ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಸಂಸ್ಥೆ ಪಾಲಾದ ಅತಿ ದೊಡ್ಡ ಚಿನ್ನ ಶುದ್ಧೀಕರಣ ಘಟಕ

By Mahesh
|
Google Oneindia Kannada News

ಬೆಂಗಳೂರು, ಜುಲೈ 28: ವಿಶ್ವದ ಅತಿದೊಡ್ಡ ಚಿನ್ನ ಶುದ್ಧೀಕರಣ ಘಟಕವನ್ನು ಖರೀದಿಸಿರುವುದಾಗಿ ಬೆಂಗಳೂರು ಮೂಲದ ರಾಜೇಶ್ ಎಕ್ಸ್ ಪೋರ್ಟ್ ಸಂಸ್ಥೆ ಪ್ರಕಟಿಸಿದೆ. ಯುರೋಪಿನ ಚಿನ್ನದ ಶುದ್ಧೀಕರಣ ಘಟಕವನ್ನು ರಾಜೇಶ್ ಎಕ್ಸ್ ಪೋರ್ಟ್ ಸಂಸ್ಥೆಯ ಸಿಂಗಪುರದ ಅಂಗ ಸಂಸ್ಥೆ ಮೂಲಕ ಖರೀದಿಸಲಾಗಿದೆ.

ವಿಶ್ವದ ಅತಿ ವಿಸ್ತೃತ ಚಿನ್ನದ ಶುದ್ಧೀಕರಣ ಘಟಕ ವಾಲ್ಕಾಂಬಿಯನ್ನು 400 ಮಿಲಿಯನ್ ಯುಎಸ್ ಡಾಲರ್ ನೀಡಿ ನೂರಕ್ಕೆ ನೂರರಷ್ಟು ಖರೀದಿಸಲಾಗಿದೆ ಎಂದು ಷೇರುಪೇಟೆಗೆ ಸೋಮವಾರವೇ ರಾಜೇಶ್ ಎಕ್ಸ್ ಪೋರ್ಟ್ ಮಾಹಿತಿ ನೀಡಿದೆ.

Rajesh Exports Acquires Valcambi

ಜಾಗತಿಕ ಮಟ್ಟದಲ್ಲಿ ರಾಜೇಶ್ ಎಕ್ಸ್ ಪೋರ್ಟ್ ಲಿಮಿಟೆಡ್ (ಆರ್ ಇಎಲ್) ವಿಸ್ತರಿಸಲು ಈ ಖರೀದಿ ಸಹಾಯಕವಾಗಲಿದೆ. ವಾಲ್ಕಂಬಿ ಹಾಗೂ ಆರ್ ಇಎಲ್ ಇನ್ಮುಂದೆ ಆಸ್ಟ್ರೇಲಿಯಾ ಮಾರುಕಟ್ಟೆಯತ್ತ ಗಮನ ಹರಿಸಲಿದೆ ಎಂದು ರಾಜೇಶ್ ಎಕ್ಸ್ ಪೋರ್ಟ್ಸ್ ಮಾಲೀಕ ರಾಜೇಶ್ ಮೆಹ್ತಾ ಹೇಳಿದ್ದಾರೆ. [ರಾಜೇಶ್ ಎಕ್ಸ್ ಪೋರ್ಟ್ಸ್ ತೆಕ್ಕೆಗೆ 432 ಕೋಟಿ ಡೀಲ್]

ಸ್ವಿಟ್ಜರ್ಲೆಂಡ್ ನಲ್ಲಿ ಕೇಂದ್ರ ಕಚೇರಿ ಹೊಂದಿರುವ ವಾಲ್ಕಂಬಿ ಸಂಸ್ಥೆ ಚಿನ್ನ ಸೇರಿದಂತೆ ಅನೇಕ ಲೋಹಗಳ ಶುದ್ಧೀಕರಣ ಘಟಕವನ್ನು ಹೊಂದಿದೆ. ವಾರ್ಷಿಕವಾಗಿ 1,600 ಟನ್ ಗಳಷ್ಟು ಚಿನ್ನ ಹಾಗೂ 2,000 ಟನ್ ಗಳಷ್ಟು ಇತರೆ ಲೋಹಗಳನ್ನು ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆ.

ರಾಜೇಶ್ ಎಕ್ಸ್ ಪೋರ್ಟ್: ಬೆಂಗಳೂರು ಮೂಲದ ಈ ಸಂಸ್ಥೆ ವಾರ್ಷಿಕವಾಗಿ 250 ಟನ್ ಗಳಷ್ಟು ಚಿನ್ನಾಭರಣವನ್ನು ಮಾರುಕಟ್ಟೆಗೆ ಬಿಡುತ್ತಿದ್ದು, ವಿಶ್ವದ ಅತಿದೊಡ್ಡ ಆಭರಣ ಉತ್ಪಾದನಾ ಸಂಸ್ಥೆಗಳಲ್ಲಿ ಒಂದೆನಿಸಿದೆ. 2014-15ರಲ್ಲಿ 655 ಕೋಟಿ ರು ನಿವ್ವಳ ಲಾಭ, 1,204 ಕೋಟಿ ರು ನಿರ್ವಹಣಾ ಲಾಭ ಪಡೆದುಕೊಂಡಿದ್ದು, ಸಂಸ್ಥೆಯ ಆದಾಯ 50,000 ಕೋಟಿ ರುಗಳಷ್ಟಿದೆ.

ಸಿನಿಮಾ ತಾರೆಗಳಾದ ಜಯಪ್ರದಾ, ದಿವಂಗತ ವಿಷ್ಣುವರ್ಧನ್ ಅವರು ರಾಜೇಶ್ ಎಕ್ಸ್ ಪೋರ್ಟ್ ನ ಶುಭ್ ಜ್ಯುವೆಲ್ಲರ್ಸ್ ನ ರಾಯಭಾರಿಗಳಾಗಿದ್ದಾರೆ.

ರಾಜೇಶ್ ಎಕ್ಸ್ ಪೋರ್ಟ್ ಷೇರುಗಳು ಸೋಮವಾರ ಏರಿಕೆ ಕಂಡರೂ ಮಂಗಳವಾರದಂದು 534.70 ರುನಂತೆ ಕೊಂಚ ಇಳಿಕೆ ಕಂಡಿದೆ. (ಒನ್ ಇಂಡಿಯಾ ಸುದ್ದಿ)

English summary
Bengaluru based Rajesh Exports said that the company through it's wholly owned subsidiary in Singapore has fully acquired European Gold Refineries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X