ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಟಾಪ್ 50 ಬ್ಯಾಂಕುಗಳ ಪಟ್ಟಿಗೆ ಎಸ್ಬಿಐ ಎಂಟ್ರಿ

ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ)ನೊಂದಿಗೆ ಐದು ಸಹವರ್ತಿ ಬ್ಯಾಂಕ್‌ಗಳು ಮತ್ತು ಭಾರತೀಯ ಮಹಿಳಾ ಬ್ಯಾಂಕ್‌ ವಿಲೀನಗೊಂಡ ಬಳಿಕ ಎಸ್ಬಿಐ ತನ್ನ ಮೌಲ್ಯವನ್ನು 41 ಲಕ್ಷ ಕೋಟಿ ರುಗೆ ಏರಿಸಿಕೊಂಡು ವಿಶ್ವದ ಟಾಪ್ 50 ಬ್ಯಾಂಕ್ ಪಟ್ಟಿಗೆ ಎಂಟ್ರಿ.

By Mahesh
|
Google Oneindia Kannada News

ನವದೆಹಲಿ, ಏಪ್ರಿಲ್ 02: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ)ನೊಂದಿಗೆ ಐದು ಸಹವರ್ತಿ ಬ್ಯಾಂಕ್‌ಗಳು ಮತ್ತು ಭಾರತೀಯ ಮಹಿಳಾ ಬ್ಯಾಂಕ್‌ ಏಪ್ರಿಲ್ 01ರಂದು ವಿಲೀನಗೊಂಡಿದೆ. ಈ ಮಹಾ ವಿಲೀನದ ಬಳಿಕ ಎಸ್ಬಿಐ ತನ್ನ ಮೌಲ್ಯವನ್ನು 41 ಲಕ್ಷ ಕೋಟಿ ರುಗೆ ಏರಿಸಿಕೊಂಡು ವಿಶ್ವದ ಟಾಪ್ 50 ಬ್ಯಾಂಕ್ ಪಟ್ಟಿಗೆ ಎಂಟ್ರಿ ಕೊಟ್ಟಿದೆ.

ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಎಸ್‌ಬಿಐ, ವಿಲೀನ ಪ್ರಕ್ರಿಯೆ ನಂತರ ಆಸ್ತಿ ಮೌಲ್ಯದ ಆಧಾರದ ಮೇಲೆ ವಿಶ್ವದಲ್ಲಿರುವ ಪ್ರಮುಖ 50 ಬ್ಯಾಂಕ್‌ಗಳಲ್ಲಿ ಸ್ಥಾನ ಪಡೆದುಕೊಂಡಿದೆ.

SBI to join top '50 Global Banks' with asset size of Rs 41 lakh crore

ಸ್ಟೇಟ್‌ ಬ್ಯಾಂಕ್‌ ಆಫ್‌ ಬಿಕಾನೇರ್‌ ಅಂಡ್ ಜೈಪುರ, ಸ್ಟೇಟ್‌ ಬ್ಯಾಂಕ್‌ ಆಫ್ ಹೈದರಾಬಾದ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು, ಸ್ಟೇಟ್‌ ಬ್ಯಾಂಕ್‌ ಆಫ್ ಪಟಿಯಾಲ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್ ಟ್ರವಾಂಕೂರ್‌, ಎಸ್‌ಬಿಐನಲ್ಲಿ ವಿಲೀನಗೊಂಡಿವೆ ಎಂದು ಬ್ಯಾಂಕ್‌ ಗಳ ಷೇರುದಾರರನ್ನು ಸ್ವಾಗತಿಸಿ ಎಸ್‌ಬಿಐ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಅವರು ಹೇಳಿದರು.

ವಿಲೀನವಾಗಿರುವ ಬ್ಯಾಂಕ್‌ಗಳ ಸಂಪತ್ತು ಮೌಲ್ಯ 26ಲಕ್ಷ ಕೋಟಿ ರು ಹಾಗೂ 18.50 ಲಕ್ಷ ಕೋಟಿ ರು ಆಡ್ವಾನ್ಸ್ ಸೇರಿ ಎಸ್ಬಿಐ ಮೌಲ್ಯವನ್ನು ವೃದ್ಧಿಸಿದೆ.

ಎಸ್ಬಿಐ ಈಗ 37ಕೋಟಿ ಗ್ರಾಹಕರ ಸಂಖ್ಯೆ ಹೊಂದಿದ್ದು, 24 ಸಾವಿರ ಒಟ್ಟು ಶಾಖೆಗಳು ಹಾಗೂ 59 ಸಾವಿರ ಎಟಿಎಂಗಳನ್ನು ಹೊಂದಲಿದೆ. ಎಸ್ಬಿಐ ಇನ್ ಟಚ್ ಮೂಲಕ ದೇಶದಲ್ಲಿ ಮೊದಲ ಬಾರಿಗೆ ಡಿಜಿಟಲ್ ಬ್ಯಾಂಕಿಂಗ್ ಮಳಿಗೆಗಳನ್ನು ಎಸ್ಬಿಐ ಪರಿಚಿಯಿದೆ.

English summary
tate Bank of India (SBI) will enter the list of top '50 Global Banks' with an asset size of Rs 41 lakh crore after the merger with the associate banks and Bharatiya Mahila Bank.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X