ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 1ರಿಂದ ಆಯ್ದ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಆಯಾ ದಿನವೇ ನಿಗದಿ

ಪೆಟ್ರೋಲ್, ಡೀಸೆಲ್ ಬೆಲೆಯನ್ನು ಆಯಾ ದಿನವೇ ನಿಗದಿ ಮಾಡುವಂತಹ ಪ್ರಾಯೋಗಿಕ ಯೋಜನೆಗೆ ದೇಶದ ಕೆಲವು ನಗರಗಳಲ್ಲಿ ಮೇ 1ರಿಂದ ಚಾಲನೆ ನೀಡಲಾಗಿದೆ. ಅಲ್ಲಿನ ಯಶಸ್ಸು ಗಮನಿಸಿ ದೇಶದಾದ್ಯಂತ ಜಾರಿಗೆ ತರಲಾಗುತ್ತದೆ

|
Google Oneindia Kannada News

ಬೆಂಗಳೂರು, ಮೇ 1: ಏಪ್ರಿಲ್ 30ರ ಮಧ್ಯರಾತ್ರಿಯಿಂದಲೇ ಪೆಟ್ರೋಲ್ ಬೆಲೆ ಲೀಟರ್ ಗೆ 1 ಪೈಸೆ, ಡೀಸೆಲ್ ಲೀಟರ್ ಗೆ 44 ಪೈಸೆ ಏರಿಕೆಯಾಗಿದೆ. ಸರಕಾರಿ ಸ್ವಾಮ್ಯದ ತೈಲದ ಕಂಪೆನಿಗಳು ಹದಿನೈದು ದಿನಕ್ಕೊಮ್ಮೆ ಪೆಟ್ರೋಲ್-ಡೀಸೆಲ್ ಬೆಲೆಯನ್ನು ಡಾಲರ್ ವಿರುದ್ಧದ ರುಪಾಯಿ ಮೌಲ್ಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಆಧರಿಸಿ ಏರಿಕೆ ಅಥವಾ ಇಳಿಕೆ ಮಾಡುತ್ತವೆ.

ಅಂದಹಾಗೆ, ಮೇ 1ರಿಂದ ಆಯ್ದ ನಗರಗಳಲ್ಲಿ ಪ್ರತಿ ದಿನ ಪೆಟ್ರೋಲ್-ಡೀಸೆಲ್ ಬೆಲೆ ನಿಗದಿಪಡಿಸುವ ಪದ್ಧತಿ ಪ್ರಾಯೋಗಿಕವಾಗಿ ಆಯ್ದ ಕೆಲವು ನಗರಗಳಲ್ಲಿ ಜಾರಿಗೆ ಬಂದಿದೆ. ಪುಚೆರಿ, ಆಂಧ್ರದ ವಿಶಾಖಪಟ್ಟಣ, ರಾಜಸ್ತಾನದ ಉದಯ್ ಪುರ್, ಜಾರ್ಖಂಡ್ ನ ಜೆಮ್ಷೆಡ್ ಪುರ್ ಹಾಗೂ ಚಂಡೀಗಢದಲ್ಲಿ ಈ ನಿಯಮ ಜಾರಿಗೆ ಬಂದಿದೆ.[ಇನ್ಮುಂದೆ ಪೆಟ್ರೋಲ್ ಕೂಡ ಹೋಮ್ ಡಿಲಿವರಿ ಪಡೆಯಬಹುದು!]

Petrol price

ದೇಶದಾದ್ಯಂತ ಸರಕಾರಿ ಸ್ವಾಮ್ಯದ (ಐಒಸಿ, ಬಿಪಿಸಿಎಲ್, ಎಚ್ ಪಿಸಿಎಲ್) ಐವತ್ತೆಂಟು ಸಾವಿರ ಪೆಟ್ರೋಲ್ ಪಂಪ್ ಗಳಿವೆ. ಮೊದಲಿಗೆ ಆಯ್ದ ನಗರಗಳಲ್ಲಿ ಯೋಜನೆ ಜಾರಿಗೆ ತಂದಿದ್ದು, ಉಳಿದೆಡೆಯೂ ಕ್ರಮೇಣ ಇದೇ ಮಾದರಿ ಅನ್ವಯಿಸಲಿದೆ. ಕಂಪೆನಿಯ ವೆಬ್ ಸೈಟ್ ನಲ್ಲಿ ನೋಡಿ ಅಥವಾ ಅಪ್ಲಿಕೇಷನ್ ಡೌನ್ ಲೋಡ್ ಮಾಡಿ ಗ್ರಾಹಕರು ಆಯಾ ದಿನದ ಪೆಟ್ರೋಲ್-ಡೀಸೆಲ್ ದರ ತಿಳಿಯಬಹುದಾಗಿದೆ.

English summary
Oil companies on Sunday increased the price of petrol by 1 paisa/litre and diesel by 44 paise/litre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X