ಫ್ಲಿಪ್ ಕಾರ್ಟ್ ನ 6 ಸಾವಿರ ಕೋಟಿ ರು. ಆಫರ್ ಒಪ್ಪಿದ ಸ್ನಾಪ್ ಡೀಲ್ ?

Posted By:
Subscribe to Oneindia Kannada

ಬೆಂಗಳೂರು, ಜುಲೈ 26: ಹೆಸರಾಂತ ಆನ್ ಲೈನ್ ಮಾರಾಟ ಸಂಸ್ಥೆಯಾದ ಸ್ನಾಪ್ ಡೀಲ್ ಕಂಪನಿಯನ್ನು ಕೊಳ್ಳುವ ಪೈಪೋಟಿಯಲ್ಲಿ ಜನಪ್ರಿಯ ಆನ್ ಲೈನ್ ಜಾಲತಾಣವಾದ ಫ್ಲಿಪ್ ಕಾರ್ಟ್ ಕೊನೆಗೂ ಗೆದ್ದಿದೆ ಎಂದು ಮೂಲಗಳು ತಿಳಿಸಿವೆ.

ಫ್ಲಿಪ್‌ಕಾರ್ಟ್ ನ 4,500 ಕೋಟಿ ರೂ. ಆಫರ್ ತಿರಸ್ಕರಿಸಿದ ಸ್ನಾಪ್‍ಡೀಲ್

ಈ ಹಿಂದೆ, ಫ್ಲಿಪ್ ಕಾರ್ಟ್ ಸಂಸ್ಥೆಯ ಸ್ವಾಧೀನ ವಿಚಾರದ ಮಾತುಕತೆ ವೇಳೆ 4, 800 ಕೋಟಿ ರು.ಗಳ ಆಫರ್ ಅನ್ನು ಸ್ನಾಪ್ ಡೀಲ್ ಮುಂದಿಟ್ಟಿತ್ತು. ಆದರೆ, ಇದಕ್ಕೆ ಸ್ನಾಪ್ ಡೀಲ್ ಆಡಳಿತ ಮಂಡಳಿ ಒಪ್ಪಿರಲಿಲ್ಲ. ಅದಕ್ಕೂ ಮುನ್ನ 4,500 ಕೋಟಿ ರು.ಗಳ ಆಫರ್ ಅನ್ನೂ ಸ್ನಾಪ್ ಡೀಲ್ ತಿರಸ್ಕರಿಸಿತ್ತು.

Snapdeal board approves Flipkart’s $900-950 million takeover offer: report

ಆದರೀಗ, ಅಂದಾಜು 5,700 ಕೋಟಿ ರು.ಗಳಿಂದ 6 ಸಾವಿರ ಕೋಟಿ ರು. ನಡುವಿನ ಹೊಸ ಆಫರ್ ಅನ್ನು ಫ್ಲಿಪ್ ಕಾರ್ಟ್, ಸ್ನಾಪ್ ಡೀಲ್ ಮುಂದಿಟ್ಟಿರುವುದರಿಂದ ಈ ಮೊತ್ತದ ಬಗ್ಗೆ ಸ್ನಾಪ್ ಡೀಲ್ ಆಡಳಿತ ಮಂಡಳಿ ಆಸಕ್ತಿ ತೋರಿದೆ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಎರಡೂ ಕಂಪನಿಗಳಿಂದ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ.

ಫ್ಲಿಪ್‌ಕಾರ್ಟ್ ನ 4,500 ಕೋಟಿ ರೂ. ಆಫರ್ ತಿರಸ್ಕರಿಸಿದ ಸ್ನಾಪ್‍ಡೀಲ್

ಫ್ಲಿಪ್ ಕಾರ್ಟ್ ನೀಡಿರುವ ಈ ಹೊಸ ಆಫರ್ ಬಗ್ಗೆ ಸ್ನಾಪ್ ಡೀಲ್ ನಲ್ಲಿ ಹೇರಳವಾಗಿ ಹೂಡಿಕೆ ಮಾಡಿರುವ ಜಪಾನ್ ನ ಸಾಫ್ಟ್ ಬ್ಯಾಂಕ್ ಸಂಸ್ಥೆಯ ಅಧಿಕಾರಿಗಳು ಹಾಗೂ ಸ್ನಾಪ್ ಡೀಲ್ ಆಡಳಿತ ಮಂಡಳಿಗಳು ಚರ್ಚಿಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿವೆ ಎಂದು ಹೇಳಲಾಗಿದೆ.

Snapdeal rejected an offer of Rs. 4800 crore from Flipkart | Oneindia kannada

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Online marketplace Snapdeal has accepted Flipkart’s revised takeover offer of up to Rs. 6,000 crore, sources said.
Please Wait while comments are loading...