ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರುಕಟ್ಟೆಯಲ್ಲಿ ಮತ್ತೆ ತಲ್ಲಣ, ವರ್ಷದ ಕನಿಷ್ಠಕ್ಕೆ ಸೆನ್ಸೆಕ್ಸ್

|
Google Oneindia Kannada News

ಮುಂಬೈ, ಸೆ. 01: ಮುಂಬೈ ಮಾರುಕಟ್ಟೆಯಲ್ಲಿ ಮತ್ತೆ ತಲ್ಲಣ ಆರಂಭವಾಗಿದೆ. ಚೇತರಿಕೆ ಹಾದಿಗೆ ಮರಳಿದ್ದ ಷೇರು ಪೇಟೆ ಮಂಗಳವಾರ ಮತ್ತೆ 586 ಅಂಕ ಕುಸಿತ ಕಂಡಿದೆ. ನಿಫ್ಟಿ 185 ಅಂಕ ಕುಸಿತ ಕಂಡಿದೆ.

ದಿನದ ವ್ಯವಹಾರದ ಅಂತ್ಯದಲ್ಲಿ ಸೆನ್ಸೆಕ್ಸ್ ಈ ವರ್ಷದ ಕನಿಷ್ಠ ಮಟ್ಟಕ್ಕೆ ತಲುಪಿದೆ. ಸೆನ್ಸೆಕ್ಸ್‌ 25,694.44 ಮತ್ತು ನಿಫ್ಟಿ 7,785.85 ಕೊನೆಯಾಗಿದೆ. ಕಳೆದ ವಾರದ ಒಂದೇ ದಿನ 1700 ಅಂಕ ಕುಸಿತ ಕಂಡಿದ್ದ ಮಾರುಕಟ್ಟೆ ಅಂತ್ಯಕ್ಕೆ ಚೇತರಿಕೆ ದಾರಿಗೆ ಮರಳಿತ್ತು. ಆದರೆ ಇದೀಗ ಮತ್ತೆ ಕುಸಿತದತ್ತ ಮುಖ ಮಾಡಿರುವುದು ಹೂಡಿಕೆದಾರರಲ್ಲಿ ಆತಂಕ ಸೃಷ್ಟಿ ಮಾಡಿದೆ.[ಷೇರು ಮಾರುಕಟ್ಟೆ ಸಾವಿರ ಅಂಕ ಕುಸಿತಕ್ಕೆ 5 ಕಾರಣಗಳು]

share

ರಿಲಯನ್ಸ್‌, ಎನ್‌ಎಚ್‌ಪಿಸಿ, ಸಿಇಎಸ್‌ಇ, ರಿಲಯನ್ಸ್‌ ಪವರ್‌, ಅದಾನಿ ಪವರ್‌, ಜೆಎಸ್‌ಡಬ್ಲ್ಯು ಎನರ್ಜಿ, ಎನ್‌ಟಿಪಿಸಿ, ಟಾಟಾ ಪವರ್‌ ಕಂಪೆನಿ ಷೇರುಗಳು ಮಂಗಳವಾರ ತೀವ್ರ ತೆರೆಜನಾದ ಕುಸಿತ ಅನುಭವಿಸಿದವು.

ಕೇಂದ್ರ ಸರ್ಕಾರ ಮತ್ತು ಹಣಕಾಸು ಇಲಾಖೆ ಹೂಡಿಕೆದಾರರಿಗೆ ಅಭಯ ನೀಡಿದೆ. ಆದರೆ ಮಾರುಕಟ್ಟೆಯಲ್ಲಿ ತಲ್ಲಣ ಮುಂದುವರಿದಿದೆ. ಇತ್ತ ಕೃಷಿ, ಸೇವಾ ವಲಯ ಮತ್ತು ತಯಾರಿಕಾ ಕ್ಷೇತ್ರಗಳ ಮಂದಗತಿಯ ಪ್ರಗತಿಯಿಂದ ದೇಶದ ಒಟ್ಟು ಆಂತರಿಕ ಉತ್ಪಾದನೆ (ಜಿಡಿಪಿ) ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್‌-ಜೂನ್‌) ಶೇ 0.5 ರಷ್ಟು ತಗ್ಗಿದ್ದು, ಶೇ 7ಕ್ಕೆ ಇಳಿದಿದೆ. [ಸ್ಟೇಟ್ ಬ್ಯಾಂಕ್ ನ ಬಡಿ ಅಪ್ಲಿಕೇಶನ್ ಬಹುತ್ ಬಡಾ ಹೈ!]

ಕಳೆದ ಹಣಕಾಸು ವರ್ಷದ ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ ಶೇ 7.5ರಷ್ಟು ಜಿಡಿಪಿ ಪ್ರಗತಿ ದಾಖಲಾಗಿತ್ತು. ಕೇಂದ್ರ ಅಂಕಿ ಅಂಶ ಇಲಾಖೆ ಹೊಸದಾಗಿ ರೂಢಿಗೆ ತಂದಿರುವ ಒಟ್ಟಾರೆ ಮೌಲ್ಯ ಸೇರ್ಪಡೆ (ಜಿವಿಎ) ಮಾದರಿಯಲ್ಲೂ ಜಿಡಿಪಿ ಪ್ರಗತಿ (ಮೊದಲ ತ್ರೈಮಾಸಿಕದಲ್ಲಿ) ಶೇ 7.4 ರಿಂದ ಶೇ 7.1ಕ್ಕೆ ಇಳಿಕೆಯಾಗಿದೆ.

ಕೇಂದ್ರ ಸರ್ಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 8.1 ರಿಂದ ಶೇ 8.5ರಷ್ಟು ಜಿಡಿಪಿ ಪ್ರಗತಿ ಸಾಧಿಸುವ ಅಂದಾಜು ಮಾಡಿತ್ತು. ಆದರೆ ಪ್ರಗತಿ ನಿರೀಕ್ಷಿತ ಪ್ರಮಾಣದಲ್ಲಿ ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಯಾವ ಬಗೆಯ ಆರ್ಥಿಕ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

English summary
Selling resumed on the Indian bourses once again as benchmark indices fell sharply in trade following a poor set of data points. GDP data which came in at 7 per cent lagged estimates, while manufacturing PMI slowed and core sector growth fell. To compound misery data point from China was also poor, which added to fresh selling pressure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X