ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಫ್ರೆಶರ್ಸ್ ಗೆ ಈಗ ಕೆಟ್ಟ ಕಾಲ, ಸಂಬಳ ಏರಿಕೆ ಆಗೋದಿಲ್ಲ!

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 28: 'ದುರ್ಭಿಕ್ಷದಲ್ಲಿ ಅಧಿಕ ಮಾಸ' ಎನ್ನುವಂತೆ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಫ್ರೆಶರ್ಸ್ ಗಳ ನೇಮಕಾತಿ ಸಂಖ್ಯೆ ಇಳಿಮುಖವಾಗುವ ಸೂಚನೆ ಸಿಕ್ಕ ಬೆನ್ನಲ್ಲೇ, ಸಂಬಳ ಏರಿಕೆಯೂ ಇಲ್ಲ ಎಂಬ ಕಹಿ ಸುದ್ದಿ ಬಂದಿದೆ. ದೇಶದ ಪ್ರಮುಖ ಐಟಿ ರಫ್ತು ಸಂಸ್ಥೆಗಳಾದ ಟಿಸಿಎಸ್, ಇನ್ಫೋಸಿಸ್ ಹಾಗೂ ವಿಪ್ರೋ ಫ್ರೆಶರ್ಸ್ ಈ ವರ್ಷ ಸಂಬಳ ಏರಿಕೆ ನಿರೀಕ್ಷೆ ಇಟ್ಟುಕೊಳ್ಳಬೇಡಿ ಎಂದು ಸುಳಿವು ನೀಡಿದೆ.[ಇನ್ಫೋಸಿಸ್ ಉದ್ಯೋಗಿಗಳಿಗೆ ಬಡ್ತಿ, ಸಂಬಳ ಏರಿಕೆ ಗಿಫ್ಟ್]

ದೇಶದ ಅತಿದೊಡ್ದ ಐಟಿ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಸುಮಾರು ಪ್ರಸಕ್ತ ವರ್ಷ 45,000 ಹೊಸ ನೇಮಕಾತಿ ಮಾಡಿಕೊಂಡಿದೆ. ಆದರೆ, ಮುಂದಿನ ವರ್ಷಕ್ಕೆ ಈ ಸಂಖ್ಯೆ ತಗ್ಗಲಿದೆ. ಒಂದು ಕಾಲದಲ್ಲಿ ವಾರ್ಷಿಕ 90,000ಕ್ಕೂ ಅಧಿಕ ನೇಮಕಾತಿ ನಡೆಸಿದ್ದ ಟಿಸಿಎಸ್ ಸಂಸ್ಥೆ ಯುವ ಪದವೀಧರರ ಪಾಲಿಗೆ ಆಶಾಕಿರಣವಾಗಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ.[ಸಂಸದರ ತಿಂಗಳ ವೇತನ ಡಬ್ಬಲ್, ಝಣ ಝಣ ಕಾಂಚಾಣ]

No salary hike for freshers in TCS, Infosys, Wipro

ಫ್ರೆಶರ್ಸ್ ನೇಮಕಾತಿ ಇಳಿಕೆ: ಸುಮಾರು 160 ಬಿಲಿಯನ್ ಡಾಲರ್ ಮೌಲ್ಯ ಹೊಂದಿರುವ ಐಟಿ ಇಂಡಸ್ಟ್ರಿ ಈ ವರ್ಷ ನೇಮಕಾತಿಯಲ್ಲಿ ಇಳಿಕೆ ಕಾಣುವುದರ ಜೊತೆಗೆ ಫ್ರೆಶರ್ಸ್ ಗೆ ಸಂಬಳ ಏರಿಕೆ ನೀಡುವುದರಲ್ಲೂ ಜುಗ್ಗತನ ತೋರಲಿದೆ.

ವರ್ಷಕ್ಕೆ ಸುಮಾರು 10 ಲಕ್ಷಕ್ಕೂ ಅಧಿಕ ಇಂಜಿನಿಯರಿಂಗ್ ಪದವೀಧರರು ತಯಾರಾಗುತ್ತಿದ್ದಾರೆ. ಆದರೆ, ಐಟಿ ಕ್ಷೇತ್ರದಲ್ಲಿ ಹೊಸಬರ ನೇಮಕಾತಿ 2 ಲಕ್ಷದಿಂದ 3 ಲಕ್ಷ ದಾಟುತ್ತಿಲ್ಲ ಎಂದು ನಾಸ್ಕಾಮ್ ವರದಿ ಹೇಳುತ್ತಿದೆ. ಈ ಮಾನವ ಸಂಪನ್ಮೂಲ ಬೇಡಿಕೆ, ಪೂರೈಕೆ ವ್ಯತ್ಯಯ ಭಾರತಕ್ಕೆ ಮುಳುವಾದರೂ ಅಚ್ಚರಿಪಡಬೇಕಾಗಿಲ್ಲ.[ಗೂಗಲ್ ನಿಂದ ಕೋಟಿ ರು ಸಂಬಳದ ಆಫರ್!]

ಯುಎಸ್ ಮೂಲದ ಕಾಂಗ್ನಿಜೆಂಟ್ ನಲ್ಲಿ ಕಳೆದ ವರ್ಷ ಫ್ರೆಶರ್ಸ್ ಸಂಬಳ 3.05 ಲಕ್ಷ ರಿಂದ 3.35 ಲಕ್ಷ ರು ನೀಡಲಾಗುತ್ತಿತ್ತು. ಟಿಸಿಎಸ್ ನಲ್ಲಿ 3.18 ಲಕ್ಷ ರು ನಿಂಡ 3.30 ಲಕ್ಷ ರು ನೀಡಲಾಗಿತ್ತು. 2007-08ರಿಂದ ಇತ್ತೀಚಿನ ವರ್ಷದ ವರೆಗೂ ಫ್ರೆಶರ್ಸ್ ಸಂಬಳ 4 ಲಕ್ಷ ರು ದಾಟಿಲ್ಲ. ಮುಂದಿನ 5 ರಿಂದ 10 ವರ್ಷಗಳ ಅವಧಿಯಲ್ಲಿ ಎಂಟ್ರಿ ಲೆವಲ್ ಇಂಜಿನಿಯರಿಂಗ್ ಹುದ್ದೆಗಳಿಗೆ ಬೇಡಿಕೆ ತಗ್ಗಲಿದ್ದು, ಪದವೀಧರರ ಪಾಡು ಯಾರು ಕೇಳುವರೋ ಗೊತ್ತಿಲ್ಲ.

English summary
The country's largest IT firm Tata Consultancy Services Ltd (TCS) said that it has given out about 45,000 offers to freshers this year, said the PTI report. and it is unlikely to revise fresher-level wages, After TCSm Congnizant, Infosys and Wipro said they planned to keep salary levels constant in the near term.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X