ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಲಿಪ್ ಕಾರ್ಟ್ ನ 4800 ಕೋಟಿ ರು. ಆಫರ್ ತಿರಸ್ಕರಿಸಿದ ಸ್ನಾಪ್ ಡೀಲ್

ನಷ್ಟದಲ್ಲಿರುವ ಆನ್ ಲೈನ್ ಮಾರಾಟ ಸಂಸ್ಥೆಯಾದ ಸ್ನಾಪ್ ಡೀಲ್ ಅನ್ನು ಕೊಳ್ಳಲು ಫ್ಲಿಪ್ ಕಾರ್ಟ್ ನೀಡಿದ್ದ ಆಫರ್ ತಿರಸ್ಕರಿಸಿದ ಸ್ನಾಪ್ ಡೀಲ್. ಸುಮಾರು 4800 ಕೋಟಿ ರು.ಗಳಿಗೆ ಆಫರ್ ನೀಡಿದ್ದ ಫ್ಲಿಪ್ ಕಾರ್ಟ್.

|
Google Oneindia Kannada News

ಬೆಂಗಳೂರು, ಜುಲೈ 5: ಆನ್ ಲೈನ್ ಮಾರುಕಟ್ಟೆ ಕ್ಷೇತ್ರದಲ್ಲಿ ಸದ್ಯದ ಮಟ್ಟಿಗೆ ಆರ್ಥಿಕ ಸಂಕಷ್ಟದಲ್ಲಿರುವ ಪ್ರತಿಷ್ಠಿತ ಆನ್ ಲೈನ್ ಮಾರಾಟ ಕಂಪನಿಯಾದ ಸ್ನಾಪ್ ಡೀಲ್ ಸಂಸ್ಥೆಯು, ಫ್ಲಿಪ್ ಕಾರ್ಟ್ ಸಂಸ್ಥೆಯ ತನ್ನನ್ನು ಕೊಳ್ಳಲು ನೀಡಿದ್ದ 4800 ಕೋಟಿ ರು.ಗಳ ಆಫರ್ ಅನ್ನು ತಿರಸ್ಕರಿಸಿದೆ ಎಂದು 'ಲೈವ್ ಮಿಂಟ್' ಹೇಳಿದೆ.

ಸದ್ಯಕ್ಕೆ ನಷ್ಟದಲ್ಲಿರುವ ಸ್ನಾಪ್ ಡೀಲ್ ಸಂಸ್ಥೆಯನ್ನು ಕೊಳ್ಳಲು ಈಗಾಗಲೇ ಅದರ ಆಡಳಿತ ಮಂಡಳಿಯು ನಿರ್ಧರಿಸಿದೆ. ಆದರಂತೆ, ಆಫರ್ ಗಳೂ ಬರುತ್ತಿವೆ. ಈ ಆಫರ್ ಗಳಲ್ಲಿ ಬಂದಿದ್ದ ಅತಿ ದೊಡ್ಡ ಆಫರ್ ಫ್ಲಿಪ್ ಕಾರ್ಟ್ ಕಂಪನಿಯದ್ದು. ಆದರೆ, ಅದನ್ನು ಸ್ನಾಪ್ ಡೀಲ್ ಆಡಳಿತ ಮಂಡಳಿಯು ತಿರಸ್ಕರಿಸಿದೆ.

Snapdeal rejects Flipkart’s Rs 4800 crore buyout offer

ಆದರೆ, ಇಷ್ಟಕ್ಕೆ ಫ್ಲಿಪ್ ಕಾರ್ಟ್ ಸುಮ್ಮನಾಗುತ್ತಿಲ್ಲ. ಈ ಬಗ್ಗೆ ಮತ್ತಷ್ಟು ಮಾತುಕತೆ ನಡೆಸಿದ ಸ್ನಾಪ್ ಡೀಲ್ ಅನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತದೆ ಎಂದು ಫ್ಲಿಪ್ ಕಾರ್ಟ್ ಸಂಸ್ಥೆಯ ಹೆಸರನ್ನೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದು ಬಹಿರಂಗವಾಗಿದೆ.

ನಿಜ ಹೇಳಬೇಕೆಂದರೆ, ಸ್ನಾಪ್ ಡೀಲ್ ನ ಒಟ್ಟಾರೆ ಆಸ್ತಿ ಮೌಲ್ಯ ಎಷ್ಟೆಂಬುದನ್ನು ಇನ್ನೂ ನಿಖರವಾಗಿ ಲೆಕ್ಕ ಹಾಕಲಾಗಿಲ್ಲ. ಆದರೆ, ಅಂದಾಜು ಮೊತ್ತವನ್ನು ಫ್ಲಿಪ್ ಕಾರ್ಟ್ ಹಾಗೂ ಇನ್ನಿತರ ಆನ್ ಲೈನ್ ಸಂಸ್ಥೆಗಳು ಸ್ನಾಪ್ ಡೀಲ್ ಮುಂದೆ ಪ್ರಸ್ತಾಪಿಸುತ್ತಿವೆ. ಆದರೆ, ಅವ್ಯಾವೂ ಸ್ನಾಪ್ ಡೀಲ್ ಆಡಳಿತ ಮಂಡಳಿಗೆ ಹಿಡಿಸುತ್ತಿಲ್ಲ.

ಹಾಗಾಗಿ, ಸ್ನಾಪ್ ಡೀಲ್ ಕಂಪನಿಯೇ ತನ್ನ ಸಮಗ್ರ ಆಸ್ತಿಯನ್ನು ನಿಖರ ಮೌಲ್ಯವನ್ನು ಲೆಕ್ಕ ಹಾಕಿ, ತನ್ನ ನಿರೀಕ್ಷೆಯ ಬೆಲೆಯನ್ನು ತಾನೇ ನಿಗದಿಪಡಿಸಿಕೊಂಡರೆ ಕೊಳ್ಳುವವರು ಮುಂದಿನ ಮಾತುಕತೆಗೆ ಸಿದ್ಧವಾಗಲು ಸಹಾಯವಾಗುತ್ತದೆ ಎಂಬುದು ಮಾರುಕಟ್ಟೆ ತಜ್ಞರ ಸಲಹೆ.

English summary
The board of struggling online marketplace Snapdeal has rejected an offer of roughly Rs. 4800 crore from larger rival Flipkart, creating a new hurdle in a proposed deal that has attracted criticism from some Snapdeal shareholders, said three people familiar with the matter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X