ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನು ಕೇವಲ 20 ದಿನದಲ್ಲಿ ಪಿಎಫ್ ಪಾವತಿ

|
Google Oneindia Kannada News

ನವದೆಹಲಿ, ಜು. 16: ಇನ್ನು ಮುಂದೆ ಭವಿಷ್ಯ ನಿಧಿ(ಪಿಎಫ್) ಹಣ ಪಾವತಿಗೆ ತಿಂಗಳು ಕಾಯಬೇಕಿಲ್ಲ. ಕೇಂದ್ರ ಸರ್ಕಾರ ಹೊಸ ಆದೇಶವನ್ನು ಹೊರಡಿಸಿದ್ದು ಕೇವಲ 20 ದಿನದಲ್ಲಿ ಎಲ್ಲ ವ್ಯವಹಾರಗಳನ್ನು ಮುಗಿಸಿಕೊಡಲಾಗುತ್ತದೆ.

ನಿಯಮಕ್ಕೆ ತಿದ್ದುಪಡಿ ತಂದಿರುವ ಕೇಂದ್ರ ಸರ್ಕಾರ ಕ್ಲೇಮ್ ಅವಧಿಯನ್ನು 30 ದಿನದಿಂದ 20 ದಿನಕ್ಕೆ ಇಳಿಕೆ ಮಾಡಿದೆ. ಪಿಂಚಣಿ ಯೋಜನೆ, ವಿಮಾ ಠೇವಣಿಗೆ ಸಂಬಂಧಿಸಿದ ಯೋಜನೆಗಳಿಗೂ ನಿಯಮ ಅನ್ವಯವಾಗಲಿದೆ.[ಜುಲೈನಿಂದ ಷೇರು ಪೇಟೆಯಲ್ಲಿ ಪಿಎಫ್ ಹಣ ಹೂಡಿಕೆ]

money

ಕೇಂದ್ರ ಸರ್ಕಾರ ಪಿಎಫ್ ಗೆ ಸಂಬಂಧಿಸಿದ ನಿಯಮಗಳಲ್ಲಿ ಸಾಕಷ್ಟು ತಿದ್ದುಪಡಿ ತಂದಿದ್ದರೂ ವಿಳಂಬವಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಸೆಟ್ಲ್ ಮೆಂಟ್ ಅವಧಿಯನ್ನು ಇಳಿಕೆ ಮಾಡಲಾಗಿದೆ. [ಪಿಎಫ್ ಹೊಸ ನಿಮಯ : ಟೇಕ್ ಹೋಮ್ ಸಂಬಳಕ್ಕೆ ಕುತ್ತು !]

ಜೂನ್ ತಿಂಗಳಿನಲ್ಲಿ ಸುಮಾರು 11 ಲಕ್ಷ ಪಿಎಫ್ ಪಾವತಿ ಕೆಲಸವನ್ನು ಮಾಡಿಕೊಡಲಾಗಿದೆ. ಇದರಲ್ಲಿ ಶೇ. 38ರಷ್ಟನ್ನು ಮೂರು ದಿನದಲ್ಲಿ ಉಳಿದ ಕ್ಲೇಮ್ ಗಳನ್ನು 10 ದಿನದಲ್ಲಿ ಪೂರೈಸಲಾಗಿದೆ ಎಂದು ಇಪಿಎಫ್ ಒ ತಿಳಿಸಿದೆ.

English summary
Provident fund claims are set to get resolved faster with the central government now reducing the claim period to 20 days from 30 days. It would also be available to subscribers of the Employees' Pension Scheme and the Employees' Deposit Linked Insurance Scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X