ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4ಜಿ ಸ್ಪೀಡ್ : ಏರ್ ಟೆಲ್ ಹಿಂದಿಕ್ಕಿದ ರಿಲಯನ್ಸ್ ಜಿಯೋ

ಮಾರ್ಚ್ ತಿಂಗಳಿನಲ್ಲಿ ರಿಲಯನ್ಸ್ ಜಿಯೋ‌ ಮೊಬೈಲ್ ಜಾಲದ ಸರಾಸರಿ ಡೌನ್‌ಲೋಡ್ ವೇಗ ಪ್ರತಿಸ್ಪರ್ಧಿಗಳಾದ ಐಡಿಯಾ ಸೆಲ್ಯುಲರ್ ಹಾಗೂ ಭಾರ್ತಿ ಏರ್‌ಟೆಲ್ ಹೋಲಿಕೆಯಲ್ಲಿ ಬಹುಪಾಲು ಎರಡರಷ್ಟಿತ್ತು

By Mahesh
|
Google Oneindia Kannada News

ನವದೆಹಲಿ, ಏಪ್ರಿಲ್ 23: ಕಳೆದ ಮಾರ್ಚ್ ತಿಂಗಳಿನಲ್ಲಿ ರಿಲಯನ್ಸ್ ಜಿಯೋ‌ ಮೊಬೈಲ್ ಜಾಲದ ಸರಾಸರಿ ಡೌನ್‌ಲೋಡ್ ವೇಗ ಪ್ರತಿಸ್ಪರ್ಧಿಗಳಾದ ಐಡಿಯಾ ಸೆಲ್ಯುಲರ್ ಹಾಗೂ ಭಾರ್ತಿ ಏರ್‌ಟೆಲ್ ಹೋಲಿಕೆಯಲ್ಲಿ ಬಹುಪಾಲು ಎರಡರಷ್ಟಿತ್ತು ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ವರದಿ ತಿಳಿಸಿದೆ.

ಈ ಅವಧಿಯಲ್ಲಿ ಜಿಯೋ ಜಾಲದ ಸರಾಸರಿ ಡೌನ್‌ಲೋಡ್ ವೇಗ 16.48 ಮೆಗಾಬಿಟ್ಸ್ ಪರ್ ಸೆಕೆಂಡ್ (ಎಂಬಿಪಿಎಸ್) ಇದ್ದರೆ ಐಡಿಯಾ ಸೆಲ್ಯುಲರ್ ಜಾಲದಲ್ಲಿ 8.33 ಎಂಬಿಪಿಎಸ್ ಹಾಗೂ ಭಾರ್ತಿ ಏರ್‌ಟೆಲ್‌ನಲ್ಲಿ 7.66 ಎಂಬಿಪಿಎಸ್ ಇತ್ತು ಎಂದು ಈ ಮಾಸಿಕ ವರದಿ ಹೇಳುತ್ತದೆ.[ಏನಿದು ಜಿಯೋ ಧನ್ ಧನಾ ಧನ್? ಇಲ್ಲಿದೆ ಫುಲ್ ಡಿಟೇಲ್]

 Reliance Jio beats Airtel, Idea in 4G download speed in March: TRAI
16 ಎಂಬಿಪಿಎಸ್ ವೇಗದ ಸಂಪರ್ಕದಲ್ಲಿ ಒಂದು ಬಾಲಿವುಡ್ ಚಲನಚಿತ್ರವನ್ನು ಕೇವಲ ಐದು ನಿಮಿಷಗಳಲ್ಲಿ ಡೌನ್‌ಲೋಡ್ ಮಾಡುವುದು ಸೈದ್ಧಾಂತಿಕವಾಗಿ ಸಾಧ್ಯ.

ಇದೇ ಅವಧಿಯಲ್ಲಿ ವೋಡಾಫೋನ್‌ನ ಸರಾಸರಿ ಡೌನ್‌ಲೋಡ್ ವೇಗ 5.66 ಎಂಬಿಪಿಎಸ್ ಇತ್ತು. ಇದೇ ರೀತಿ ರಿಯಲನ್ಸ್ ಕಮ್ಯೂನಿಕೇಶನ್ಸ್ ಜಾಲದಲ್ಲಿ 2.64 ಎಂಬಿಪಿಎಸ್, ಟಾಟಾ ಡೊಕೊಮೊದಲ್ಲಿ 2.52 ಎಂಬಿಪಿಎಸ್, ಬಿಎಸ್‌ಎನ್‌ಎಲ್‌ನಲ್ಲಿ 2.26 ಎಂಬಿಪಿಎಸ್ ಹಾಗೂ ಏರ್‌ಸೆಲ್‌ನಲ್ಲಿ 2.01 ಎಂಬಿಪಿಎಸ್ ಸರಾಸರಿ ಡೌನ್‌ಲೋಡ್ ವೇಗ ದಾಖಲಾಗಿದೆ.[ಧನ್ ಧನಾ ಧನ್ ವಿರುದ್ಧ ಏರ್ ಟೆಲ್ ತ್ರಿಬ್ಬಲ್ ಆಫರ್]

ತಾನು ಸಂಗ್ರಹಿಸುವ ದತ್ತಾಂಶವನ್ನು 'ಮೈಸ್ಪೀಡ್' ತಂತ್ರಾಂಶದ ನೆರವಿನಿಂದ ತತ್‌ಕ್ಷಣದಲ್ಲೇ ವಿಶ್ಲೇಷಿಸುವ ಟ್ರಾಯ್ ಸರಾಸರಿ ಡೌನ್‌ಲೋಡ್ ವೇಗವನ್ನು ಲೆಕ್ಕಹಾಕುತ್ತದೆ.

ಈ ನಡುವೆ ದೆಹಲಿ-ಮುಂಬೈ ನಗರಗಳು ಹಾಗೂ ಕರ್ನಾಟಕ-ತಮಿಳುನಾಡು ರಾಜ್ಯಗಳ ವ್ಯಾಪ್ತಿಯಲ್ಲಿ ಮೊಬೈಲ್ ಜಾಲಗಳ ಸಂಪರ್ಕ ವೇಗ ಕುರಿತು 'ಓಪನ್ ಸಿಗ್ನಲ್' ಎಂಬ ಖಾಸಗಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಭಾರ್ತಿ ಏರ್‌ಟೆಲ್‌ಗೆ ಮೊದಲ ಸ್ಥಾನ ದೊರೆತಿದೆ. 11.5 ಎಂಬಿಪಿಎಸ್ ಸರಾಸರಿ ಸಂಪರ್ಕ ವೇಗದೊಡನೆ ಭಾರ್ತಿ ಏರ್‌ಟೆಲ್ ಈ ಪಟ್ಟಿಯ ಮೊದಲನೇ ಸ್ಥಾನದಲ್ಲಿದ್ದರೆ 3.92 ಎಂಬಿಪಿಎಸ್ ವೇಗದೊಡನೆ ರಿಲಯನ್ಸ್ ಜಿಯೋ ನಾಲ್ಕನೇ ಸ್ಥಾನದಲ್ಲಿದೆ.

ಡಿಸೆಂಬರ್ 2016 ರಿಂದ ಫೆಬ್ರುವರಿ 2017ರ ಅವಧಿಯಲ್ಲಿ 93,464 ಬಳಕೆದಾರರನ್ನೊಳಗೊಂಡ 130 ಕೋಟಿ ಮಾಪನಗಳಿಂದ (ಡೇಟಾಪಾಯಿಂಟ್) ಮಾಹಿತಿ ಸಂಗ್ರಹಣೆ ಮಾಡಿದ್ದಾಗಿ ಈ ಸಮೀಕ್ಷೆ ಹೇಳಿಕೊಂಡಿದೆ.

English summary
With an average download speed of 16.48 mbps, new telecom 4G entrant Reliance Jio won the download speed race in March, leaving behind cellular competitors Idea and Bharati Airtel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X