ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಆರ್ಥಿಕ ವ್ಯವಸ್ಥೆಗೆ ಯಾವ ಆತಂಕವಿಲ್ಲ: ಮೋದಿ

|
Google Oneindia Kannada News

ನವದೆಹಲಿ, ಆಗಸ್ಟ್.25: ದೇಶದ ಅರ್ಥ ವ್ಯವಸ್ಥೆಯಲ್ಲಿನ ತೀವ್ರ ತೆರನಾದ ಬದಲಾವಣೆಗೆ ಹೊರಗಿನ ಕಾರಣಗಳೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದು ಪರಿಹಾರ ಕ್ರಮದ ಬಗ್ಗೆ ಸೂಚನೆ ನೀಡಿದ್ದಾರೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಭಾರತದ ಅರ್ಥ ವ್ಯವಸ್ಥೆ ಸುಭದ್ರವಾಗಿದ್ದು ಯಾವುದೇ ಆತಂಕ ಪಡಿವ ಅಗತ್ಯವಿಲ್ಲ. ರುಪಾಯಿ ಏರಿಳಿತಕ್ಕೆ ದೇಶದ ಹೊರಗೆ ಆದ ಬದಲಾವಣೆಗಳೆ ಕಾರಣ ಎಂದು ತಿಳಿಸಿದ್ದಾರೆ.[ಷೇರು ಮಾರುಕಟ್ಟೆಯಲ್ಲಿ ಮಹಾ ಕುಸಿತ, ಲಕ್ಷ ಕೋಟಿ ರು ನಷ್ಟ]

narendra

ಈ ಬಗ್ಗೆ ವಿವರ ನೀಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ಗ್ಲೊಬಲ್ ಮಾರುಕಟ್ಟೆಯ ತಂತ್ರಗಳನ್ನು ವಿಶ್ಲೇಷಣೆ ಮಾಡಲಾಗುತ್ತಿದೆ. ನಮ್ಮ ವ್ಯವಸ್ಥೆ ಸದೃಢವಾಗಿದೆ ಎಂಬುದನ್ನು ಸಾಬೀತು ಮಾಡಿ ತೋರಿಸಬೇಕಿದೆ ಎಂದು ಹೇಳಿದ್ದಾರೆ.

ಸೋಮವಾರ ಷೇರು ಮಾರುಕಟ್ಟೆ 1600 ಅಂಕ ಕುಸಿದು ಮಾರುಕಟ್ಟೆಯಲ್ಲಿ ತಲ್ಲಣ ಉಂಟುಮಾಡಿತ್ತು. ಆದರೆ ಮಂಗಳವಾರ ಬೆಳಗ್ಗೆ ಮಾರುಕಟ್ಟೆ ಕೊಂಚ ಚೇತರಿಕೆ ಕಂಡಿದೆ.

ಆರ್ ಬಿಐ ಗವರ್ನರ್ ರಘುರಾಂ ರಾಜನ್ ಸಹ ಅರ್ಥ ವ್ಯವಸ್ಥೆ ಸದೃಢವಾಗಿದ್ದು ಭಾರತಕ್ಕೆ ಯಾವ ಭಯವಿಲ್ಲ. ಇದು ಚೀನಾ ಮಾರುಕಟ್ಟೆಯ ಪರಿಣಾಮ. ರುಪಾಯಿ ಸಹ ಚೇತರಿಕೆ ಕಾಣುವುದು ಎಂದು ತಿಳಿಸಿದ್ದರು.

English summary
Prime Minister Narendra Modi has vowed to push ahead with the reforms agenda and increase public spending as part of the drive to strengthen the economy, Union Finance Minister Arun Jaitley told the media. According to Jaitley, PM Modi, who reviewed the crash and the plunge of the rupee during a meeting with him and other top officials, also said the economy was stable and the problem was "external and not internal".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X