ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ ಟಿ ಪರಿಣಾಮ: ಹೊಸ ಮನೆ ಕೊಳ್ಳೋರಿಗೆ ಕೊಂಚ ಹೆಚ್ಚು ಹೊರೆ!

ಜಿಎಸ್ ಟಿ ಯಿಂದ ಆ ತೆರಿಗೆಗಳು ಮಾಯವಾಗಿ ಶೇ. 12ರಷ್ಟು ಸೇವಾ ತೆರಿಗೆ ಜಾರಿಗೆ ಬರುತ್ತದೆ. ಇದರಿಂದಾಗಿ, ಈಗ ಚಾಲ್ತಿಯಲ್ಲಿರುವ ಸೇವಾ ತೆರಿಗೆಯಲ್ಲಿ ಸುಮಾರು ಶೇ. 1ರಿಂದ 3ರಷ್ಟು ಹೆಚ್ಚುವರಿ ತೆರಿಗೆಯು ಗ್ರಾಹಕರಿಗೆ ಹೊರೆಯಾಗಲಿದೆ.

|
Google Oneindia Kannada News

ನವದೆಹಲಿ, ಮೇ 23: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ಆರಂಭವಾಗಲಿವೆ.

ಜುಲೈ 1ರಿಂದ ಜಾರಿಗೆ ಬರಲಿರುವ ಜಿಎಸ್ ಟಿಯಿಂದ ಯಾವುದರ ಬೆಲೆ ಏರುತ್ತೆ, ಯಾವುದರ ಬೆಲೆ ಇಳಿಯುತ್ತೆ ಎಂಬ ಬಗ್ಗೆ ಸಾರ್ವಜನಿಕರು ಕುತೂಹಲದಿಂದ ತಿಳಿಯಲಾರಂಭಿಸಿದ್ದಾರೆ.[ಜಿಎಸ್ ಟಿ ಪರಿಣಾಮ: ಯಾವ್ಯಾವುದರ ಮೇಲೆ ಎಷ್ಟೆಷ್ಟು ತೆರಿಗೆ?]

ಹಾಗಾದರೆ, ಜಿಎಸ್ ಟಿ ಪ್ರಭಾವ ರಿಯಲ್ ಎಸ್ಟೇಟ್ ಮನೆಯ ಮೇಲೆ ಹೇಗಾಗಿದೆ ಎಂಬುದನ್ನು ಅರಿಯ ಹೊರಟವರಿಗೆ ಕೊಂಚ ನಿರಾಸೆ ತರುವ ವಿಚಾರವಿದು. ಏಕೆಂದರೆ, ಜಿಎಸ್ ಟಿ ಪ್ರಭಾವದಿಂದಾಗಿ ಮನೆ ಕೊಳ್ಳುವವರಿಗೆ ಈವರೆಗೆ ತೆರಬೇಕಿದ್ದ ಬೆಲೆಗಿಂತಲೂ ಶೇ. 1ರಿಂದ 3ರಷ್ಟು ಹೆಚ್ಚುವರಿ ಸೇವಾ ತೆರಿಗೆಯನ್ನು ತೆರಬೇಕಿದೆ.[GST: ಸೇವಾ ವಲಯದ ತೆರಿಗೆ ಫೈನಲ್; ಶಿಕ್ಷಣ, ಆರೋಗ್ಯಕ್ಕಿಲ್ಲ ಟ್ಯಾಕ್ಸ್]

ಇದು ಹೇಗೆ, ಎತ್ತ? ಬನ್ನಿ ಈ ಒಂದಿಷ್ಟು ಇಣುಕು ನೋಟ ಹಾಕೋಣ.

ವ್ಯಾಟ್ ಕೂಡ ಇದೆ

ವ್ಯಾಟ್ ಕೂಡ ಇದೆ

ಜಿಎಸ್ ಟಿ ಪರಿಣಾಮವು ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಹೇಗೆ ಪರಿಣಾಮ ಬೀರುತ್ತೆ ಅಂತ ತಿಳಿಯೋದಕ್ಕೂ ಮುಂಚೆ ನಾವು ಸದ್ಯಕ್ಕೆ ಚಾಲ್ತಿಯಲ್ಲಿರುವ ಸೇವಾ ತೆರಿಗೆಯನ್ನು ತಿಳಿದುಕೊಳ್ಳುವುದು ಉತ್ತಮ. ಈ ಚಾಲ್ತಿಯಲ್ಲಿರುವಂತೆ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಮೇಲೆ ವಿಧಿಸಲಾಗುವ ಸರ್ವೀಸ್ ಟ್ಯಾಕ್ಸ್ ಶೇ. 4.5 ರಷ್ಟಿದೆ. ಇದು ಸ್ಟಾಂಪ್ ಡ್ಯೂಟಿ ಖರ್ಚು ಹೊರತುಪಡಿಸಿದ ದರ. ಇದರ ಮೇಲೆ ಆಯಾ ರಾಜ್ಯ ಸರ್ಕಾರಗಳು ಶೇ. 3.5ರಿಂದ ಶೇ. 4.5ರವರೆಗೆ ವ್ಯಾಟ್ (ವ್ಯಾಲ್ಯೂ ಆ್ಯಡೆಡ್ ಟ್ಯಾಕ್ಸ್) ಹೇರುತ್ತಿವೆ. ಹಾಗಾಗಿ, ಯಾವುದೇ ರಾಜ್ಯದಲ್ಲಿ ಈ ಒಟ್ಟಾರೆ ಸೇವಾ ತೆರಿಗೆಯು ಶೇ. 9.5ಕ್ಕಿಂತ ಜಾಸ್ತಿ ಆಗುವುದಿಲ್ಲ.[GST: ಆಹಾರೋತ್ಪನ್ನಗಳಿಗಿಲ್ಲ ಕರ, ಐಷಾರಾಮಿ ವಾಹನಗಳಿಗೆ ಸೆಸ್ ಬರೆ]

ಇಲ್ಲೂ ಕೃಷಿ ಸೆಸ್ ಇದೆ

ಇಲ್ಲೂ ಕೃಷಿ ಸೆಸ್ ಇದೆ

ಇನ್ನು, ವಾಸ ಯೋಗ್ಯ (ನಿರ್ಮಾಣ ಪೂರ್ಣಗೊಂಡಿರುವ) ವಸತಿಗೆ ವಿಧಿಸಲಾಗಿರುವ ಸೇವಾ ತೆರಿಗೆ ಶೇ. 15ರಷ್ಟಿದೆ. ಇದರಲ್ಲಿ ಶೇ. 14.5ರಷ್ಟು ಸೇವಾ ತೆರಿಗೆಯಾದರೆ, ಉಳಿದ ಶೇ. 0.5ರಷ್ಟು ತೆರಿಗೆ ಕೃಷಿ ಸೆಸ್ ರೂಪದಲ್ಲಿ ಖಜಾನೆ ಸೇರುತ್ತದೆ. ಇದಕ್ಕೆ ಹೆಚ್ಚುವರಿಯಾಗಿ ಶೇ. 3ರಿಂದ 5ರವರೆಗೆ ವ್ಯಾಟ್ (ಆಯಾ ರಾಜ್ಯಗಳು ನಿಗದಿಪಡಿಸಿದ ದರಕ್ಕನುಗುಣವಾಗಿ) ಬೀಳುತ್ತದೆ.

ಆಗ ಶೇ. 12ರಷ್ಟು ನೇರ ತೆರಿಗೆ ಬೀಳುತ್ತೆ

ಆಗ ಶೇ. 12ರಷ್ಟು ನೇರ ತೆರಿಗೆ ಬೀಳುತ್ತೆ

ಇದೀಗ, ನಮಗೆ ನಿರ್ಮಾಣ ಹಂತದ ಹಾಗೂ ನಿರ್ಮಾಣ ಪೂರ್ಣಗೊಂಡ ನಿವಾಸ, ಕಟ್ಟಡಗಳ ಮೇಲೆ ವಿಧಿಸಲಾಗುವ ಸೇವಾ ತೆರಿಗೆ ಮಾದರಿಯ ಬಗ್ಗೆ ತಿಳಿದುಕೊಂಡೆವು. ಈಗ ಜಿಎಸ್ ಟಿ ಜಾರಿಯಾದರೆ ಈ ತೆರಿಗೆಗಳು ಹೇಗೆ ಬದಲಾಗುತ್ತವೆ ಎಂಬುದನ್ನು ನೋಡೋಣ. ಜಿಎಸ್ ಟಿ ಜಾರಿಗೊಂಡರೆ, ಈ ಎಲ್ಲಾ ತೆರಿಗೆಗಳು ಮಾಯವಾಗಿ ನೇರವಾಗಿ ಒಂದೇ ರೂಪದಲ್ಲಿ ಶೇ. 12ರಷ್ಟು ತೆರಿಗೆ ವಿಧಿಸಲಾಗುತ್ತದೆ.

ಇದು ಸ್ಟಾಂಪ್ ಡ್ಯೂಟಿ ಹೊರತುಪಡಿಸಿದ ತೆರಿಗೆ

ಇದು ಸ್ಟಾಂಪ್ ಡ್ಯೂಟಿ ಹೊರತುಪಡಿಸಿದ ತೆರಿಗೆ

ಮತ್ತೊಂದು ರೀತಿಯಲ್ಲಿ ಹೇಳಬೇಕೆಂದರೆ, ಈಗ ನೀವು 1 ಕೋಟಿ ರು. ಮೌಲ್ಯದ ಕಟ್ಟಡ ಅಥವಾ ಮನೆಯೊಂದನ್ನು ಖರೀದಿಸುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಈಗ ಚಾಲ್ತಿಯಲ್ಲಿರುವ ತೆರಿಗೆ ಪದ್ಧತಿ ಪ್ರಕಾರ, ನೀವು 8ರಿಂದ 9 ಲಕ್ಷ ರು.ಗಳನ್ನು (ಸ್ಟಾಂಪ್ ಡ್ಯೂಟಿ ದರ ಹೊರತುಪಡಿಸಿ) ಸೇವಾ ತೆರಿಗೆ ರೂಪದಲ್ಲಿ ಕೊಡಬೇಕಿದೆ. ಜಿಎಸ್ ಟಿ ಜಾರಿಯಾದರೆ, ಸುಮಾರು 12 ಲಕ್ಷ ರು. ಸೇವಾ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ಕೇಂದ್ರ ಸರ್ಕಾರದ ಮುಂದಿದೆ ಈ ವಿಚಾರ

ಕೇಂದ್ರ ಸರ್ಕಾರದ ಮುಂದಿದೆ ಈ ವಿಚಾರ

ಆದರೆ, ಇಲ್ಲಿ ಗ್ರಾಹಕರಿಗೆ ಹೊರೆಯಾಗದಂತೆ ಕೇಂದ್ರ ಸರ್ಕಾರ ಕೆಲವಾರು ಕ್ರಮಗಳನ್ನು ಅಳವಡಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಜಿಎಸ್ ಟಿ ಪರಿಣಾಮವಾಗಿ ಹೆಚ್ಚಳವಾಗುವ ಸೇವಾ ತೆರಿಗೆಯ ಪ್ರಮಾಣದಲ್ಲಿ ಕೊಂಚ ರಿಯಾಯ್ತಿ ಕೊಡಬೇಕೆಂಬ ಮನವಿ ಕೇಂದ್ರ ಸರ್ಕಾರದ ಮುಂದಿದೆ. ಹಾಗೆ, ಅದು ಕಡಿಮೆಯಾದರೆ ಗ್ರಾಹಕರಿಗೆ ಕೊಂಚ ಅನುಕೂಲವಾಗಲಿದೆ.

English summary
Home buyers could see a rise of 1-3 per cent in overall cost under the new indirect tax regime. The goods and services tax (GST) has brought the real estate sector partially under its ambit by taxing works contracts at 12 per cent, exclusive of stamp duty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X