ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈ ಘಟಕ ಮಾರಾಟ: ಅರ್ಜಿ ಹಿಂಪಡೆದ ನೋಕಿಯಾ

|
Google Oneindia Kannada News

ನವದೆಹಲಿ, ಮೇ. 27: ನೋಕಿಯಾ ಇಂಡಿಯಾ ಚೆನ್ನೈನ ತನ್ನ ಘಟಕ ಮಾರಾಟ ಮಾಡಲು ಅನುಮತಿ ಕೋರಿ ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ಹಿಂಪಡೆದಿದೆ.

ಆದಾಯ ತೆರಿಗೆ ಇಲಾಖೆಗೆ 10,000 ಕೋಟಿ ರೂ. ತೆರಿಗೆ ಬಾಕಿ ಸಂಗತಿ ಮುಂದಿಟ್ಟುಕೊಂಡು ಚೆನ್ನೈ ಘಟಕವನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಇದು ಘಟಕ ಮಾರಾಟಕ್ಕೆ ಅಡ್ಡಿಯಾಗಿ ಪರಿಣಮಿಸಿತ್ತು. ಆದರೆ ಈಗ ನೋಕಿಯಾವೇ ಮಾರಾಟಕ್ಕೆ ಸಂಬಂಧಿಸಿ ಸಲ್ಲಿಸಿದ್ದ ಅರ್ಜಿಯನ್ನು ಹಿಂದಕ್ಕೆ ಪಡೆದಿದೆ.[ಚೆನ್ನೈ: ನೋಕಿಯಾ ಉತ್ಪಾದನಾ ಘಟಕ ಬಹುತೇಕ ಸ್ಥಗಿತ]

nokia

ವಿವಾದಿತ ಘಟಕವನ್ನು ಖರೀದಿ ಮಾಡಲು ಯಾರು ಮುಂದೆ ಬಾರದ ಹಿನ್ನೆಲೆಯಲ್ಲಿ ನೋಕಿಯಾ ಅರ್ಜಿ ಹಿಂದಕ್ಕೆ ಪಡೆದಿದೆ. ಚೆನ್ನೈನ ಶ್ರೀಪೆರಂಬದೂರಿನಲ್ಲಿ ಉತ್ಪಾದನೆಗೆ ಅಣಿಯಾಗಿದ್ದದ ನೋಕಿಯಾ 2014 ರ ಜೂನ್ ನಲ್ಲಿ ಉತ್ಪಾದನೆ ನಿಲ್ಲಿಸಿತ್ತು. ಕಂಪನಿಯ ಎಲ್ಲ ಸಿಬ್ಬಂದಿ ಕೆಲಸ ತೊರೆದು ಹೊರನಡೆದಿದ್ದರು.[ನೋಕಿಯಾ ಹೆಸರು ಕೈಬಿಟ್ಟ ಮೈಕ್ರೋಸಾಫ್ಟ್]

ನಂತರ ಮೈಕ್ರೋಸಾಫ್ಟ್ ಕಂಪನಿಯ ಜತೆ ಕೈಜೋಡಿಸಿರುವ ನೋಕಿಯಾಗೆ ಬೇಡಿಕೆ ಕುದುರಿತ್ತು. ಆದರೆ ಚೆನ್ನೈ ಘಟಕ ಬೇಡ ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಆದಾಯ ತೆರಿಗೆ ಇಲಾಖೆ ಬಾಕಿ ತೆರಿತೆ ತುಂಬುವಂತೆ ನ್ಯಾಯಾಲಯದ ಮೆಟ್ಟಿಲು ಏರಿದ್ದು ಘಟಕ ಮಾರಾಟಕ್ಕೆ ಅಡ್ಡಿಯಾಗಿ ಪರಿಣಮಿಸಿತ್ತು. ಈಗ ಸ್ವತಃ ನೋಕಿಯಾವೇ ಮಾರಾಟದ ಅರ್ಜಿ ಹಿಂದಕ್ಕೆ ಪಡೆದಿದೆ.

English summary
Nokia India informed the Delhi High Court that it wants to withdraw its plea to sell its mobile manufacturing unit at Sriperumbudur, near Chennai, which was frozen over a Rs 10,000-crore tax dispute with the Income Tax department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X