ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಐ ದಾಳಿಯಿಂದ ಕಂಗೆಟ್ಟಿದ್ದ ಮಲ್ಯಗೆ ಎಸ್‌ಬಿಐ ಶಾಕ್

|
Google Oneindia Kannada News

ಮುಂಬೈ, ನವೆಂಬರ್. 21: ಸಿಬಿಐ ದಾಳಿಯಿಂದ ಕಂಗೆಟ್ಟಿದ್ದ ವಿಜಯ್ ಮಲ್ಯಗೆ ಸ್ಟೇಟ್ ಬ್ಯಾಂಕ್ ಇಂಡಿಯಾ ಮತ್ತೊಂದು ಶಾಕ್ ನೀಡಿದೆ. ಮಲ್ಯ ಸಂಕಷ್ಟದಲ್ಲಿದ್ದಾಗ ಸಾಲ ನೀಡಿ ಸಲಹಿದ್ದ ಎಸ್ ಬಿಐ ಇದೀಗ ಮಲ್ಯ ಮೇಲೆ ತನ್ನ ಹಿಡಿತ ಬಿಗಿ ಮಾಡಿದೆ.

ವಿಜಯ್ ಮಲ್ಯ ಒಡೆತನದ ಕಂಪನಿಗಳು ಬೇಕಂತಲೇ ಸಾಲ ಮರುಪಾವತಿ ಮಾಡಿಲ್ಲ ಎಂದು ಹೇಳಿದ್ದು ಮಾಲೀಕ ವಿಜಯ್ ಮಲ್ಯ ಅವರನ್ನು 'ಉದ್ದೇಶ ಪೂರ್ವಕ ಸುಸ್ತಿದಾರ' ಎಂದು ಘೊಷಿಸಿದೆ.[ವಂಚನೆ ಪ್ರಕರಣ: ಮಲ್ಯ ಮನೆ ಮೇಲೆ ಸಿಬಿಐ ದಾಳಿ]

india

ಬ್ಯಾಂಕ್ ಹೇಳಿಕೆ ಮತ್ತು ಆದೇಶವನ್ನು ಆಧರಿಸಿ ಜಾರಿ ನಿರ್ದೇಶನಾಲಯ ಮುಂದಿನ ಕ್ರಮ ತೆಗೆದುಕೊಳ್ಳಲಿದೆ. ಮಲ್ಯ ಮಾಲೀಕತ್ವದ ಕಿಂಗ್​ಫಿಷರ್ ಏರ್​ಲೈನ್ಸ್, ಯುನೈಟೆಡ್ ಬ್ರೇವರೀಸ್ ಹೋಲ್ಡಿಂಗ್ಸ್ ಈಗ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಸಾಧ್ಯತೆಯಿದೆ.

ಅಕ್ಟೋಬರ್ ತಿಂಗಳಲ್ಲಿ ಮಲ್ಯ ಮನೆಯ ಮೇಲೆ ಸಿಬಿಐ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಐಡಿಬಿಐ ಬ್ಯಾಂಕಿನಿಂದ 950 ಕೋಟಿ ರು ಸಾಲ ಪಡೆದುಕೊಂಡಿದ್ದ ಮಲ್ಯ ಅವರು ಹಿಂತಿರುಗಿಸಿರಲಿಲ್ಲ. ಇದರ ಆಧಾರದಲ್ಲಿ ದಾಳಿ ಮಾಡಲಾಗಿತ್ತು.

English summary
Trouble seems to be mounting for Vijay Mallya. State Bank of India - the largest lender to defunct airline Kingfisher - has declared the carrier, its promoter Mallya and United Breweries Holdings as "wilful defaulters" after its grievance redressal committee rejected the arguments made by the borrower through its legal representative recently. Last Month The Central Bureau of Investigation (CBI) is conducted raid on Vijay Mallya House.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X