ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದಲಾದ ಆರ್ ಬಿಐ ಆದ್ಯತಾ ವಲಯ ಸಾಲದ ನೀತಿ

|
Google Oneindia Kannada News

ಮುಂಬೈ, ಏ. 27: ಆದ್ಯತಾ ವಲಯಕ್ಕೆ ನೀಡುವ ಸಾಲಕ್ಕೆ ಸಂಬಂಧಿಸಿದ ನಿರ್ದೇಶನಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪರಿಷ್ಕರಣೆ ಮಾಡಿದೆ. ಒಟ್ಟು ಸಾಲದಲ್ಲಿನ ಶೇ. 8ರಷ್ಟನ್ನು ಸಣ್ಣ ಹಾಗೂ ಮಧ್ಯಮ ವರ್ಗದ ರೈತರಿಗೆ ಮೀಸಲಿಡುವಂತೆ ಎಲ್ಲ ಬ್ಯಾಂಕ್​ಗಳಿಗೆ ಆರ್ ಬಿಐ ಸ್ಪಷ್ಟ ಸೂಚನೆ ನೀಡಿದೆ.

ಮಧ್ಯಮ ಗಾತ್ರದ ಉದ್ಯಮ, ಸಾಮಾಜಿಕ ಮೂಲ ಸೌಕರ್ಯ, ನವೀಕರಿಸಬಹುದಾದ ಇಂಧನಗಳನ್ನು ಸಹ ಆದ್ಯತಾ ವಲಯದೊಳಕ್ಕೆ ಸೇರಿಸಲಾಗಿದೆ ಎಂದು ತಿಳಿಸಿದೆ. ಸಾಲ ನೀಡಿಕೆ ಗುರಿಯಲ್ಲೂ ಕೆಲ ಮಹತ್ತರ ಬದಲಾವಣೆ ಮಾಡಲಾಗಿದೆ.(ಪಿಎಫ್ ಪಡೆಯುವುದು ಬಹಳ ಸುಲಭ)

rbi

ಸಣ್ಣ ಹಾಗೂ ಮಧ್ಯಮ ರೈತರಿಗೆ ನಿಗದಿಪಡಿಸಲಾಗಿರುವ ಒಟ್ಟು ಬ್ಯಾಂಕ್​ಗಳ ಸಾಲದ ಶೇ. 8ರಷ್ಟನ್ನು ಹಂತಹಂತವಾಗಿ ಸಾಧಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಸೂಚನೆ ನೀಡಿದೆ. 2016ರ ಮಾರ್ಚ್ ಒಳಗೆ ಶೇ. 7 ಮತ್ತು 2017ರ ಮಾರ್ಚ್ ಒಳಗೆ ಶೇ. 8ರ ಗುರಿ ಸಾಧನೆಯಾಗಬೇಕು ಎಂದು ಹೇಳಿದೆ.[ಅಂತರ್ಜಾಲದಲ್ಲಿ ಭವಿಷ್ಯ ನಿಧಿ ಮಾಹಿತಿ ಪಡೆಯುವುದು ಹೇಗೆ?]

ಪ್ರಧಾನ ಮಂತ್ರಿ ಜನ ಧನ ಯೋಜನೆಯನ್ನು ಕೂಡ ಆದ್ಯತಾ ವಲಯದ ಸಾಲವನ್ನಾಗಿ ಪರಿಗಣಿಸಲಾಗುವುದು. ಶಿಕ್ಷಣ ಕ್ಚೇತ್ರಕ್ಕೆ ಸಂಬಂಧಿಸಿ ನೀಡುತ್ತಿರುವ ಸಾಲ, ಮೂಲ ಸೌಕರ್ಯ ಅಭಿವೃದ್ಧಿಗೆ ಸಾಲದಲ್ಲಿನ ಕೆಲ ಮಾರ್ಪಾಡುಗಳಿಗೆ ಆರ್ ಬಿಐ ಹಸಿರು ನಿಶಾನೆ ತೋರಿದೆ.[ಬ್ಯಾಂಕುಗಳಿಂದ ಗೃಹಸಾಲ, ವಾಹನ ಸಾಲ ಬಡ್ಡಿದರ ಇಳಿಕೆ]

2019-20 ರ ವೇಳೆಗೆ ನಿಗದುಯಂತೆ ಗುರಿ ಸಾಧನೆಯಾದರೆ ದೇಶದ ಆರ್ಥಿಕ ಅಭಿವೃದ್ಧಿಯ ಪಥ ಬದಲಾಗಲಿದೆ. ಚಿದೇಶಿ ಬ್ಯಾಂಕ್ ಗಳಿಂದಲೂ ಇದಕ್ಕೆ ಹಣಕಾಸು ನೆರವು ಪಡೆದುಕೊಳ್ಳಲಾಗುವುದು ಎಂದು ರಿಸರ್ವ್ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.

English summary
The Reserve Bank of India has revised the priority sector lending norms which direct banks to lend to certain segments by prescribing targets as a percentage of their total business. The new norms require banks to ensure that 8% of their loans go to small and marginal farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X