ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಜಿ ಹಾಕಿದ 48 ಗಂಟೆಗಳಲ್ಲಿ ಪ್ಯಾನ್ ಕಾರ್ಡ್

|
Google Oneindia Kannada News

ನವದೆಹಲಿ, ಏ. 22: ಪ್ಯಾನ್ ಕಾರ್ಡ್ ನಂಬರ್ ಗಿ ಇನ್ನು ವಾರಗಳ ಕಾಲ ಪರಿತಪಿಸಬೇಕಾಗಿಲ್ಲ. ಕೇವಲ 48 ಗಂಟೆಗಳಲ್ಲಿ ಪ್ಯಾನ್ ಕಾರ್ಡ್ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

ನೀವು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ ಎರಡು ದಿನದ ಒಳಗಾಗಿ ಪ್ಯಾನ್ ಕಾರ್ಡ್ ನಿಮ್ಮ ಕೈ ಸೇರಲಿದೆ. ಈ ಬಗ್ಗೆ ಕ್ರಮ ತೆಗೆದುಕೊಂಡಿರುವ ಕೇಂದ್ರ ಸರ್ಕಾರ ಸದ್ಯದಲ್ಲೇ ಅಧಿಕೃತ ಆದೇಶ ಹೊರಡಿಸಲಿದೆ.[ಎಪಿಕ್ ಅಥವಾ ಆಧಾರ್ ನೀಡಿ ಪ್ಯಾನ್ ಕಾರ್ಡ್ ಪಡೆಯಿರಿ]

pan card

ಜನಧನ ಯೋಜನೆ ಜಾರಿ ಮತ್ತು ಅನುಷ್ಠಾನದ ಮಾದರಿಯಲ್ಲಿ ಪ್ಯಾನ್ ಕಾರ್ಡ್ ನೀಡಿಕೆ ಆರಂಭ ಮಾಡಲಾಗುವುದು ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಕುರಿತು ವಿಶೇಷ ಆಂದೋಲನ ಕೈಗೊಳ್ಳಲು ಕೇಂದ್ರ ನೇರ ತೆರಿಗೆಗಳ ಮಂಡಳಿ ಮುಂದಾಗಿದೆ. ನಗರ, ಗ್ರಾಮೀಣ ಪ್ರದೇಶಗಳಲ್ಲೂ ಯೋಜನೆ ಅನುಷ್ಠಾನ ಮಾಡಲಾಗುವುದು.[ಪಾನ್ ಕಾರ್ಡ್ ಕಳೆದುಕೊಂಡರೆ ಏನು ಮಾಡಬೇಕು?]

ಚುನಾವಣೆ ಗುರುತಿನ ಪತ್ರ ಅಥವಾ ಆಧಾರ್ ಕಾರ್ಡ್ ದಾಖಲೆ ಸಲ್ಲಿಸಿದರೆ ಪ್ಯಾನ್ ಕಾರ್ಡ್ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಈ ಹಿಂದೆ ತಿಳಿಸಿತ್ತು. ಆದಾಯ ತೆರಿಗೆ ಪಾವತಿಯನ್ನು ಮತ್ತಷ್ಟು ಸರಳ ಮಾಡಲು ಕೇಂದ್ರ ಸರ್ಕಾರ ಇಂಥ ಯೋಜನೆಗಳನ್ನು ರೂಪಿಸುತ್ತಿದೆ. [ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?]

English summary
The Central government will soon launch a facility under which a PAN (Permanent Account Number) card will be issued within 48 hours of applying, according to a senior official. "An online facility for issuance of PAN is on the anvil under which an applicant can get a PAN card within 48 hours," . Besides, special camps will be organised throughout the country, including rural areas, to help people get PAN cards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X