ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀವು ಭಾರತೀಯ ಅಂಚೆ ಗ್ರಾಹಕರಾ? ಈ ಸುದ್ದಿ ಓದಿ

|
Google Oneindia Kannada News

ನವದೆಹಲಿ, ಜನವರಿ, 18:ನೀವು ಭಾರತೀಯ ಅಂಚೆ ಗ್ರಾಹಕರೇ? ಭಾರತೀಯ ಅಂಚೆ ಇನ್ನು ಹಿಂದೆ ಉಳಿದಿದೆ ಎಂದು ಅನಿಸುತ್ತಿದೆಯಾ? ಸುಲಭವಾಗಿ ಹಣ ವಹಿವಾಟು ಸಾಧ್ಯವಾಗುತ್ತಿಲ್ಲವಾ? ಅದಕ್ಕೆಲ್ಲ ಅಂಚೆ ಇಲಾಖೆ ಸದ್ಯದಲ್ಲೇ ಉತ್ತರ ನೀಡಲಿದೆ.

ಕೋರ್ ಬ್ಯಾಂಕಿಂಗ್ ಗೆ ಒತ್ತು ನೀಡಿರುವ ಭಾರತೀಯ ಅಂಚೆ ದೇಶಾದ್ಯಂತ ಸಾವಿರ ಎಟಿಎಂ ಗಳನ್ನು ಸ್ಥಾಪನೆ ಮಾಡಲಿದೆ. ಭಾರತೀಯ ಅಂಚೆಯ 25 ಸಾವಿರ ಕಚೇರಿಗಳ ಬ್ಯಾಂಕಿಂಗ್ ವ್ಯವಸ್ಥೆಯನ್ನು ಇದಕ್ಕೆ ಲಿಂಕ್ ಮಾಡಲಾಗುವುದು.[ಆನ್ ಲೈನ್ ನಲ್ಲಿ ಪಾನ್ ಕಾರ್ಡ್ ಅಪ್ ಡೇಟ್ ಹೇಗೆ?]

post

ಈಗಾಗಲೇ 300 ಎಟಿಎಂ ತೆರೆಯಲಾಗಿದ್ದು 12 ಸಾವಿರ ಕಚೇರಿಗಳನ್ನು ಲಿಂಕ್ ಮಾಡಲಾಗಿದೆ. ಬರುವ ಮಾರ್ಚ್ ವೇಳೆಗೆ 1000 ಎಟಿಎಂ ತೆರೆಯಲಾಗುವುದು ಎಂದು ಇಲಾಖೆ ತಿಳಿಸಿದೆ.

ಭಾರತೀಯ ಅಂಚೆ 25 ಸಾವಿರ ಡಿಪಾರ್ಟ್ ಮೆಂಟಲ್ ಕಚೇರಿಗಳನ್ನು ಹೊಂದಿದೆ. ದೇಶಾದ್ಯಂತ 1 ಲಕ್ಷದ 30 ಸಾವಿರ ಕಚೇರಿಗಳು ಇವೆ. ಎಲ್ಲ ಬಗೆಯ ಸೇವೆಗಳನ್ನು ಎಟಿಎಂ ಮೂಲಕ ಪಡೆಯಬಹುದಾಗಿದೆ.[ಬದಲಾದ ಕಾಲದಲ್ಲಿ ಪಾನ್ ಕಾರ್ಡ್ ಎಲ್ಲೆಲ್ಲಿ ಬೇಕು]

2017 ರ ವೇಳೆಗೆ ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್ ಆಗಿ ರೂಪುಗೊಳ್ಳುವುದು. ಅಲ್ಲದೇ ಗ್ರಾಮೀಣ ಭಾಗದಲ್ಲಿ ಈ ವರ್ಷದ ಮಾರ್ಚ್ ಅಂತ್ಯಕ್ಕೆ ಗ್ರಾಮೀಣ ಭಾಗದಲ್ಲಿ ಹೊಸದಾಗಿ 20 ಸಾವಿರ ಕಚೇರಿ ತೆರೆಯಲಾಗುವುದು ಎಂದು ತಿಳಿಸಿದೆ.

English summary
New Delhi: The Department of Posts (Indian Post) plans to open 1,000 ATMs and bring all 25,000 departmental post offices under core banking system by March 2016. By March this year, 1000 ATMs will be rolled out across the country. DoP has 25,000 departmental post offices and 1,30,000 rural post offices across the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X