ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಯಾವ ಸಂಸ್ಥೆ ಎಲ್ಲೆಲ್ಲಿ, ಎಷ್ಟು ಹೂಡಿಕೆ?

By Mahesh
|
Google Oneindia Kannada News

ಬೆಂಗಳೂರು, ಸೆ. 08: ಫೆಸಿಪಿಕ್ ಏಷ್ಯಾ ಟ್ರಾವೆಲ್ ಅಸೋಸಿಯೇಷನ್ (PATA) ಟ್ರಾವೆಲ್ ಮಾರ್ಟ್ ಸಮಾವೇಶದಲ್ಲಿ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆ ಸಹಭಾಗಿತ್ವದ ಪಿಪಿಪಿ ಯೋಜನೆಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ರಾಜ್ಯ ಸರ್ಕಾರ ಮುಂದಿನ ಐದು ವರ್ಷಗಳಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಿದೆ ಎಂದು ಪ್ರವಾಸೋದ್ಯಮ ಸಚಿವ ಆರ್ ವಿ ದೇಶಪಾಂಡೆ ಹೇಳಿದ್ದಾರೆ.

ಪ್ರವಾಸೋದ್ಯಮ ಉತ್ತೇಜನಕ್ಕೆ ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ ಅವರು ಭಾರತ ಸರ್ಕಾರವು ವೀಸಾ ಆನ್ ಅರೈವಲ್ ಸೌಲಭ್ಯವನ್ನು ಪ್ರಸ್ತುತ 43 ರಾಷ್ಟ್ರಗಳಿಗೆ ವಿಸ್ತರಿಸಿದ್ದು, ಮುಂದಿನ ದಿನಗಳಲ್ಲಿ 150 ರಾಷ್ಟ್ರಗಳಿಗೆ ವಿಸ್ತರಿಸಲಾಗುವುದು ಎಂದು ಕೇಂದ್ರ ಸರ್ಕಾರ ಭರವಸೆ ನೀಡಿರುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಲಿದೆ.

ಇದಲ್ಲದೆ 'ಹೃದಯ್' ಹಾಗೂ 'ಪ್ರಸಾದ್' ಹೆಸರಿನ ಎರಡು ಹೊಸ ಯೋಜನೆಗಳನ್ನು ಸರ್ಕಾರ ಪರಿಚಯಿಸುತ್ತಿದೆ. ಇದರಿಂದ ಕರ್ನಾಟಕದ ಪಾರಂಪರಿಕ ನಗರಗಳಿಗೆ ಅನುಕೂಲವಾಗಲಿದೆ. ಬಂಡವಾಳ ಹೂಡಿಕೆದಾರರಿಗೂ ನೆರವಾಗಲಿದೆ ಎಂದು ಸಚಿವ ಆರ್ ವಿ ದೇಶಪಾಂಡೆ ಅಭಿಪ್ರಾಯಪಟ್ಟಿದ್ದಾರೆ. [ಹೃದಯ್, ಪ್ರಸಾದ್ ಪ್ರವಾಸೋದ್ಯಮ ಯೋಜನೆ ಜಾರಿ: ಅನಂತ್]

PATA Travel Mart 2015 PPP Model 30 MoU signed Govt : RV Deshpande
ಜೋಗ ಸೇರಿದಂತೆ ಶಿವಮೊಗ್ಗ ಪ್ರವಾಸಿ ತಾಣಗಳ ಅಭಿವೃದ್ಧಿಗೆ 1000 ಕೋಟಿ ರು ಹೂಡಿಕೆ ಮಾಡಲು ಯುಎಇನ ನಿವಾಸಿ, ಮಂಗಳೂರು ಮೂಲದ ಬಿ.ಆರ್ ಶೆಟ್ಟಿ ಅವರು ಮುಂದೆ ಬಂದಿದ್ದಾರೆ. ಇದಲ್ಲದೆ 13 ಜಿಲ್ಲೆಗಳಲ್ಲಿ ವಿವಿಧ ಸಂಸ್ಥೆಗಳು ಹೂಡಿಕೆ ಮಾಡಲು ಮುಂದಾಗಿವೆ.

ಯಾವ ಯಾವ ಸಂಸ್ಥೆ ಎಲ್ಲೆಲ್ಲಿ ಎಷ್ಟೆಷ್ಟು ಹೂಡಿಕೆ ಮಾಡುತ್ತಿದೆ. ಅಂದಾಜು ಎಷ್ಟು ಜನರಿಗೆ ಉದ್ಯೋಗ ಸಿಗಬಹುದು ಎಂಬ ವಿವರ ಮುಂದಿದೆ.

* ಬೆಂಗಳೂರು ವೈಟ್‌ಫೀಲ್ಡ್‌ನಲ್ಲಿ ಮನರಂಜನೆ, ಜಲಕ್ರೀಡೆ-182.71ಕೋಟಿ
* ಮೈಸೂರು ಚಾಮುಂಡಿ ಬೆಟ್ಟಕ್ಕೆ ರೋಪ್‌ ವೇ- 70 ಕೋಟಿ
* ಮೈಸೂರು ಮತ್ತು ಕೂರ್ಗ್‌ನಲ್ಲಿ ರೆಸಾರ್ಟ್‌- 100 ಕೋಟಿ
* ಕಬಿನಿಯಲ್ಲಿ ವೈಲ್ಡ್ ಲೈಫ್ ರೆಸಾರ್ಟ್‌-50 ಕೋಟಿ
* ಮಡಿಕೇರಿಯಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮ- 50 ಕೋಟಿ
* ಮಡಿಕೇರಿಯಲ್ಲಿ ರೆಸಾರ್ಟ್‌ ಸ್ಪಾ-50 ಕೋಟಿ
* ಕುಮಟಾ ತಾಲೂಕಿನಲ್ಲಿ ರೆಸಾರ್ಟ್‌-47 ಕೋಟಿ
* ಕೊಡಗಿನಲ್ಲಿ ರೆಸಾರ್ಟ್‌- 20 ಕೋಟಿ
* ಮೈಸೂರಿನಲ್ಲಿ ಗಾಲ್ಫ್ ಟೂರಿಸಂ-46ಕೋಟಿ
* ನಂದಿ ಬೆಟ್ಟಕ್ಕೆ ರೋಪ್‌ ವೇ-24.50 ಕೋಟಿ
* ಹಲಸೂರು ಕೆರೆಯಲ್ಲಿ ತೇಲುವ ಹೋಟೆಲ್.- 40 ಕೋಟಿ
* ಬಾಗಲಕೋಟೆ ಬದಾಮಿಯಲ್ಲಿ ರೆಸಾರ್ಟ್‌- 28 ಕೋಟಿ
* ಬಳ್ಳಾರಿಯಲ್ಲಿ ಹೋಟೆಲ್, ಪ್ರವಾಸೋದ್ಯಮ ಕೌಶಲ್ಯ ತರಬೇತಿ ಕೇಂದ್ರ-20 ಕೋಟಿ
* ದೇವನಹಳ್ಳಿಯಲ್ಲಿ ಹೆಲ್ತ್, ವೆಲ್‌ನೆಸ್‌ ಟೂರಿಸಂ ಕೇಂದ್ರ- 18 ಕೋಟಿ
* ಚಿಕ್ಕಬಳ್ಳಾಪುರದಲ್ಲಿ ರೆಸಾರ್ಟ್‌-16 ಕೋಟಿ
ವಿಜಯಪುರ, ಚಿಕ್ಕಮಗಳೂರು, ಹಾಸನ, ಜೋಗದಲ್ಲಿ ರೆಸಾರ್ಟ್‌, ಹೋಟೆಲ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

English summary
A step in this direction was the 30 Memoranda of Understanding (MoU) signed under the public-private partnership (PPP) model. A panel discussion on ‘Government and Private Sectors-Working Together for Development’ at the ongoing Pacific Asia Travel Association (PATA) Travel Mart 2015 on Monday focused on the problems and challenges of the PPP model.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X