ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನುಪಯುಕ್ತ 1700 ಕಾಯ್ದೆ ರದ್ದು ಮಾಡಲು ಕ್ರಮ: ಮೋದಿ

By Mahesh
|
Google Oneindia Kannada News

ಮುಂಬೈ, ಫೆ.15: ಸುಮಾರು 1700 ಅನುಪಯುಕ್ತ ಕಾಯ್ದೆಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ರದ್ದು ಮಾಡುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅನುಪಯುಕ್ತ ಕಾನೂನುಗಳನ್ನು ರದ್ದುಪಡಸುವ ಪ್ರಮುಖ ಉದ್ದೇಶವೆಂದರೆ ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಇಲ್ಲಿ ಮುಕ್ತ ವಾತಾವರಣ ಕಲ್ಪಿಸಬೇಕಾಗಿದೆ. ಇಡೀ ವಿಶ್ವ ಭಾರತದ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ ಎಂದು ಮೋದಿ ತಿಳಿಸಿದ್ದಾರೆ.ಮುಂಬೈಯ ಪಾಶ್ಚಿಮಾತ್ಯ ಭಾರತದ ನ್ಯಾಯವಾದಿಗಳ ಸಂಘಗಳು ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಪ್ರಧಾನಿ ಮಾತನಾಡಿದರು.

ಎಫ್ ಡಿಐಗಾಗಿ ನಿಯಮ ಸಡಿಲ: ವಿದೇಶಿ ಕಂಪನಿಗಳ ಉದ್ಯಮಿಗಳು ಇಲ್ಲಿಗೆ ಬಂದು ಬಂಡವಾಳ ಹೂಡಿಕೆ ಮಾಡಲು ಬಯಸಿದಾಗ
ಯಾವುದೇ ರೀತಿಯಲ್ಲೂ ಇಲ್ಲಿನ ನ್ಯಾಯಾಂಗ ಪದ್ಧತಿ ತೊಡಕಾಗಬಾರದು ಎಂಬುದು ಈ ರದ್ಧತಿಯ ಮೂಲ ಉದ್ದೇಶ ಎಂದು ಅವರು ಹೇಳಿದ್ದಾರೆ.

Over 1700 laws outdated and will be repealed, says PM Modi

ಹಿಂದೆ ಕಾಯ್ದೆಗಳನ್ನು ಸಿದ್ಧಪಡಿಸಿದ ವೇಳೆ ಹಲವಾರು ವಿಷಯಗಳ ಬಗ್ಗೆ ಸ್ಪಷ್ಟವಾದ ವಿವರಣೆ ಇಲ್ಲ. ಈಗ ಅದನ್ನು ಹೊಸದಾಗಿ ವ್ಯಾಖ್ಯಾನಿಸಬೇಕಾಗಿದೆ. ಹಾಗಾಗಿ ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ಸರಳವಾದ ಕಾನೂನು ರೂಪಿಸಲು ನ್ಯಾಯವಾದಿಗಳ ಸಂಘಟನೆಗಳು(ಬಾರ್ ಅಸೋಸಿಯೇಷನ್ಸ್) ಪ್ರಮುಖ ಪಾತ್ರ ವಹಿಸಬೇಕು. ಹಿಂದಿನಿಂದಲೂ ವಕೀಲ ಸಮುದಾಯ ಈ ದೇಶದ ಕಾನೂನು ರೂಪಣೆ ಮತ್ತು ಉತ್ತಮ ಸ್ಥಿತಿಗೆ ಮಹತ್ತರವಾದ ಕೊಡುಗೆ ನೀಡಿದೆ ಎಂದು ಮೋದಿ ಶ್ಲಾಘಿಸಿದರು.

ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಮುಂಚೂಣೆಯಲ್ಲಿ ನಿಂತು ಹೋರಾಡಿ ದೇಶಕ್ಕೆ ಸ್ವಾತಂತ್ರ್ಯಗಳಿಸಿಕೊಟ್ಟ ಮಹಾನ್ ವ್ಯಕ್ತಿಗಳೆಲ್ಲರೂ ವಕೀಲರೇ ಆಗಿದ್ದರು. ಬಾರ್ ಅಸೋಸಿಯೇಷನಸ್ ಸದಸ್ಯರಾಗಿದ್ದರು. ಅಂಥವರಲ್ಲಿ ಮಹಾತ್ಮಾಗಾಂಧಿ, ಸರದಾರ್ ವಲಭ ಭಾಯಿಪಟೇಲ್ ಮುಂತಾದವರು ಪ್ರಮುಖರು ಎಂದು ಮೋದಿ ಹೇಳಿದರು. ಈ ಸಂಘಟನೆಗೆ 150 ವರ್ಷಗಳ ಇತಿಹಾಸವಿದೆ ಎಂದು ಮೋದಿ ಸ್ಮರಿಸಿದರು.

English summary
Prime Minister Narendra Modi on Saturday attended a valedictory function of the sesquicentennial (150 years) celebration of the Advocates Association of Western India, the government had already identified 1,700 such Acts and the process to repeal such obsolete laws had already started.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X