ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಲಯನ್ಸ್ ಜಿಯೋ ಜತೆ ಉಬರ್ ಮಹತ್ವದ ಡೀಲ್

ಜಗತ್ತಿನಲ್ಲಿ ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಡಿಜಿಟಲ್ ಕಂಪನಿಯಾದ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (ಜಿಯೋ) ಮತ್ತು ದೇಶದ ಅತ್ಯಂತ ನೆಚ್ಚಿನ ಸವಾರಿ ಹಂಚಿಕೊಳ್ಳುವಂಥ App ಉಬರ್ ಈಗ ಯೋಜನಾತ್ಮಕವಾದ ಒಪ್ಪಂದಕ್ಕೆ ಸಹಿ ಹಾಕಿವೆ.

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 20: ಜಗತ್ತಿನಲ್ಲಿ ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಡಿಜಿಟಲ್ ಕಂಪನಿಯಾದ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (ಜಿಯೋ) ಮತ್ತು ದೇಶದ ಅತ್ಯಂತ ನೆಚ್ಚಿನ ಸವಾರಿ ಹಂಚಿಕೊಳ್ಳುವಂಥ App ಉಬರ್ ಈಗ ಯೋಜನಾತ್ಮಕವಾದ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಮೂಲಕ ತಮ್ಮ ಬಳಕೆದಾರರಿಗೆ ಜಿಯೋ ಡಿಜಿಟಲ್ ಲೈಫ್ ವ್ಯವಸ್ಥೆಯ ಲಾಭವನ್ನು ತರುವ ಉದ್ದೇಶವನ್ನು ಹೊಂದಿದ್ದಾರೆ.

ರಿಲೆಯನ್ಸ್ ಪೇಮೆಂಟ್ ಸಲ್ಯೂಷನ್ಸ್ ಲಿಮಿಟೆಡ್ ಸಾದರಪಡಿಸುವ ಪಿಪಿಐ ವ್ಯಾಲೆಟ್ ಆದ ಜಿಯೋ ಮನಿ ಮತ್ತು ಉಬರ್ ಪರಸ್ಪರ ಒಪ್ಪಂದವನ್ನು ಪ್ರಕಟಿಸಿವೆ. ಈ ಒಪ್ಪಂದ ಉಬರ್ ಸವಾರರಿಗೆ ಜಿಯೋಮನಿ ಬಳಸಿ ಹಣ ಪಾವತಿ ಮಾಡಲು ಮತ್ತು ಅದರೊಂದಿಗೆ ಭಾರತದಲ್ಲಿ ಡಿಜಿಟಲ್ ವಹಿವಾಟಿನ ವ್ಯವಸ್ಥೆಯನ್ನು ವಿಸ್ತರಿಸಲು ಅವಕಾಶ ಮಾಡಿಕೊಡುತ್ತಿದೆ.

ಜಿಯೋಮನಿ app ಒಳಗೆ ತಮ್ಮ ಉಬರ್ ಸವಾರಿಗಳಿಗೆ ಮನವಿ ಮತ್ತು ಹಣ ಪಾವತಿ ಮಾಡಲು ಶೀಘ್ರದಲ್ಲಿಯೇ ಜಿಯೋಮನಿ ಬಳಕೆದಾರರಿಗೆ ಸಾಧ್ಯವಾಗಲಿದೆ. ಈ ಪಾಲುದಾರಿಕೆ ನಗದುರಹಿತ ಪಾವತಿಗಳಿಗೆ ಭಾರತದಲ್ಲಿ ಪ್ರಮುಖ ಚಾಲನೆ ನೀಡಲಿದ್ದು ಲಕ್ಷಾಂತರ ಜಿಯೋ ಬಳಕೆದಾರರಿಗೆ ಸಂಚಾರದ ಆಯ್ಕೆಗಳನ್ನು ಪೂರೈಸಲಿದೆ.

ಇಂದು ಆರಂಭವಾದಂತೆ, ಉಬರ್ ಹಂತ ಹಂತವಾಗಿ ಜಿಯೋಮನಿ ಹಣ ಪಾವತಿ ಆಯ್ಕೆಯನ್ನು ತನ್ನ ಬಳಕೆದಾರರಿಗೆ ದೇಶದಾದ್ಯಂತ ನೀಡಲಿದೆ. ಈ ಸಮಗ್ರೀಕರಣ ಉಬರ್ ಸವಾರರಿಗೆ ತೊಂದರೆರಹಿತ ಹಣಪಾವತಿ ಅನುಭವವನ್ನು ನೀಡುವುದಲ್ಲದೆ ಜಿಯೋಮನಿಯ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಉಪಯೋಗಿಗಳ ಸಂಖ್ಯೆಯನ್ನು ಭಾರತದಾದ್ಯಂತ ಹೆಚ್ಚಿಸಲು ಅಲ್ಲದೆ ಅವರಿಗೆ ಡಿಜಿಟಲ್ ವಹಿವಾಟಿನ ಹೆಚ್ಚುವರಿ ಮಾರ್ಗವನ್ನು ಪೂರೈಸಲಿದೆ.

ಪ್ರತಿ ಭಾರತೀಯರಿಗೆ ನೀಡುವ ಉದ್ದೇಶ

ಪ್ರತಿ ಭಾರತೀಯರಿಗೆ ನೀಡುವ ಉದ್ದೇಶ

ಡಿಜಿಟಲ್ ಜೀವನವನ್ನು ಭಾರತೀಯರು ಸಂಪೂರ್ಣವಾಗಿ ಬದುಕಲು ಅವಕಾಶ ಮಾಡಿಕೊಡುವ ಸಂಪೂರ್ಣ ವ್ಯವಸ್ಥೆಯ ಮೂಲಕ ಇದನ್ನು ಸಾಧಿಸಲಾಗುತ್ತಿದೆ. ಜಿಯೋಮನಿ ಜಿಯೋ ವ್ಯವಸ್ಥೆಯ ಸಮಗ್ರ ಭಾಗವಾಗಿದ್ದು ಡಿಜಿಟಲ್ ವ್ಯವಹಾರಗಳಲ್ಲಿ ಅತ್ಯಂತ ನೆಚ್ಚಿನ ಆಯ್ಕೆಯಾಗಿ ಹೊರಹೊಮ್ಮುತ್ತಿದೆ. ಬಳಕೆಯಲ್ಲಿ ಸುಲಭವಾಗಿರುವುದು, ಸಂವೇದನಾಶೀಲ ಇಂಟರ್‍ಫೇಸ್, ಮತ್ತು ಬೆಳೆಯುತ್ತಿರುವ ಸ್ವೀಕರಣೆಯಿಂದಾಗಿ ಇದು ಜನಪ್ರಿಯಗೊಳ್ಳುತ್ತಿದೆ. ಜಿಯೋಮನಿ ಈಗ ಉಬರ್‍ನೊಂದಿಗೆ ಸಮಗ್ರೀಕರಣಗೊಳ್ಳುವುದರಿಂದ ಇನ್ನೂ ಅನೇಕ ಉಬರ್ ವಹಿವಾಟುಗಳನ್ನು ಡಿಜಿಟಲ್ ವೇದಿಕೆಯಲ್ಲಿ ಚಾಲನೆ ನೀಡಲು ಸಾಧ್ಯವಾಗಲಿದೆ

ರಿಲೆಯನ್ಸ್ ಜಿಯೋದೊಂದಿಗೆ ಪಾಲುದಾರಿಕೆ

ರಿಲೆಯನ್ಸ್ ಜಿಯೋದೊಂದಿಗೆ ಪಾಲುದಾರಿಕೆ

ಭಾರತದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ಎರಡು ವ್ಯವಸ್ಥೆಗಳ ನಡುವಿನ ಸಂಬಂಧದ ಅವಕಾಶಗಳನ್ನು ಅನಾವರಣಗೊಳಿಸಲು ರಿಲೆಯನ್ಸ್ ಜಿಯೋದೊಂದಿಗೆ ಪಾಲುದಾರಿಕೆ ಹೊಂದಲು ನಾವು ಹರ್ಷಗೊಂಡಿದ್ದೇವೆ. ಡಿಜಿಟಲ್ ಪಾವತಿಗಳು ನಮ್ಮ ದೈನಂದಿನ ಜೀವನದ ಭಾಗವಾಗಿವೆ. ಜಿಯೊಮನಿಯನ್ನು ಹಣಪಾವತಿಯ ಆಯ್ಕೆಯಾಗಿ ಸೇರಿಸಿಕೊಳ್ಳುವುದರಿಂದ ನಮ್ಮ ಸವಾರರು ಹೆಚ್ಚು ಗುರುತಿನದಾದ ಮತ್ತು ಸತತ ಉತ್ತಮ ಪ್ರದರ್ಶನದ ಹಣಪಾವತಿ ಬಳಕೆಯ ಅನುಭವವನ್ನು ಹೊಂದಬಹುದಾಗಿದೆ. ಈ ಯೋಜನಾತ್ಮಕ ಒಪ್ಪಂದದ ಮೂಲಕ ಭಾರತೀಯರಿಗೆ ಡಿಜಿಟಲ್ ಪರಿಹಾರಗಳ ಬಳಕೆಯ ಗಾತ್ರವನ್ನು ಕ್ಷಿಪ್ರಗತಿಯಲ್ಲಿ ವಿಸ್ತರಿಸುವುದನ್ನು ನಾವು ಎದುರುನೋಡುತ್ತಿದ್ದೇವೆ

ಜಿಯೋಮನಿ ಮೂಲಕ ಪಾವತಿ

ಜಿಯೋಮನಿ ಮೂಲಕ ಪಾವತಿ

ಈ ಸಹಯೋಗವನ್ನು ಆಚರಿಸುವುದಕ್ಕಾಗಿ ಜಿಯೋಮನಿ ಮತ್ತು ಉಬರ್ ಸೇರಿಕೊಂಡು ಜಿಯೋಮನಿ ಮೂಲಕ ಪಾವತಿ ಮಾಡುವ ಪ್ರತಿ ಬಳಕೆದಾರರಿಗೆ ಪ್ರತ್ಯೇಕವಾದ ರಿಯಾಯಿತಿ ಮುಂತಾದವುಗಳನ್ನು ನೀಡುತ್ತಿವೆ. ಆಕರ್ಷಕ ಕೊಡುಗೆಗಳು ಮತ್ತು ಕೂಪನ್ ‍ಗಳು ಜಿಯೋಮನಿ app ಮೂಲಕ ಲಭ್ಯವಿದ್ದು ಈ ಆಕರ್ಷಕ ಕೊಡುಗೆಗಳೊಂದಿಗೆ ಬಹು ಸ್ಥಳಗಳಲ್ಲಿ ಜಿಯೋಮನಿಯ ತೊಂದರೆರಹಿತ ಹಣ ಪಾವತಿ ಅನುಭವವನ್ನು ಜಿಯೋಮನಿ ಬಳಕೆದಾರರು ಆನಂದಿಸಲಿದ್ದಾರೆ.

 4ಜಿ ಎಲ್‍ಟಿಇ ತಂತ್ರಜ್ಞಾನ

4ಜಿ ಎಲ್‍ಟಿಇ ತಂತ್ರಜ್ಞಾನ

ರಿಲೆಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್(ಜಿಯೋ) ಸಂಸ್ಥೆ ರಿಲೆಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‍ಐಎಲ್)ನ ಅಂಗಸಂಸ್ಥೆಯಾಗಿದ್ದು ವಿಶ್ವಮಟ್ಟದ ಆಲ್-ಐಪಿ ಡಾಟಾ ಸ್ಟ್ರಾಂಗ್ ಫ್ಯೂಚರ್ ಪ್ರೂಫ್ ನೆಟ್‍ವರ್ಕ್ ಅನ್ನು ನಿರ್ಮಿಸಿದ್ದು ಇತ್ತೀಚಿನ 4ಜಿ ಎಲ್‍ಟಿಇ ತಂತ್ರಜ್ಞಾನ ಬಳಸಿದೆ. ತಳಮಟ್ಟದಿಂದ ಮೊಬೈಲ್ ವಿಡಿಯೋ ನೆಟ್‍ವರ್ಕ್ ಆಗಿ ನಿರ್ಮಿಸಲಾದ ಏಕೈಕ ನೆಟ್‍ವರ್ಕ್ ಇದಾಗಿದ್ದು ವಾಯ್ಸ್ ಓವರ್ ಎಟಿಇ ತಂತ್ರಜ್ಞಾನವನ್ನು ಬೆಂಬಲಿಸುತ್ತಿದೆ. ಭವಿಷ್ಯಕ್ಕೆ ಇದು ಸಿದ್ಧವಾಗಿದ್ದು ತಂತ್ರಜ್ಞಾನಗಳು 5ಜಿ, 6ಜಿ ಮತ್ತು ಮುಂದಕ್ಕೆ ಮುಂದುವರಿದಂತೆ ಹೆಚ್ಚಿನ ಡಾಟಾವನ್ನು ಬೆಂಬಲಿಸಲು ಸುಲಭವಾಗಿ ಮೇಲ್ದರ್ಜೆಗೇರಿಸಬಹುದಾಗಿದೆ.

ಇದು ಕೇವಲ ಒಂದು ವ್ಯಾಲೆಟ್ ಮಾತ್ರವಲ್

ಇದು ಕೇವಲ ಒಂದು ವ್ಯಾಲೆಟ್ ಮಾತ್ರವಲ್

ಇದು ಕೇವಲ ಒಂದು ವ್ಯಾಲೆಟ್ ಮಾತ್ರವಲ್ಲದೆ ಇನ್ನು ಹೆಚ್ಚಿನದಾಗಿದೆ. ಎಲ್ಲೆಡೆಗಳಲ್ಲಿ ನಗದುರಹಿತ ಮಾರ್ಗದಲ್ಲಿ ಹಣ ಪಾವತಿ ಮಾಡಲು ನಿಮ್ಮನ್ನು ಅದು ಸಬಲೀಕರಿಸುತ್ತದೆ.

ಮೊಬೈಲ್ ಮತ್ತು ಡಿಟಿಎಚ್ ರಿಚಾರ್ಜ್, ಭೌತಿಕ ಮಳಿಗೆಗಳಲ್ಲಿ ದೈನಂದಿನ ಹಣಪಾವತಿ, ಹಣ ಕಳುಹಿಸುವುದು ಮತ್ತು ಸ್ವೀಕರಿಸುವುದು, ವಿಮಾ ಕಂತು ಪಾವತಿ, ನಿಮ್ಮ ಹಣಕಾಸು ನಿರ್ವಹಣೆ ಮಾಡಬಹುದಲ್ಲದೆ ಅದ್ಭುತವಾದ ಡೀಲ್ ಗಗಳನ್ನು ಪಡೆಯಬಹುದಾಗಿದೆ. ಜಿಯೋಮನಿ ಮೂಲಕ ರಿಲೆಯನ್ಸ್ ಪೇಮೆಂಟ್ ಸಲ್ಯೂಷನ್ಸ್ ಲಿಮಿಟೆಡ್ ನೀಡುತ್ತಿದ್ದು ಇದು ರಿಲೆಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‍ನ ಅಂಗಸಂಸ್ಥೆಯಾಗಿದೆ.

English summary
Reliance Jio Infocomm Ltd (‘Jio’), the world’s fastest growing digital services company and Uber, the country’s preferred ridesharing app, have announced a strategic partnership aimed at bringing the benefits of Jio Digital Life ecosystem to their users.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X