ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮೆಣಸಿನಕಾಯಿಗೆ ನಿಷೇಧ ಹೇರಿದ ಸೌದಿ ಅರೇಬಿಯಾ

By Mahesh
|
Google Oneindia Kannada News

ನವದೆಹಲಿ, ಜೂ.14: ಯುರೋಪಿನ ಒಕ್ಕೂಟದಿಂದ ಮಾವು ಆಮದು ನಿಂತಿರುವ ಬೆನ್ನಲ್ಲೇ ಭಾರತದ ಹಸಿ ಮೆಣಸಿನಕಾಯಿಗೆ ಸೌದಿ ಅರೇಬಿಯಾ ಮತ್ತೊಮ್ಮೆ ರೆಡ್ ಸಿಗ್ನಲ್ ತೋರಿಸಿದೆ. ಭಾರತದಿಂದ ತರಕಾರಿ ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಪೈಕಿ 5ನೇ ಸ್ಥಾನದಲ್ಲಿರುವ ಸೌದಿ ಈ ಕ್ರಮ ಕೈಗೊಳ್ಳಲು ತರಕಾರಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕ ಕಂಡು ಬಂದಿರುವುದೇ ಕಾರಣ ಎಂದು ತಿಳಿದು ಬಂದಿದೆ.

ಭಾರತದಿಂದ ಸೌದಿಗೆ ಬರುವ ಹಸಿ ಮೆಣಸಿನಕಾಯಿಯನ್ನು ಅಧಿಕ ಪ್ರಮಾಣದ ರಾಸಾಯನಿಕ ವಸ್ತು ಇರುವುದು ಪತ್ತೆಯಾಗಿದೆ.

ಭಾರತದಿಂದ ಆಮದಾಗುತ್ತಿರುವ ಹಲವು ಆಹಾರ ಉತ್ಪನ್ನ, ತರಕಾರಿಗಳನ್ನು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ರಾಸಾಯನಿಕ ವಸ್ತುಗಳು ಕಂಡು ಬಂದಿದೆ. [ಮೆಣಸಿನಕಾಯಿಗೆ ಸೌದಿಯಲ್ಲಿ ನಿಷೇಧ]

ಭಾರತದ ರೈತರು ಹೆಚ್ಚಿನ ಪ್ರಮಾಣದಲ್ಲಿ ವಿಷಕಾರಕ ರಸಗೊಬ್ಬರ ಬಳಕೆ ಮಾಡಿ ಇಳುವರಿ ಪಡೆದುಕೊಳ್ಳುತ್ತಿದ್ದಾರೆ. ಈ ಉತ್ಪನ್ನಗಳನ್ನು ನಾವು ಬಳಸಲು ಸಾಧ್ಯವಿಲ್ಲ ಎಂದು ಸೌದಿ ಅರೇಬಿಯಾ ಕೃಷಿ ಹಾಗೂ ಆರೋಗ್ಯ ಸಚಿವಾಲಯ ಹೇಳಿದೆ.

Saudi Arabia bans Indian green chilli over pesticide concerns

ಸೌದಿ ಸರ್ಕಾರ ಈ ಸಂಬಂಧ ಭಾರತದ ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ(ಎಪಿಇಡಿಎ)ಕ್ಕೂ ಹೇಳಿದೆ.

ಭಾರತದಲ್ಲಿ ಅತಿ ಹೆಚ್ಚು ಮೆಣಸಿನ ಕಾಯಿ ಉತ್ಪಾದಿಸುವ ರಾಜ್ಯಗಳ ಪೈಕಿ ಕರ್ನಾಟಕವು ಒಂದಾಗಿದ್ದು, ಈ ಆಮದು ನಿಷೇಧದಿಂದಾಗಿ ನಮ್ಮ ರೈತರಿಗೆ ಇನ್ನಷ್ಟು ಕಷ್ಟ ಉಂಟಾಗಲಿದೆ. 2014ರಲ್ಲೂ ಮೆಣಸಿನಕಾಯಿಗೆ ಸೌದಿಯಲ್ಲಿ ನಿಷೇಧ ಹೇರಲಾಗಿತ್ತು. ಯುರೋಪಿನ ಒಕ್ಕೂಟ ಭಾರತದ ಅಲ್ಫಾನ್ಸೋ ಮಾವು ಹಾಗೂ ನಾಲ್ಕು ತರಕಾರಿಗಳಿಗೆ ನಿಷೇಧ ಹೇರಿದ್ದನ್ನುಇಲ್ಲಿ ಸ್ಮರಿಸಬಹುದು.

ಭಾರತದ ಮೆಣಸು ಉತ್ಪನ್ನಗಳು ಕಳೆದ ಹಲವು ವರ್ಷಗಳಿಂದ ಖಜಾನೆ ತುಂಬಿಸಿವೆ. ಸರಿ ಸುಮಾರು ಸರಾಸತಿ 1,81,500 ಟನ್ ಗಳಷ್ಟು ಉತ್ಪನ್ನಗಳು ವಾರ್ಷಿಕವಾಗಿ ರಫ್ತಾಗುತ್ತಿದ್ದು 3 ಮಿಲಿಯನ್ ಡಾಲರ್ ಗಳಿಗೂ ಅಧಿಕ ಮೊತ್ತ ಸಿಗುತ್ತಿದೆ. ಈಗ ಮೇ.30ರಿಂದ ಜಾರಿಗೆ ಬರುವಂತೆ ನಿಷೇಧ ಹೇರಲಾಗಿದ್ದು, ಈ ಬಗ್ಗೆ ಸೌದಿ ಸರ್ಕಾರದೊಡನೆ ಮಾತುಕತೆ ಜಾರಿಯಲ್ಲಿದೆ ಎಂದು ರಿಯಾದ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಕಾರ್ಯದರ್ಶಿಗಳಲ್ಲಿ ಒಬ್ಬರಾದ ಸುರೀಂದರ್ ಭಗತ್ ಹೇಳಿದ್ದಾರೆ. (ಏಜೆನ್ಸೀಸ್)

English summary
Saudi Arabia bans Indian green chilli over pesticide concerns. Saudi Arabia, the fifth largest importer of fresh vegetables from India, has banned the import of green chillis because of the presence of high pesticide residues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X