ ಮಾರ್ಗದಲ್ಲಿ ಮುಂದುವರಿಯಲು ನಿರ್ಧರಿಸಿದೆ. ಅದರ ಫಲಿತವಾಗಿ ಉಳಿದ ನಿರ್ಧಾರಗಳಿಂದ ಹಿಂದೆ ಸರಿದಿದೆ" ಎಂದು ಸ್ನ್ಯಾಪ್ ಡೀಲ್ ಕಂಪನಿ ವಕ್ತಾರರು ಫ್ಲಿಪ್ ಕಾರ್ಟ್ ಹೆಸರು ಎತ್ತದೆ ತಿಳಿಸಿದ್ದಾರೆ.

ಸ್ನ್ಯಾಪ್ ಡೀಲ್ ಹೊಸ ದಿಸೆಯಲ್ಲಿ ಸಾಗಿದೆ. ಇದನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಈ ತಿಂಗಳು ಒಳ್ಳೆ ಲಾಭ ಗಳಿಸಿದೆ ಎಂದಿದ್ದಾರೆ. ಇದರ ಜತೆಗೆ ಕೆಲವು ಮುಖ್ಯ ಆಸ್ತಿಗಳನ್ನು ಮಾರಿ, ಆರ್ಥಿಕವಾಗಿ ಸ್ವಂತ-ಬಲದ ಮೇಲೆ ನಿಲ್ಲಲು ನಿರ್ಧಾರ ಮಾಡಲಾಗಿದೆ.

385 ಕೋಟಿ ರುಪಾಯಿಗೆ ಡಿಜಿಟಲ್ ಪೇಮಂಟ್ 'ಫ್ರೀಚಾರ್ಜ್' ಅನ್ನು ಸ್ನ್ಯಾಪ್ ಡೀಲ್ ಕಂಪನಿಯು ಆಕ್ಸಿಸ್ ಬ್ಯಾಂಕ್ ಗೆ ಮಾರಾಟ ಮಾಡಲು ನಿರ್ಧರಿಸಿದ ಮೇಲೆ ಫ್ಲಿಪ್ ಕಾರ್ಟ್ ಗೆ ಕಂಪನಿಯನ್ನು ವಿಲೀನ ಮಾಡದಿರುವ ತೀರ್ಮಾನ ಹೊರಬಂದಿದೆ.

ಪೇಟಿಎಂ ಕ್ಯಾಶ್‌ಬ್ಯಾಕ್ ಆಫರ್ ಗಳಿಗೆ ಒಮ್ಮೆ ಭೇಟಿ ಕೊಡಿಪೇಟಿಎಂ ಕ್ಯಾಶ್‌ಬ್ಯಾಕ್ ಆಫರ್ ಗಳಿಗೆ ಒಮ್ಮೆ ಭೇಟಿ ಕೊಡಿ

ಒಂದು ವೇಳೆ ಫ್ಲಿಪ್ ಕಾರ್ಟ್ ನಿಂದ ಸ್ನ್ಯಾಪ್ ಡೀಲ್ ನ ಖರೀದಿ ಆಗಿದ್ದರೆ ಅದು ಭಾರತದ ಇ ಕಾಮರ್ಸ್ ಮಾರುಕಟ್ಟೆಯಲ್ಲೇ ಅತಿ ದೊಡ್ಡ ವಿಲೀನ ಪ್ರಕ್ರಿಯೆ ಆಗಿರುತ್ತಿತ್ತು.

English summary
E-commerce firm Snapdeal on Monday terminated talks for a takeover by larger rival Flipkart, saying it will “pursue an independent path” to continue its operations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X