ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕಕ್ಕೆ ಬಂದ ರಾಜಸ್ಥಾನ ಸರ್ಕಾರದ ರೋಡ್ ಶೋ

By Mahesh
|
Google Oneindia Kannada News

ಬೆಂಗಳೂರು, ಮೇ.5: ರಾಜಸ್ಥಾನ ಸರ್ಕಾರದ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾದ ರಾಜ್ಪಾಲ್ ಸಿಂಗ್ ಶೇಕಾವತ್ ಅವರು ರಾಜಸ್ಥಾನದಲ್ಲಿನ ಹೂಡಿಕೆ ಅವಕಾಶಗಳನ್ನು ಪ್ರದರ್ಶಿಸಲು ಬೆಂಗಳೂರಿಗೆ ಬಂದಿದ್ದಾರೆ.

ರಾಜಸ್ಥಾನ ಸರ್ಕಾರ, ಭಾರತೀಯ ಕೈಗಾರಿಕೆ ಒಕ್ಕೂಟದ(ಸಿಐಐ) ಸಹಭಾಗಿತ್ವದಲ್ಲಿ ಆಯೋಜಿಸಿರುವ ಹೂಡಿಕೆದಾರರ ಸಭೆಯಲ್ಲಿ ಸಚಿವ ರಾಜ್ ಪಾಲ್ ಸೇರಿದಂತೆ ರಾಜಸ್ಥಾನ ಸರ್ಕಾರದ ನಿಯೋಗ ಪಾಲ್ಗೊಂಡಿದೆ.

ಈ ಕಾರ್ಯಕ್ರಮ ರಾಜಸ್ಥಾನ ಸರ್ಕಾರ ರಾಜ್ಯವನ್ನು ಹೂಡಿಕೆ ತಾಣವಾಗಿ ಉತ್ತೇಜಿಸಲು ಆಯೋಜಿಸಿರುವ ದೇಶೀಯ ಮತ್ತು ಅಂತಾರಾಷ್ಟ್ರೀಯ ರೋಡ್ ಶೋಗಳ ಒಂದು ಭಾಗವಾಗಿತ್ತು. ರಾಜಸ್ಥಾನ ಪುನರುಜ್ಜೀವನ ಪಾಲುದಾರಿಕೆ ಶೃಂಗಸಭೆ 2015ನ್ನು ಈ ವರ್ಷದ ನವೆಂಬರ್ 19-20ರಂದು ಜೈಪುರ್ ನಲ್ಲಿ ಹಮ್ಮಿಕೊಂಡಿದೆ.

ರಾಜ್ ಪಾಲ್ ಶೇಕಾವತ್ ನಾಯಕತ್ವದ ಗಣ್ಯರ ತಂಡದಲ್ಲಿ ರಾಜಸ್ಥಾನ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಿ.ಎಸ್ ರಾಜನ್, ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ಕಾರ್ಯದರ್ಶಿ ಮತ್ತು ಆಯುಕ್ತರಾದ ರಜತ್ ಮಿಶ್ರ ಇದ್ದರು.

ಬೆಂಗಳೂರು ರೋಡ್ ಶೋ ಕುರಿತು ಪ್ರತಿಕ್ರಿಯಿಸಿದ ಶೇಕಾವತ್, ಬೆಂಗಳೂರು ಐಟಿ, ಆಟೊಮೋಟಿವ್, ಶಿಕ್ಷಣ ಮತ್ತು ಆರೋಗ್ಯರಕ್ಷಣೆ ತಾಣ. ರಾಜಸ್ಥಾನ ಪುನರುಜ್ಜೀವನ, ಪಾಲುದಾರಿಕೆಯಲ್ಲಿ ದೀರ್ಘಾವಧಿ ಬೆಳವಣಿಗೆ ಯೋಜನೆಯಾಗಿದೆ.

Resurgent Rajasthan roadshow comes to Karnataka

ರಾಜಸ್ಥಾನ ವಿಫುಲವಾದ ನೈಸರ್ಗಿಕ ಸಂಪತ್ತು, ಭೂಮಿ, ಇಂಧನ, ಕೌಶಲ್ಯ ಹೊಂದಿದ ಮಾನವಸಂಪನ್ಮೂಲ, ಉತ್ತಮ ಕೈಗಾರಿಕೆ ಮೂಲಸೌಕರ್ಯ ಮತ್ತು ಸುಲಭವಾಗಿ ವಹಿವಾಟು ನಡೆಸಬಹುದಾದ ವ್ಯವಸ್ಥೆಗಳನ್ನು ಹೊಂದಿದೆ. ನಾವು ನಮ್ಮಲ್ಲಿನ ಅವಕಾಶವನ್ನು ಪ್ರದರ್ಶಿಸಲು ಕರ್ನಾಟಕದ, ಜಾಗತಿಕ ಹೂಡಿಕೆದಾರರನ್ನು ಸ್ವಾಗತಿಸುತ್ತೇವೆ. ಹೂಡಿಕೆ ಸ್ನೇಹಿ ವಾತಾವರಣ ಮತ್ತು ಪರಿಸರ ನಮ್ಮಲಿದೆ ಎಂದರು.

'ರಾಜಸ್ಥಾನ ಉತ್ಪಾದಕ ಆಧಾರಿತ ಉದ್ಯಮ ವಿಸ್ತರಣೆ ಎದುರು ನೋಡುತ್ತಿರುವವರಿಗೆ ಆದ್ಯತೆಯ ತಾಣವಾಗಿದೆ. ರಾಜ್ಯದಲ್ಲಿನ ವರ್ಷದುದ್ದಕ್ಕು 24*7 ವಿದ್ಯುತ್ ಲಭ್ಯತೆ ಮತ್ತು ಅತ್ಯಗತ್ಯ ಮೂಲವಸ್ತುಗಳ ಲಭ್ಯತೆ ಹಾಗೂ ಭೂಮಿ ಉದ್ಯಮ ಸ್ಥಾಪನೆಗೆ ಉತ್ತಮ ವೇದಿಕೆ ಒದಗಿಸಿಕೊಡುತ್ತದೆ.

ರಾಜ್ಯ ಸರ್ಕಾರ ಕೈಗಾರಿಕೆ ನೀತಿಗಳನ್ನು ಸಡಿಲಿಸಿದ್ದು ಸಣ್ಣ ಮತ್ತು ಬೃಹತ್ ಹೂಡಿಕೆದಾರರ ಆದ್ಯೆತಯನ್ನು ಪೂರೈಸುವ ನಿಟ್ಟಿನಲ್ಲಿ ಮರು ವಿಮರ್ಶೆ ನಡೆಸಿದೆ. ರಾಜ್ಯಕ್ಕೆ ಹೂಡಿಕೆ ಆಕರ್ಷಿಸಲು ನಾವು ಏಕ ಗವಾಕ್ಷಿಯ ಪ್ರವೇಶ ನೀತಿ ಪರಿಚಯಿಸಿದ್ದೇವೆ.

ಬೆಂಗಳೂರಿನಿಂದ ಸಿಕ್ಕ ವ್ಯಾಪಕ ಪ್ರತಿಕ್ರಿಯೆಯಿಂದ ಸಂತೋಷವಾಗಿದೆ. ಈ ವರ್ಷದ ಅಂತ್ಯದಲ್ಲಿ ನಡೆಯುವ ಶೃಂಗಸಭೆಯಲ್ಲಿ ನಾವು ಕರ್ನಾಟಕದಿಂದ ಪ್ರಬಲ ಭಾಗವಹಿಸುವಿಕೆ ಎದುರು ನೋಡುತ್ತೇವೆ ಎಂದರು.

ಹೂಡಿಕೆ ಲಾಭಗಳೇನು?: ರಾಜಸ್ಥಾನದಲ್ಲಿ ಹೂಡಿಕೆ ಲಾಭಗಳನ್ನು ವಿವರಿಸಿದ ಸಿ.ಎಸ್.ರಾಜನ್, ರಾಜಸ್ಥಾನದಲ್ಲಿನ ಹೂಡಿಕೆದಾರರು 385 ದಶಲಕ್ಷ ಜನಸಂಖ್ಯೆಯೊಂದಿಗೆ ದೇಶದ ಪ್ರಮುಖ 5 ರಾಜ್ಯಗಳಿಂದ ನೇರ ಸಂಪರ್ಕ ಹೊಂದಿದೆ.

ಭಾರತದಲ್ಲಿ ನಾವು ರಾಷ್ಟ್ರೀಯ ಹೆದ್ದಾರಿಯ ದ್ವಿತೀಯ ಬೃಹತ್ ಸಂಪರ್ಕ ಜಾಲ ಹೊಂದಿದ್ದೇವೆ. 5,822 ಕಿ.ಮೀ ಪ್ರಬಲ ರೈಲ್ವೆ ನೆಟ್‍ವರ್ಕ್ ಹೊಂದಿದ್ದೇವೆ. 3 ಏರ್ ಪೋರ್ಟ್ ಗಳು ದೇಶೀಯ ಮತ್ತು ಅಂತಾರಾಷ್ಟ್ರೀಯ ಸಂಪರ್ಕ ಕಲ್ಪಿಸಲಿವೆ ಎಂದರು.

'ರಾಜ್ಯದಲ್ಲಿ ಸಾಕಷ್ಟು ಭೂಮಿ ಇದೆ. 19,200 ಎಕರ ಪ್ರದೇಶದಲ್ಲಿ 324 ಅತ್ಯುತ್ತಮವಾಗಿ ಅಭಿವೃದ್ಧಿಗೊಂಡ ಕೈಗಾರಿಕೆ ಪ್ರದೇಶಗಳಿವೆ. ದಿಲ್ಲಿ ಮುಂಬೈ ಇಂಡಸ್ಟ್ರಿಯಲ್ ಕಾರಿಡಾರ್ ಡೆಡಿಕೆಟೆಡ್ ಫ್ರೈಟ್ ಕಾರಿಡಾರ್ ನ ಉಭಯ ದಿಕ್ಕುಗಳಲ್ಲಿ ಅತ್ಯುತ್ತಮ ಹೂಡಿಕೆ ಅವಕಾಶ ಕಲ್ಪಿಸುತ್ತದೆ ಎಂದರು.

Rajasthan roadshow

ಸಿಐಐ ಕರ್ನಾಟಕ ರಾಜ್ಯ ಕೌನ್ಸಿಲ್ ಅಧ್ಯಕ್ಷ ಮತ್ತು ಭಾರತ್ ಫ್ರಿಟ್ಜ್ ವೆರ್ನರ್ ಲಿಮಿಟೆಡ್ ನ ಸಿಇಒ ರವಿ ರಾಘವನ್, ರಾಜಸ್ಥಾನ ಹೂಡಿಕೆ ಉತ್ತೇಜನ ಯೋಜನೆ ಘೋಷಣೆ ಮತ್ತು ರಾಜಸ್ಥಾನದಲ್ಲಿ ಹೊಸ ಸೌರ ನೀತಿ ಸ್ವಾಗತಾರ್ಹ ಬೆಳವಣಿಗೆ. ರಾಜಸ್ಥಾನ ಹೂಡಿಕೆ ಉತ್ತೇಜನ ಯೋಜನೆ ಬಹು ನಿರೀಕ್ಷಿತ ನೀತಿ. ಇದು ರಾಜ್ಯದಲ್ಲಿ ಸುಲಭ ಹೂಡಿಕೆಗಾಗಿ ಸರ್ಕಾರ ತೆಗೆದುಕೊಂಡಿರುವ ಹೆಜ್ಜೆಗಳಲ್ಲಿ ಒಂದು ಎಂದರು.

ಗ್ರಾವಿಟ್ ಇಂಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಜತ್ ಅಗರ್ ವಾಲ್ ಮಾತನಾಡಿ, ರಾಜಸ್ಥಾನ ಹೂಡಿಕೆ ಉತ್ತೇಜನ ಯೋಜನೆಯಲ್ಲಿ ವಲಯವಾರು ಸೇರ್ಪಡೆಗಳನ್ನು ಮಾಡಲಾಗಿದೆ. ಸೆರ್ಯಾಮಿಕ್ ಮತ್ತು ಗ್ಲಾಸ್, ಡೈರಿ, ಜವಳಿ ಮತ್ತು ತಾಂತ್ರಿಕ ಜವಳಿ, ಔಷಧ, ಎಲೆಕ್ಟ್ರಾನಿಕ್ಸ್, ಎಂಎಸ್‍ಎಂಇ ಮತ್ತು ಪ್ರವಾಸೋದ್ಯಮಗಳು ಖಚಿತವಾಗಿ ಧನಾತ್ಮಕ ಬೆಳವಣಿಗೆ ನೀಡುತ್ತವೆ. ರಾಜಸ್ಥಾನ ಬೃಹತ್ ಪ್ರಮಾಣದ ಕಚ್ಚಾ ವಸ್ತುಗಳನ್ನು ಹೊಂದಿದ್ದು, ಇದು ಸೆರ್ಯಾಮಿಕ್ ಕ್ಷೇತ್ರಕ್ಕೆ ಅತ್ಯುತ್ತಮವಾಗಿದೆ ಎಂದರು.

ಈ ಕಾರ್ಯಕ್ರಮ ಒನ್ ಆನ್ ಒನ್ ಮತ್ತು ಬಿ2ಜಿ ಸಭೆಗಳು ಮತ್ತು ಪ್ರಾತ್ಯಕ್ಷತೆಗಳನ್ನು ಹೊಂದಿತ್ತು. ಮುಂಚೂಣಿ ಉದ್ಯಮಿಗಳು ಮತ್ತು ಕಾರ್ಪೊರೇಟ್ ನಾಯಕರನ್ನು ಭೇಟಿ ಮಾಡಿ ರಾಜ್ಯದಲ್ಲಿನ ಹೂಡಿಕೆ ಅವಕಾಶಗಳನ್ನು ಪ್ರದರ್ಶಿಸಿತು. ಹಾಗೂ ಇದರ ನಂತರ ರಾಜ್ಯ ಸರ್ಕಾರ ಸಾಕಷ್ಟು ದೇಶೀಯ ಮತ್ತು ಅಂತಾರಾಷ್ಟ್ರೀಯ ರೋಡ್ ಶೋಗಳನ್ನು ನಡೆಸಲಿದೆ.

ಹಿಂದೆ ಜರ್ಮನಿ, ಜಪಾನ್, ಪುಣೆ, ಕೋಲ್ಕತಾ, ಚೆನ್ನೈ, ಹೈದ್ರಾಬಾದ್ ಮತ್ತು ಲೂಧಿಯಾನಗಳಲ್ಲಿ ರೋಡ್ ಶೋ ನಡೆಸಿ ವ್ಯಾಪಕ ಯಶಸ್ಸು ಸಾಧಿಸಿ, ಅನೇಕ ಹೂಡಿಕೆದಾರರನ್ನು ಆಕರ್ಷಿಸಿದೆ.

English summary
The Minister for Urban Development and Housing, Government of Rajasthan, Rajpal Singh Shekhawat is in Bengaluru to showcase investment opportunities in Rajasthan and to participate in an investors meet organised by the Government of Rajasthan in association with Confederation of Indian Industry (CII) today(May.5)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X