ಪೆಟ್ರೋಲ್, ಡೀಸೆಲ್ ದರದಲ್ಲಿ ಭಾರೀ ಹೆಚ್ಚಳ
ನವದೆಹಲಿ, ಮಾ. 1 : ಕೇಂದ್ರ ಬಜೆಟ್ ಮಂಡನೆಯ ನಂತರ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಭಾರೀ ಏರಿಕೆಯಾಗಿದೆ. ಪೆಟ್ರೋಲ್ ಪ್ರತಿ ಲೀಟರ್ಗೆ 3.18 ರೂ. ಹಾಗೂ ಡೀಸೆಲ್ 3.09 ರೂ. ತುಟ್ಟಿಯಾಗಿದ್ದು ಶನಿವಾರ ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿಗೆ ಬಂದಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದುಬಾರಿಯಾಗಿದೆ. ರೂಪಾಯಿ-ಡಾಲರ್ ವಿನಿಮಯ ದರದಲ್ಲಿನ ಬದಲಾವಣೆಯೂ ಏರಿಕೆಗೆ ಕಾರಣ. ಅಬಕಾರಿ ಸುಂಕವನ್ನು ಸತತ ನಾಲ್ಕು ಬಾರಿ ಏರಿಸಿದ್ದರಿಂದ ಬೆಲೆ ಹೆಚ್ಚಳ ಅನಿವಾರ್ಯವಾಯಿತು ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ) ತಿಳಿಸಿದೆ.[ಆರು ತಿಂಗಳಲ್ಲಿ ಮೊದಲ ಬಾರಿಗೆ ಪೆಟ್ರೋಲ್ ದರ ಹೆಚ್ಚಳ]
ಕಚ್ಚಾ ತೈಲ ದರವು 45 ಡಾಲರ್ ಇದ್ದದ್ದು, ಈಗ 65ರ ಆಸುಪಾಸು ಬಂದಿದೆ. ರೂಪಾಯಿ ದರ ಕೂಡ ಡಾಲರ್ ಎದುರು ಅಲ್ಪ ಕುಸಿದ ಹಿನ್ನೆಲೆಯಲ್ಲಿ ದರ ಹೆಚ್ಚಿಸಲಾಗಿದೆ ಎಂದು ತೈಲ ಕಂಪನಿಗಳು ಹೇಳಿವೆ.
2014ರ ಆಗಸ್ಟ್ ನಿಂದ ಪೆಟ್ರೋಲ್ ದರವನ್ನು 10 ಸಲ ಪರಿಷ್ಕರಿಸಿ ಒಟ್ಟಾರೆ ಲೀಟರ್ಗೆ 17 ರೂ. ಕಡಿಮೆಯಾಗಿತ್ತು. ಡೀಸೆಲ್ ದರ ಅಕ್ಟೋಬರ್ನಿಂದ ಆರು ಬಾರಿ ಇಳಿಕೆಯಾಗಿದ್ದು, 12 ರೂ. ಕಡಿಮೆಯಾಗಿತ್ತು.
ಬೆಂಗಳೂರಿನಲ್ಲಿ
ಎಷ್ಟು?
ನಗರದ
ಒಳಭಾಗದ
ಬಂಕ್ಗಳಲ್ಲಿ
ಈ
ಹಿಂದೆ
ಲೀಟರ್
ಪೆಟ್ರೋಲ್
ಗೆ
62.81
ರೂ.
ನೀಡಬೇಕಿತ್ತು.
ಈಗ
ಪರಿಷ್ಕೃತ
ಬೆಲೆ
ಆಧಾರದಲ್ಲಿ
65.99
ರೂ.
ನೀಡಬೇಕಿದೆ.
ಆಗಿದೆ.
ಅಂತೆಯೇ
ಡೀಸೆಲ್
ಗೆ
50.72
ರೂ.
ಬದಲಾಗಿ
53.79
ರೂ.
ನೀಡಬೇಕಿದೆ.