ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಬ್ಸಿಡಿ ರಹಿತ ಸಿಲಿಂಡರ್ 25 ರುಪಾಯಿ ಇಳಿಕೆ

|
Google Oneindia Kannada News

ನವದೆಹಲಿ,ಸೆ. 01: ತೈಲ ಬೆಲೆ ಇಳಿಕೆ ಮಾಡಿ ಗ್ರಾಹಕರಿಗೆ ಶುಭ ಸುದ್ದಿ ನೀಡಿದ್ದ ಕೇಂದ್ರ ಸರ್ಕಾರ ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಗಳ ದರವನ್ನು ಕಡಿಮೆ ಮಾಡಿದೆ.

ಸಬ್ಸಿಡಿ ರಹಿತ ಬೆಲೆಯಲ್ಲಿ ಖರೀದಿಸುವ ಸಿಲಿಂಡರ್​ ದರವನ್ನು 25.50 ರು. ಕಡಿಮೆ ಮಾಡಲಾಗಿದೆ. ಹಾಗಾಗಿ ಇನ್ನು ಮುಂದೆ ಸಬ್ಸಿಡಿ ರಹಿತ ಸಿಲಿಂಡರ್ ಗಳಿಗೆ 559.50 ರು. ನೀಡಿದರೆ ಸಾಕು. ಸಬ್ಸಿಡಿ ಸಿಲಿಂಡರ್ ದರ ದೆಹಲಿಯಲ್ಲಿ 417.82 ರು. ಇದೆ.[ಆನ್ ಲೈನ್ ನಲ್ಲೇ ಹೊಸ ಗ್ಯಾಸ್ ಸಂಪರ್ಕ ಪಡೆಯಿರಿ]

lpg

ಮೂರು ತಿಂಗಳ ಅವಧಿಯಲ್ಲಿ ಮೂರನೇ ಸಾರಿ ಸಬ್ಸಿಡಿ ರಹಿತ ಸಿಲಿಂಡರ್ ದರ ಇಳಿಕೆಯಾಗುತ್ತಿದೆ. ಜುಲೈ 1ರಂದು 18 ರು. ನಷ್ಟು, ಆಗಸ್ಟ್1ರಂದು 23.50 ರು. ಇಳಿಕೆ ಮಾಡಲಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ತೀವ್ರತೆರನಾದ ಇಳಿಕೆ ಸಾಧಿಸಿದ್ದು ಎಲ್ ಪಿಜಿ ದರ ಇಳಿಕೆಗೂ ಕಾರಣವಾಗಿದೆ.[ಉತ್ತರ ಕನ್ನಡ ಜಿಲ್ಲೆ ಕುಮಟಾದಲ್ಲಿ ಗ್ಯಾಸ್ ಟ್ಯಾಂಕರ್ ಸ್ಫೋಟ]

ಎಲ್ ಪಿಜಿ ಮಾತ್ರವಲ್ಲದೇ ಜೆಟ್ ಇಂಧನ ಬೆಲೆಯಲ್ಲೂ ಸಹ ಗಣನೀಯ ಇಳಿಕೆಯಾಗಿದೆ. ಏವಿಯೇಷನ್ ಟರ್ಬೆನ್ ಫುಯೆಲ್ (ಎಟಿಎಫ್) ಶೇ.11.7ರಷ್ಟು ಇಳಿಕೆ ಸಾಧಿಸಿದೆ. ಷೇರು ಪೇಟೆಯ ಮೇಲೂ ಈ ಇಳಿಕೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

English summary
After petrol and diesel, now non-subsidised LPG rates reduced by Rs 25.50. The prices of aviation turbine fuel (ATF) and non-subsidised LPG on Tuesday were cut by 11.7 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X