ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2 ಮತ್ತು 4ನೇ ಶನಿವಾರ ದೊಡ್ಡ ಮೊತ್ತ ರವಾನೆ ಸಾಧ್ಯವಿಲ್ಲ

|
Google Oneindia Kannada News

ನವದೆಹಲಿ, ಸೆ.02: ಬ್ಯಾಂಕ್ ನೌಕರರ ಬೇಡಿಕೆ ಗೆ ಸ್ಪಂದಿಸಿ ತಿಂಗಳ ಎರಡು ಮತ್ತು ನಾಲ್ಕನೇ ಶನಿವಾರ ದಿನ ಪೂರ್ತಿ ರಜೆ ನೀಡಿರುವುದರಿಂದ ಆ ದಿನಗಳಂದು ದೊಡ್ಡ ಮೊತ್ತದ ಹಣ ವರ್ಗಾವಣೆ (ಆರ್‌ಟಿಜಿಎಸ್) ಮಾಡಲಾಗುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.

ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ತಿಂಗಳ ಮೊದಲ ಹಾಗೂ ಮೂರನೇ ಶನಿವಾರಗಳಂದು ಈಗಿರುವಂತೆಯೇ ಆರ್‌ಟಿಜಿಎಸ್ ಸೌಲಭ್ಯ ದೊರೆಯಲಿದೆ. ಆರ್‌ಆರ್‌ಟಿಜಿಎಸ್ ವ್ಯವಸ್ಥೆಯಡಿ ಕನಿಷ್ಠ 2 ಲಕ್ಷ ರೂ. ವರ್ಗಾವಣೆ ಮಾಡಬಹುದಾಗಿದ್ದು ಗರಿಷ್ಠ ಮೊತ್ತ ನಿಗದಿ ಮಾಡಲಾಗಿಲ್ಲ. ಆದರೆ ಇನ್ನು ಮುಂದೆ ಎರಡು ಮತ್ತು ನಾಲ್ಕನೇ ಶನಿವಾರ ಇಷ್ಟು ದೊಡ್ಡ ಪ್ರಮಾಣದ ಹಣ ವರ್ಗಾವಣೆಗೆ ಬ್ರೇಕ್ ಬೀಳಲಿದೆ.[ಗಮನಿಸಿ.. 2 ಮತ್ತು 4 ನೇ ಶನಿವಾರ ಬ್ಯಾಂಕ್ ಬಾಗಿಲು ತೆರೆಯಲ್ಲ]

rbi

ಅಲ್ಲದೇ ಹಣ ವರ್ಗಾವಣೆ ಸಮಯಾವಕಾಶದಲ್ಲೂ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 3.30 ರ ಅವಧಿಯಲ್ಲಿ ದೊಡ್ಡ ಮೊತ್ತದ ಹಣ ಟ್ರಾನ್ಸ್ ಫರ್ ಮಾಡಬಹುದು. ಸಂಜೆ 4.30ರ ವರೆಗೂ ಕೆಲವು ಸಂದರ್ಭಗಳಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ.[11 ಪೇಮೆಂಟ್ ಬ್ಯಾಂಕ್ ಆರಂಭಕ್ಕೆ ಆರ್‌ಬಿಐ ಅಸ್ತು]

ಇಂಟರ್ ಬ್ಯಾಂಕ್ ಟ್ರಾನ್ಸಾಕ್ಷನ್ ಗೆ ರಾತ್ರಿ 8 ಗಂಟೆವರೆಗೂ ಅವಕಾಶ ನೀಡಲಾಗಿದೆ. ಹಿಂದಿನ ವ್ಯವಸ್ಥೆಯಲ್ಲಿ ಮಧ್ಯಾಹ್ನ 3.30ಕ್ಕೆ ಎಲ್ಲ ಬ್ಯಾಂಕಿಂಗ್ ವ್ಯವಹಾರಗಳನ್ನು ಮುಕ್ತಾಯ ಮಾಡಬೇಕಿತ್ತು. ಆದರೆ ಇದೀಗ ಹಣ ರವಾನೆಯ ಸಮಯ ವಿಸ್ತಾರ ಮಾಡಲಾಗಿದ್ದು ನಾಗರಿಕರಿಗೆ ಅನುಕೂಲವಾಗುವುದರಲ್ಲಿ ಸಂಶಯವಿಲ್ಲ.

English summary
New Delhi: The RTGS system, which allows real time transfer of large funds, will not be operated on second and fourth Saturdays with banks observing public holiday on that days, theReserve Bank of India (RBI) said. The system will operate for full days on other Saturdays of a month, RBI said in a notification. "Processing of future value dated transactions with value date falling on second and fourth Saturdays will not be undertaken under RTGS," RBI said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X