ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲ ಮಾಡಿ ಮನೆ ಕಟ್ಟುವವರಿಗೆ ಸಿಹಿ ಸುದ್ದಿ

By Mahesh
|
Google Oneindia Kannada News

ನವದೆಹಲಿ, ಮಾ.6: ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸಲು ಸಾಲ ಬಯಸುವವರಿಗೆ ಆರ್ ಬಿಐ ನಿಂದ ಸಿಹಿ ಸುದ್ದಿ ಸಿಕ್ಕಿದೆ. ಗೃಹ ಸಾಲ ಹಾಗೂ ಆಸ್ತಿ ಖರೀದಿ ನಿಯಮಾವಳಿಗಳನ್ನು ಸಡಿಲಿಸಲಾಗಿದೆ.

ಸಾಲ ಸೋಲ ಮಾಡಿ ಸ್ವಂತಕ್ಕೆ ಒಂದು ಮನೆ ಕಟ್ಟುವುದು ಅಷ್ಟು ಸುಲಭದ ಮಾತಲ್ಲ. ಬ್ಯಾಂಕಿನಿಂದ ಸಾಲ ಪಡೆಯುವುದೇ ದೊಡ್ಡ ಕೆಲಸವಾಗಿಬಿಡುತ್ತದೆ. 10 ಲಕ್ಷ ರು ವರೆಗಿನ ಗೃಹ ಸಾಲ ಹಾಗೂ ಆಸ್ತಿ ಖರೀದಿಗೆ ಸಂಬಂಧಿಸಿದಂತೆ ಇದ್ದ ಪ್ರಕ್ರಿಯೆ ಈಗ ಸರಳಗೊಳ್ಳಲಿದೆ.

RBI eases norms for home loans for up to Rs 10 lakh

ಮುದ್ರಾಂಕ ಹಾಗೂ ನೋಂದಣಿ ಶುಲ್ಕವನ್ನು ಸಾಲದ ಮೊತ್ತದಲ್ಲೇ ಸೇರಿಸುವ ಅವಕಾಶ ಕಲ್ಪಿಸಿದೆ. ಇದರಿಂದ ನಿವೇಶನ ಖರೀದಿಸಿ ಮನೆ ನಿರ್ಮಿಸುವ ಯೋಜನೆ ಹಾಕಿಕೊಂಡವರಿಗೆ ಅನುಕೂಲವಾಗಲಿದೆ.ಸಾಲ ಪಡೆಯುವಾಗ ಮುದ್ರಾಂಕ ಹಾಗೂ ನೋಂದಣಿ ಶುಲ್ಕವನ್ನು ಪ್ರತ್ಯೇಕವಾಗಿ ಕಟ್ಟಲು ಪರದಾಡಬೇಕಿತ್ತು. [ಮನೆಸಾಲ, ವಾಹನ ಸಾಲ, ಆಸಾಲ ಈಸಾಲದ ಬಡ್ಡಿ ಇಳಿಕೆ]

ಆರ್ಥಿಕವಾಗಿ ದುರ್ಬಲರಾಗಿರುವವರು ಮತ್ತು ಕಡಿಮೆ ಆದಾಯ ಹೊಂದಿರುವವರು ಮನೆ ಕಟ್ಟುವ ವೇಳೆ ಸಾಲ ಪಡೆಯುವುದು ಹಾಗೂ ಆಸ್ತಿ ಖರೀದಿ ಸಂಬಂಧಿಸಿದಂತೆ ಹಾಲಿ ಮುದ್ರಾಂಕ ಹಾಗೂ ನೋಂದಣಿ ಶುಲ್ಕ ಆಸ್ತಿ ಮೌಲ್ಯದ ಶೇ.15ರಷ್ಟು ಪಾವತಿಸಬೇಕಿದೆ. ಇದರಿಂದ ಮನೆ ಕಟ್ಟುವವರು ಸ್ಟಾಂಪ್ ಡ್ಯೂಟಿ, ನೋಂದಣಿ ಶುಲ್ಕ, ಡಾಕ್ಯುಮೆಂಟ್ ಚಾರ್ಜ್ ಹೀಗೆ ಸಾಕಷ್ಟು ಹಣ ವ್ಯಯಿಸಬೇಕಾಗುತ್ತಿದೆ. ಈಗ ನಿಯಮ ಸಡಿಲಿಕೆಯಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಆರ್ ಬಿಐ ಹೇಳಿದೆ.

ಇತ್ತೀಚೆಗೆ ಆರ್‌ಬಿಐ ಬಡ್ಡಿದರ 25 ಅಂಶಗಳಷ್ಟು ಇಳಿಕೆ ಮಾಡಿದೆ. ಬ್ಯಾಂಕಿನಿಂದ ಗೃಹ, ವಾಹನ ಲೋನ್ ಪಡೆಯುವವರು ಬ್ಯಾಂಕಿನತ್ತ ಮುಖ ಮಾಡುವ ಅವಕಾಶ ಲಭ್ಯವಾಗಿದೆ. ಅದರೆ, ಬ್ಯಾಂಕುಗಳು ಇನ್ನೂ ಬಡ್ಡಿದರ ಇಳಿಕೆ ಬಗ್ಗೆ ಪ್ರಕಟಣೆ ಹೊರಡಿಸಿಲ್ಲ. (ಪಿಟಿಐ)

English summary
Giving a boost to affordable housing, the RBI today eased the norms for home loans for up to Rs 10 lakh by allowing banks to include stamp duty and registration charges to the cost of a unit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X