ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್ 30ರ ತನಕ ಜಿಯೋ ಹ್ಯಾಪಿ ನ್ಯೂ ಇಯರ್ ಯೋಜನೆ ವಿಸ್ತರಣೆ?

ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್‌ ಜಿಯೋ ನೀಡಿರುವ ಹ್ಯಾಪಿ ನ್ಯೂ ಇಯರ್ ಆಫರ್‌ ಮಾರ್ಚ್ 31ಕ್ಕೆ ಕೊನೆಗೊಳ್ಳಲಿದ್ದು, ನಂತರ ಗ್ರಾಹಕರು ಹಣ ನೀಡಿ ರೀಚಾರ್ಜ್ ಮಾಡಿಸಿಕೊಳ್ಳಬೇಕಾಗುತ್ತದೆ. ಏಪ್ರಿಲ್ 30ರ ತನಕ ವಿಸ್ತರಣೆ ಸಾಧ್ಯತೆ

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 27: ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್‌ ಜಿಯೋ ನೀಡಿರುವ ಹ್ಯಾಪಿ ನ್ಯೂ ಇಯರ್ ಆಫರ್‌ ಮಾರ್ಚ್ 31ಕ್ಕೆ ಕೊನೆಗೊಳ್ಳಲಿದ್ದು, ನಂತರ ಗ್ರಾಹಕರು ಹಣ ನೀಡಿ ರೀಚಾರ್ಜ್ ಮಾಡಿಸಿಕೊಳ್ಳಬೇಕಾಗುತ್ತದೆ. ಆದರೆ, ಯೋಜನೆಯನ್ನು ಏಪ್ರಿಲ್ 30ರ ತನಕ ವಿಸ್ತರಿಸುವ ಸುಳಿವು ಸಿಕ್ಕಿದೆ.

ಸೆಪ್ಟೆಂಬರ್ 5,2016ರಂದು ಚಾಲನೆ ಸಿಕ್ಕ ಈ ಆಫರ್ ನಲ್ಲಿ ಗ್ರಾಹಕರಿಗೆ ಉಚಿತ ಜಿಯೋ ಸಿಮ್, ಅನಿಯಮಿತ ಇಂಟರ್ನೆಟ್ ಡಾಟಾ, ಉಚಿತ ವಾಯ್ಸ್ ಕಾಲ್ ನೀಡಲಾಯಿತು. [ಟೆಲಿಕಾಂ ಸಮರ : ಜಿಯೋ ಪ್ರೈಮ್ vs ಏರ್ ಟೆಲ್, ವೋಡಾಫೋನ್, ಐಡಿಯಾ]


ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್ : ಡಿಸೆಂಬರ್ 01ರಂದು ಚಾಲನೆ ನೀಡಲಾಯಿತು. ಇದರಲ್ಲಿ ಪ್ರತಿ ದಿನ 1 ಜಿಬಿ ಡಾಟಾ ಉಚಿತವಾಗಿದ್ದು, ಮೊದಲ ಬಾರಿಗೆ ಗ್ರಾಹಕರಿಂದ ಹಣ ಪಡೆಯುವ ವ್ಯವಸ್ಥೆಗೆ ರಿಲಯನ್ಸ್ ಕಾಲಿಟ್ಟಿತು. ಈಗ ಈ ಯೋಜನೆ ವಿಸ್ತರಣೆಯಾಗಲಿದೆ.

Reliance Jio May Be Extending Its Happy New Year Offer Until April 30

ಜಿಯೋ ಪ್ರೈಮ್: ಫೆಬ್ರವರಿ 21, 2017ರಂದು ಚಾಲನೆ ಸಿಕ್ಕ ಈ ಆಫರ್ ನಲ್ಲಿ ಪ್ರತಿದಿನ 1 ಜಿಬಿ ಉಚಿತ ಡಾಟಾ 303 ಪ್ರತಿ ತಿಂಗಳ ರೀಚಾರ್ಚ್ ನೊಂದಿಗೆ ಮಾರ್ಚ್ 31, 2017ರ ತನಕ ಲಭ್ಯ. ವಾರ್ಷಿಕ 99ರು ಪಾವತಿಸಿದರೆ ಮಾರ್ಚ್ 31, 2018ರ ತನಕ ಸದಸ್ಯತ್ವ ಖಾತ್ರಿ. ಜತೆಗೆ ಪ್ರತಿ ತಿಂಗಳ 303 ರೀಚಾರ್ಜ್ ನೊಂದಿಗೆ 28 ದಿನಕ್ಕೆ 28ಜಿಬಿ ಡಾಟಾ ಗ್ರಾಹಕರಿಗೆ ಲಭ್ಯವಿರುತ್ತದೆ.

ಜಿಯೋ ಪ್ರೈಮ್ ನಲ್ಲಿ ಏನೇನಿದೆ? :
• 12 ತಿಂಗಳುಗಳಿಗೆ ಆಫರ್ ಮಾನ್ಯವಾಗಿರುತ್ತದೆ, ಅಂದರೆ 2018ರ ಮಾರ್ಚ್ ತನಕ ಆಫರ್ ಕೇವಲ ಕೆಲವೆ ಆಯ್ದ ಬಳಕೆದಾರರಿಗೆ, ಆಪರೇಟರ್‍ಗಳು ಆಯ್ಕೆ ಮಾಡಿದ (ವಿಭಜಿತ ಆಫರ್) ಬಳಕೆದಾರರಿಗೆ ಮಾತ್ರ ಮಾನ್ಯ.
• 15ನೇ ಮಾರ್ಚ್ 2017ಕ್ಕಿಂತ ಮುನ್ನ ಮೊದಲ ರಿಚಾರ್ಜ್ ಮಾಡಿದರೆ ಮಾತ್ರ ಆಫರ್ ಲಭ್ಯ.
• 4ಜಿ ಹ್ಯಾಂಡ್‍ಸೆಟ್‍ಗಳಿಗೆ ಮಾತ್ರ ಮಾನ್ಯ.
• 3ಜಿ ಬಳಕೆದಾರರಿಗೆ ಆಫರ್ ಮಾನ್ಯವಿರುವುದಿಲ್ಲ
• ಆಯ್ದ ವೃತ್ತಗಳಲ್ಲಿ ಮಾತ್ರ ಲಭ್ಯ 12 ತಿಂಗಳ ಖಾತರಿ ಇಲ್ಲ, ಯಾವುದೇ ವೇಳೆಯಲ್ಲಿ ಪೂರ್ವಸೂಚನೆ ಇಲ್ಲದೆ ಆಫರ್ ಹಿಂದೆಗೆದುಕೊಳ್ಳುವ ಹಕ್ಕನ್ನು ಆಪರೇಟರ್ ಹೊಂದಿದೆ.

English summary
Reliance Jio’s Happy New Year offer expiring March 31.According to TeleAnalysis, which quotes internal sources at Reliance Jio, the company is unhappy with the slow adoption rate of its Prime Membership plan, and is hoping to improve those numbers by extending the deadline by another month
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X