ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೀನಾಮೆ ಡ್ರಾಮಾ ಖತಂ, ಮನೆಯಿಂದ ಆಫೀಸಿಗೆ ಸಿಇಒ

By Mahesh
|
Google Oneindia Kannada News

ನವದೆಹಲಿ, ಮೇ.5: ಜೀವಿತಾವಧಿ, ಕೆಲಸದ ಅವಧಿ ಲೆಕ್ಕಾಚಾರ ಹಾಕಿದರೆ ನನಗೆ ಅಂಥ ಟೈಮೇ ಸಿಗುತ್ತಿಲ್ಲ ಎಂದು ಹೇಳಿ ರಾಜೀನಾಮೆ ನೀಡಿದ್ದ ಹೌಸಿಂಗ್.ಕಾಂ ಸಿಇಒ ರಾಹುಲ್ ಯಾದವ್ ತಮ್ಮ ರಾಜೀನಾಮೆಯನ್ನು ಹಿಂಪಡೆದುಕೊಂಡಿದ್ದಾರೆ. ಈ ಮೂಲಕ ಬೆಳಗ್ಗಿನಿಂದ ನಡೆದ ರಾಜೀನಾಮೆ ಪ್ರಹಸನ ಅಂತ್ಯಗೊಂಡಿದೆ.

ನಾನು ನನ್ನ ನಿರ್ಧಾರ ಬದಲಾಯಿಸಿದ್ದೇನೆ. ಹೌಸಿಂಗ್.ಕಾಂ ಬೋರ್ಡ್ ಜೊತೆ ಇನ್ನೊಂದು ಸುತ್ತಿನ ಮಾತುಕತೆ ನಡೆಸಿದ ಮೇಲೆ ರಾಜೀನಾಮೆ ಹಿಂಪಡೆಯುವ ನಿರ್ಣಯಕ್ಕೆ ಬಂದಿದ್ದೇನೆ. ಬೋರ್ಡ್ ಸದಸ್ಯರ ವಿರುದ್ಧ ನಾನು ನೀಡಿದ ಪ್ರತಿಕ್ರಿಯೆಗಳನ್ನು ಹಿಂಪಡೆಯುತ್ತೇನೆ. ಹೌಸಿಂಗ್.ಕಾಂ ಸಿಇಒ ಆಗಿ ಮುಂದುವರೆಯುತ್ತೇನೆ ಹಾಗೂ ಇನ್ನಷ್ಟು ಉತ್ತಮ ಸೇವೆ ನಮ್ಮ ಗ್ರಾಹಕರಿಗೆ ನೀಡುತ್ತೇನೆ ಎಂದು ರಾಹುಲ್ ತಾದವ್ ಅವರು ಸಂಜೆ ವೇಳೆಗೆ ಹೇಳಿದ್ದಾರೆ.

House

ಇದಕ್ಕೂ ಮುನ್ನ ಏ.30ರಂದು ರಾಹುಲ್ ಬರೆದ ರಾಜೀನಾಮೆ ಪತ್ರ ಪ್ರಮುಖ ದಿನ ಪತ್ರಿಕೆಗಳು, ಸಾಮಾಜಿಕ ಜಾಲ ತಾಣಗಳಲ್ಲಿ ರಾಹುಲ್ ರಾಜೀನಾಮೆ ಪತ್ರದ ಸಾರಾಂಶ ಪ್ರಕಟಗೊಂಡಿತ್ತು.
I had calculated long back (by taking avg life expectancy minus avg sleeping hrs) that I only have ~3L (hours) in my life. ~3L hrs are certainly not much to waste with you guys!

Hence resigning from the position of directorship, chairmanship and the CEO position of the company. I'm available for the next 7 days to help in the transition. Won't give more time after that. So please be efficient in this duration. ಎಂದು ಬರೆದಿದ್ದರು.

ಹೌಸಿಂಗ್.ಕಾಂ : ಯಾದವ್ ಹಾಗೂ 11 ಜನ ಐಐಟಿಯನ್ ಗಳು ಸೇರಿ ಆರಂಭಿಸಿದ ರಿಯಲ್ ಎಸ್ಟೇಟ್ ಆಧಾರಿತ ಸಂಸ್ಥೆ ಇದಾಗಿದೆ. ತಂತ್ರಜ್ಞಾನ ಬಳಸಿಕೊಂಡು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿರುವ ಈ ಸಂಸ್ಥೆಗೆ ಜಪಾನ್ ನ ಸಾಫ್ಟ್ ಬ್ಯಾಂಕ್ ಸುಮಾರು 90 ಮಿಲಿಯನ್ ಡಾಲರ್ ಹೂಡಿಕೆ ಮಾಡಿತ್ತು.

English summary
Resignation Drama ends, Rahul Yadav, CEO of online real estate start-up Housing.com has withdrawn his resignation on Tuesday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X