ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಷ್ಠಿತ ಕ್ರೆಡಾಯ್ ಕೇರ್ ಪ್ರಶಸ್ತಿಗಳು 2015 ಪ್ರಕಟ

By Rajendra
|
Google Oneindia Kannada News

ಬೆಂಗಳೂರು, ಮಾ.31 : ಐಟಿಸಿ ಗಾರ್ಡೇನಿಯಾದ ಮೈಸೂರು ಹಾಲ್ 2ನೇ ಆವೃತ್ತಿಯ ರಿಯಲ್ ಎಸ್ಟೇಟ್ ನ ಕ್ರೆಡಾಯ್ ಪ್ರಶಸ್ತಿಗಳು (ಕೇರ್ ಪ್ರಶಸ್ತಿಗಳು) 2015 ರ ನಿರೀಕ್ಷೆಯಲ್ಲಿ ಮುಳುಗಿತ್ತು. ಕರ್ನಾಟಕದಾದ್ಯಂತದ ಬಿಲ್ಡರ್ ಗಳು ವಿವಿಧ ವಿಭಾಗಗಳಲ್ಲಿ ತಮ್ಮ ನಾಮಪತ್ರಗಳನ್ನು ಪ್ರಖ್ಯಾತ ಜ್ಯೂರಿ ತಂಡದ ಎದುರು ಸಲ್ಲಿಸಿದ್ದರು.

ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಹಾಗೂ ಬೆಂಗಳೂರು ನಗರ ಹೀಗೆ ಬಹು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಯಿತು. ಪ್ರಶಸ್ತಿ ವಿಜೇತರ ಪಟ್ಟಿ ಈ ರೀತಿಯಾಗಿದೆ.

ವಿಶೇಷ ಪ್ರಶಸ್ತಿಗಳು
*ರಿಯಾಲ್ಟಿ ಕ್ಷೇತ್ರಕ್ಕೆ ಅದ್ವಿತೀಯ ಕೊಡುಗೆ - ಎಂ.ಆರ್.ಜೈಶಂಕರ್, ಸಂಸ್ಥಾಪಕರು-ಸಿಎಂಡಿ ಬ್ರಿಗೇಡ್ ಗ್ರೂಪ್
*ಜೀವಮಾನ ಸಾಧನೆ ಪ್ರಶಸ್ತಿ - ರಮಣಿ ಶಾಸ್ತ್ರಿ, ಸ್ಟೆರ್ಲಿಂಗ್ ಡೆವಲಪರ್ಸ್ ಪ್ರೈ.ಲಿ.ನ ಮಾಲೀಕರು

ಬೆಂಗಳೂರು ನಗರ
*ಅತ್ಯುತ್ತಮ ವಾಸತಾಣ 1500 ಚದರ ಅಡಿಗಿಂತ ಮೇಲ್ಪಟ್ಟ (ವಸತಿ) - ಅಸೆಟ್ಝ್ ಪ್ರಾಪರ್ಟಿ ಗ್ರೂಪ್ ನ 27 ಪಾರ್ಕ್ ಅವೆನ್ಯೂ
*ಅತ್ಯುತ್ತಮ ವಾಸತಾಣ 1500 ಚದರ ಅಡಿಗಿಂತ ಕೆಳಗಿನ (ವಸತಿ)- ಸ್ಪೆಕ್ಟ್ರಾ ಕನ್‍ಸ್ಟ್ರಕ್ಷನ್ಸ್ ಪ್ರೈ.ಲಿ.ನ ಸ್ಪೆಕ್ಟ್ರಾ ರೈನ್ ಟ್ರೀ

*ಅತ್ಯುತ್ತಮ ವಿಲ್ಲಾಗಳು ಮತ್ತು ಕಚ್ಚಾ ಮನೆಗಳು - ಪ್ರೆಸ್ಟೀಜ್ ಎಸ್ಟೇಟ್ ಪ್ರಾಜೆಕ್ಟ್ ನ ಪ್ರೆಸ್ಟೀಜ್ ಸಿಲ್ವರ್ ಓಕ್ಸ್
*ಅತ್ಯುತ್ತಮ ವಾಣಿಜ್ಯ ಸಂಕೀರ್ಣ -ಬ್ರಿಗೇಡ್ ರುಬಿಕ್ಸ್ - ಬ್ರಿಗೇಡ್ ಎಂಟರ್ ಪ್ರೈಸಸ್ ಲಿ.
*ಅತ್ಯುತ್ತಮ ಪ್ಲಾಟ್ ಅಭಿವೃದ್ಧಿ - ಚಾರ್ಟರ್ಡ್ ಹೌಸಿಂಗ್ (ಪಿ) ಲಿ.ನ ಚಾರ್ಟರ್ಡ್ ಫೈರ್‍ಫ್ಲೈಸ್
*ಅತ್ಯುತ್ತಮ ನವೀನ ವಿನ್ಯಾಸ (ವಸತಿ) - ಸಾಲರ್ ಪುರಿಯಾ ಸಟ್ವಾದ ಗ್ರೀನೇಜ್ ಅಸೆಟ್ಝ್ ಪ್ರಾಪರ್ಟಿ ಗ್ರೂಪ್ ನ 27 ಪಾರ್ಕ್ ಅವೆನ್ಯೂ
*ಡೆವಲಪರ್ ನ ಅತ್ಯುತ್ತಮ ಸಿಎಸ್‍ಆರ್ ಚಟುವಟಿಕೆ - ಬ್ರಿಗೇಡ್ ಎಂಟರ್ ಪ್ರೈಸಸ್ ಲಿ.,

Prestigious CREDAI Care Awards 2015 announced

ಉತ್ತರ ಕರ್ನಾಟಕ
* ಅತ್ಯುತ್ತಮ ವಾಸತಾಣ 1500 ಚದರ ಅಡಿಗಿಂತ ಮೇಲ್ಪಟ್ಟ (ವಸತಿ) - ವಿಶಾಲ್ ಇನ್‍ಫ್ರಾ ಬಿಲ್ಡ್ ಲಿ.ನ
ವಿಶಾಲ್ ಸ್ಕೈ ಪಾರ್ಕ್ - ಬೆಳಗಾವಿ
* ಅತ್ಯುತ್ತಮ ವಾಸತಾಣ 1500 ಚದರ ಅಡಿಗಿಂತ ಕೆಳಗಿನ (ವಸತಿ)- ವಿಶಾಲ್ ಇನ್‍ಫ್ರಾ ಬಿಲ್ಡ್ ಲಿ.ನ
ವಿಶಾಲ್ ಸ್ಕೈ ಪಾರ್ಕ್ - ಬೆಳಗಾವಿ
*ಅತ್ಯುತ್ತಮ ವಿಲ್ಲಾಗಳು ಮತ್ತು ಕಚ್ಚಾ ಮನೆಗಳು - ಸುವಿಧಾ ರಿಯಲ್ಟರ್ಸ್ ಆಂಡ್ ಕನ್‍ಸ್ಟ್ರಕ್ಷನ್ಸ್ ಪ್ರೈ.ಲಿ.ನ
ಸುವಿಧಾ ನೆಸ್ಟ್ಲೆ- ಹುಬ್ಬಳ್ಳಿ
*ಅತ್ಯುತ್ತಮ ವಾಣಿಜ್ಯ ಸಂಕೀರ್ಣ - ಐಕಾನ್ ಬಿಲ್ಡರ್ಸ್ ಆಂಡ್ ಕನ್ಸಲ್ಟೆಂಟ್ಸ್ ಹುಸೇನ್ ಐಕಾನ್ ಸೆಂಟರ್ -
ಧಾರವಾಡ
*ಅತ್ಯುತ್ತಮ ಪ್ಲಾಟ್ ಅಭಿವೃದ್ಧಿ - ಸಿದ್ಧಾರ್ಥ್ ರಿಯಾಲ್ಟಿ ಪ್ರೈ.ಲಿ.ನ ಕುಶಾಲ್ ನಗರ - ಬಿಜಾಪುರ
*ಅತ್ಯುತ್ತಮ ನವೀನ ವಿನ್ಯಾಸ (ವಸತಿ) - ಚೈತನ್ಯ ಅಸೋಸಿಯೇಟ್ಸ್ ಬ್ರಹ್ಮಾನಂದ- ಬೆಳಗಾವಿ
*ಅತ್ಯುತ್ತಮ ಶಾಪಿಂಗ್ ಮಾಲ್ - ಕಲಸ್ಕರ್ ಪ್ರಾಪರ್ಟೀಸ್ ಪ್ರೈ.ಲಿ.ನ ಶ್ರದ್ಧಾ ಮಾಲ್ - ಗುಲ್ಬರ್ಗಾ
*ಅತ್ಯುತ್ತಮ ನವೀನ ವಿನ್ಯಾಸ (ವಾಣಿಜ್ಯ) - ಎಂ.ಜಿ.ಅಸೋಸಿಯೇಟ್ಸ್ ಗೋಲ್ಡ್ ಹಬ್ - ಗುಲ್ಬರ್ಗಾ
*ಡೆವಲಪರ್‍ನ ಅತ್ಯುತ್ತಮ ಸಿಎಸ್‍ಆರ್ ಚಟುವಟಿಕೆ - ಸಿದ್ಧಾರ್ಥ್ ರಿಯಾಲ್ಟಿ (ಇಂಡಿಯಾ) ಪ್ರೈ.ಲಿ.-
ಬಿಜಾಪುರ

ದಕ್ಷಿಣ ಕರ್ನಾಟಕ
*ಅತ್ಯುತ್ತಮ ವಾಸತಾಣ 1500 ಚದರ ಅಡಿಗಿಂತ ಮೇಲ್ಪಟ್ಟ (ವಸತಿ)- ಇನ್-ಲ್ಯಾಂಡ್ ಇನ್‍ಫ್ರಾಸ್ಟಕ್ಚರ್
ಡೆವಲಪರ್ಸ್ ಪ್ರೈ.ಲಿ.ನ ಇನ್‍ಲ್ಯಾಂಡ್ ವಿಂಡ್‍ಸೋರ್ಸ್- ಮಂಗಳೂರು
*ಅತ್ಯುತ್ತಮ ವಾಸತಾಣ 1500 ಚದರ ಅಡಿಗಿಂತ ಕೆಳಗಿನ (ವಸತಿ) - ಬ್ರಿಗೇಡ್ ಗ್ರೂಪ್‍ನ ಬ್ರಿಗೇಡ್ ಸ್ಪಾರ್ಕ್ಲ್-
ಮೈಸೂರು
*ಅತ್ಯುತ್ತಮ ನವೀನ ವಿನ್ಯಾಸ (ವಸತಿ) - ಬ್ಯಾರೀಸ್ ಪ್ರಾಪರ್ಟೀಸ್ ಆಂಡ್ ಡೆವಲಪರ್ಸ್ ಪ್ರೈ.ಲಿ.ನ ಬ್ಯಾರೀಸ್
ವೆಲೆನ್ಸಿಯಾ- ಮಂಗಳೂರು
*ಅತ್ಯುತ್ತಮ ಹಸಿರು ಕಟ್ಟಡ (ವಸತಿ) - ಬ್ಯಾರೀಸ್ ಪ್ರಾಪರ್ಟೀಸ್ ಆಂಡ್ ಡೆವಲಪರ್ಸ್ ಪ್ರೈ.ಲಿ.ನ ಬ್ಯಾರೀಸ್
ವೆಲೆನ್ಸಿಯಾ- ಮಂಗಳೂರು
*ಡೆವಲಪರ್‍ನ ಅತ್ಯುತ್ತಮ ಸಿಎಸ್‍ಆರ್ ಚಟುವಟಿಕೆ? ಬ್ಯಾರೀಸ್ ಪ್ರಾಪರ್ಟೀಸ್ ಆಂಡ್ ಡೆವಲಪರ್ಸ್ ಪ್ರೈ.ಲಿ. -
ಮಂಗಳೂರು

ಕೇರ್ ಪ್ರಶಸ್ತಿಗಳು 2015ರ ಅಧ್ಯಕ್ಷರು ಹಾಗೂ ಕ್ರೆಡಾಯ್ ಬೆಂಗಳೂರಿನ ಕಾರ್ಯದರ್ಶಿಗಳೂ ಆಗಿರುವ ಸುರೇಶ್ ಹರಿ ಅವರು ಎರಡನೇ ಬಾರಿಗೆ ಸಂಘಟಿಸಲಾಗಿರುವ ಕಾರ್ಯಕ್ರಮದ ಬಗೆಗೆ ಪೀಠಿಕೆ ನೀಡುವುದರೊಂದಿಗೆ ನಿರೂಪಿಸಿದರು. ಲಕ್ಷ್ಮಿನಾರಾಯಣ, ಬಿಬಿಪಿಎಂಪಿ ಆಯುಕ್ತರು, ಕ್ರೆಡಾಯ್ ಅಧ್ಯಕ್ಷರು ಹಾಗೂ ಮಾಜಿ ಅಧ್ಯಕ್ಷರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ನಾಗರಾಜ ರೆಡ್ಡಿ, ಅಧ್ಯಕ್ಷರು, ಕ್ರೆಡಾಯ್ ಕರ್ನಾಟಕ, ಅವರು ಮಾತನಾಡಿ, "ಕೇರ್ ಪ್ರಶಸ್ತಿಗಳು ನಮ್ಮ ರಿಯಲ್ ಎಸ್ಟೇಟ್ ಬಳಗದಲ್ಲಿರುವ, ಈ ಕ್ಷೇತ್ರದಲ್ಲಿ ಅಪ್ರತಿಮ ಕಾರ್ಯವನ್ನು ಮಾಡಿರುವ ಸದಸ್ಯರನ್ನು ಗುರುತಿಸುವ ಹಾಗೂ ಇತರರನ್ನು ಅದರತ್ತ ಪ್ರೋತ್ಸಾಹಿಸುವ ವಿಧಾನವಾಗಿದೆ. ಕ್ರೆಡಾಯ್ ಕುಟುಂಬವು ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಚಿತ್ರಣವನ್ನು ಸುಧಾರಿಸುವತ್ತ ಕಾರ್ಯನಿರ್ವಹಿಸುತ್ತಿದೆ ಮತ್ತು ಈ ಅದ್ಭುತ ಕಾರ್ಯದ ಸಂದೇಶ ದೇಶಾದ್ಯಂತ ಹರಡುತ್ತದೆ ಎಂಬ ಭರವಸೆ ನಮಗಿದೆ" ಎಂದರು.

ಸಿ.ಎನ್.ಗೋವಿಂದರಾಜು, ಅಧ್ಯಕ್ಷರು, ಕ್ರೆಡಾಯ್ ಬೆಂಗಳೂರು ಮಾತನಾಡಿ, "ಇದು ರಾಜ್ಯದಾದ್ಯಂತ ಇರುವ ರಿಯಲ್ ಎಸ್ಟೇಟ್ ಅಭಿವೃದ್ಧಿಯ ಶ್ರಮವನ್ನು ಗುರುತಿಸುವ ವೇದಿಕೆಯಾಗಿದೆ. ಈ ಪ್ರಶಸ್ತಿಗಳು ತಮ್ಮ ಕ್ಷೇತ್ರದಲ್ಲಿ ಮಿನುಗಲು ಎಲ್ಲರಿಗೂ ಸ್ಫೂರ್ತಿಯಾಗಲಿ'' ಎಂದು ಆಶಿಸಿದರು.

ಸತೀಶ್ ನಾಯ್ಕ್, ಹಾಗೂ ಡಾ.ಕೆ.ಎಸ್.ಅನಂತ ಕೃಷ್ಣ ಅವರನ್ನೊಳಗೊಂಡ ಪ್ರಖ್ಯಾತರ ಜ್ಯೂರಿ ತಂಡವು ಪ್ರತಿಯೊಂದು ವಿಭಾಗದಲ್ಲಿ ಮಾಡಲಾದ ಪ್ರಸ್ತುತಿಗಳ ಆಧಾರದಲ್ಲಿ ವಿಜೇತರನ್ನು ಆಯ್ಕೆ ಮಾಡಿತು. ರಾಮಲಿಂಗಾ ರೆಡ್ಡಿ, ಗೌರವಾನ್ವಿತ ಸಾರಿಗೆ ಮತ್ತು ಬೆಂಗಳೂರು ನಗರ ಸಚಿವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಲಕ್ಷ್ಮೀನಾರಾಯಣ, ಬಿಬಿಎಂಪಿ ಆಯುಕ್ತರು, ಬೆಂಗಳೂರಿನ ಹೊರಗಿನ, ಅದರಲ್ಲೂ ಗುಲ್ಬರ್ಗ ಹಾಗೂ ಬಿಜಾಪುರದಂತಹ ಸ್ಥಳಗಳೂ ಸೇರಿದಂತೆ ರಾಜ್ಯಾದ್ಯಂತದ ಶ್ರಮವನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಿರುವುದು ನನಗೆ ತುಂಬಾ ಸಂತಸ ತಂದಿದೆ. ಈ ಪ್ರಶಸ್ತಿಗಳು ಎಲ್ಲರಿಗೂ ಪ್ರೋತ್ಸಾಹವನ್ನು ತುಂಬಲಿದ್ದು, ಈ ಮೂಲಕ ರಾಜ್ಯದ ಅಭಿವೃದ್ಧಿ ಕೊಡುಗೆ ನೀಡುವ ಯೋಜನೆಗಳು ತಲೆಎತ್ತಲಿವೆ'' ಎಂದು ಆಶಿಸಿದರು.

ಅನಿಲ್ ನಾಯಕ್, ಸಿಇಒ, ಕ್ರೆಡಾಯ್ ಬೆಂಗಳೂರು ಮಾತನಾಡಿ, "2013ರಲ್ಲಿ ಮೊದಲ ಬಾರಿಗೆ ಈ ಪ್ರಶಸ್ತಿಗಳನ್ನು ಆರಂಭಿಸಿದಾಗ, ರಿಯಲ್ ಎಸ್ಟೇಟ್ ಬಳಗದಿಂದ ಇಷ್ಟೊಂದು ಅಭೂತಪೂರ್ವ ಪ್ರತಿಕ್ರಿಯೆಯನ್ನು ನಾವು ನಿರೀಕ್ಷಿಸಿರಲಿಲ್ಲ. 2ನೇ ಆವೃತ್ತಿಯ ಪ್ರಶಸ್ತಿಗಳಿಗಾಗಿ ಕ್ರೆಡಾಯ್ ಕುಟುಂಬವೆಲ್ಲಾ ಒಟ್ಟು ಸೇರಿರುವುದು ತುಂಬಾ ಖುಷಿಯ ಸಂಗತಿ" ಎಂದು ಅವರು ಹೇಳಿದ್ದಾರೆ.

ಈ ಸಂಜೆಯನ್ನು ರಂಗೇರಿಸಿದ್ದು ಒರಿಸ್ಸಾದ ಬೆಹ್ರಾಂಪುರದ ಪ್ರಿನ್ಸ್ ಡ್ಯಾನ್ಸ್ ತಂಡದ ಪ್ರದರ್ಶನ. ಅವರ ಪ್ರತಿಯೊಂದು ಪ್ರದರ್ಶನವೂ ದೇಶಭಕ್ತಿಯ ಎಳೆಯನ್ನು ಹೊಂದಿತ್ತು. ಆಸಕ್ತಿಕರ ಸಂಗತಿ ಎಂದರೆ, ಈ ತಂಡದಲ್ಲಿದ್ದ ಯುವ ನೃತ್ಯಗಾರರು ಮೂಲತಃ ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳಾಗಿದ್ದರು. ಇವರ ಪ್ರತಿಭೆ ಪ್ರದರ್ಶನಕ್ಕೆ ಇದು ವೇದಿಕೆಯಾಯಿತು.

ಕ್ರೆಡಾಯ್ ಕರ್ನಾಟಕವು ರಾಜ್ಯದ ಎಲ್ಲಾ ಪ್ರಮುಖ ನಗರಗಳಲ್ಲಿ ಅಂದರೆ, ಬೆಂಗಳೂರು, ಬೆಳಗಾವಿ, ಬಿಜಾಪುರ (ವಿಜಾಪುರ), ಗುಲ್ಬರ್ಗ (ಕಲಬುರಗಿ), ಹುಬ್ಬಳ್ಳಿ-ಧಾರವಾಡ, ಕಾರವಾರ, ಮಂಗಳೂರು, ಮೈಸೂರು ಹಾಗೂ ಉಡುಪಿಗಳಲ್ಲಿ ಘಟಕಗಳನ್ನು ಹೊಂದಿದೆ ಹಾಗೂ 450ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ.

ಕ್ರೆಡಾಯ್ ಕರ್ನಾಟಕವು ಇತ್ತೀಚಿನ ಕೈಗಾರಿಕಾ ದತ್ತಾಂಶ, ತಾಂತ್ರಿಕ ಮುನ್ನಡೆ, ಕೈಗಾರಿಕೆ ಸಾಧನೆ, ಮತ್ತು ಅಂತಾರಾಷ್ಟ್ರೀಯ ಉದ್ಯಮ ಸ್ಥಿತಿಗಳನ್ನು ಕಾಲಕಾಲಕ್ಕೆ ರಾಜ್ಯದಲ್ಲಿರುವ ತನ್ನ ಸದಸ್ಯರಿಗೆ ಅಪ್ ಡೇಟ್ ಮಾಡುತ್ತದೆ. ಕ್ರೆಡಾಯ್‍ನ ನೀತಿ ಸಂಹಿತೆಯನ್ನು ಎಲ್ಲಾ ಸದಸ್ಯರು ಅಳವಡಿಸಿಕೊಂಡಿದ್ದಾರೆ ಮತ್ತು ನೈತಿಕ ಅಭ್ಯಾಸಗಳನ್ನು ಪಾಲಿಸುತ್ತಿದ್ದಾರೆ. (ಒನ್ಇಂಡಿಯಾ ಬಿಜಿನೆಸ್)

English summary
The Mysore Hall at ITC Gardenia was abuzz with anticipation at the 2nd edition of the CREDAI Awards for Real Estate (CARE Awards) 2015. Builders from across Karnataka had submitted their nominations across various categories before an eminent jury panel. The awards were presented across multiple categories for North Karnataka, South Karnataka and Bengaluru City.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X