ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಲಿ ಕೈಯ ಕುಬೇರ ಮಲ್ಯ, ಈಗಲೂ ಯುಬಿ ಅಧಿಪತಿ

By Mahesh
|
Google Oneindia Kannada News

ಬೆಂಗಳೂರು, ಜುಲೈ 09: ಯುನೈಟೆಡ್ ಬ್ರೆವರೀಸ್ (ಯುಬಿ) ಮೇಲಿನ ಹಿಡಿತ ತಪ್ಪಿದರೂ ಕಿಂಗ್ ಫಿಷರ್ ನೆಲಕಚ್ಚಿ ನಿಂತರೂ ಜಗ್ಗದೆ ಬೆಚ್ಚದ, ಬೆದರದ ವಿಜಯ್ ಮಲ್ಯ ಅವರನ್ನೇ ಯುಬಿ ಸಮೂಹ ಸಂಸ್ಥೆಯ ಪಾಲುದಾರಿಕೆ ಲೀಡರ್ ಎಂದು ಡಚ್ ಮೂಲದ ಹೆನ್ ಕೆನ್ ಸಂಸ್ಥೆ ಪ್ರಕಟಿಸಿದೆ.

ಈ ಮೂಲಕ ಯುಬಿ ಸಮೂಹದಲ್ಲಿ ತನ್ನ ಪಾಲುದಾರಿಕೆಯ ಪ್ರಮಾಣ ಕಳೆದುಕೊಂಡಿರುವ ಮಲ್ಯ ಅವರು ಬೋರ್ಡ್ ನಿಂದ ಹೊರ ನಡೆಯಲಿದ್ದಾರೆ ಎಂಬ ಸುದ್ದಿ ಸುಳ್ಳಲಾಗಿದೆ. ಹಾಲೆಂಡ್​ನ ಬಿಯರ್ ಉತ್ಪಾದಕ ಕಂಪನಿ ಹೆನ್​ಕೆನ್, ಯುಬಿಯಲ್ಲಿನ ಪಾಲುದಾರಿಕೆ ಹೆಚ್ಚಿಸಿಕೊಂಡಿದೆ. ಈಗ ಯುಬಿಯಲ್ಲಿನ ಹೆನ್ ಕೆನ್(Heineken) ಪಾಲುದಾರಿಕೆ ಶೇ. 42ಕ್ಕೆ ಏರಿದೆ. ವಿಜಯ್ ಮಲ್ಯ ಬಳಿಯ ಷೇರು ಪ್ರಮಾಣ ಶೇ. 32ಕ್ಕೆ ಇಳಿದಿದೆ.

No change in UB ownership

ಬ್ರಿಟಿಷ್ ಕಂಪನಿ ಡಿಯಾಜಿಯೊ ಒಡೆತನದಲ್ಲಿರುವ ಯುನೈಟೆಡ್ ಸ್ಪಿರಿಟ್ಸ್ ಹೊಂದಿದ್ದ ಯುಬಿಯ 85 ಲಕ್ಷ ಷೇರುಗಳು ಹೆನ್​ಕೆನ್​ಗೆ ಪಾಲಾಗಿದೆ. ಸುಮಾರು 872 ಕೋಟಿ ರೂ. ನೀಡಿ ಯುಬಿ ಷೇರುಗಳನ್ನು ಹೆನ್​ಕೆನ್ ಖರೀದಿಸಿದೆ. ಹೀಗಾಗಿ ಶೇ. 39ರಷ್ಟಿದ್ದ ಹೆನ್​ಕೆನ್ ಪಾಲುದಾರಿಕೆ ಶೇ. 42.1ಕ್ಕೆ ಏರಿಕೆಯಾಗಿದೆ.

ವಿಜಯ್ ಮಲ್ಯ ಹಾಗೂ ಹೆನ್​ಕೆನ್ ಕಂಪನಿ ನಡುವೆ 2008ರಲ್ಲಿ ನಡೆದಿದ್ದ ಸ್ಕಾಟಿಷ್ ಅಂಡ್ ನ್ಯೂಕ್ಯಸಲ್ ಜೊತೆಗಿನ ಒಪ್ಪಂದ ಅಂತ್ಯಗೊಂಡಿದೆ. ಒಪ್ಪಂದದಂತೆ ಯುಬಿಯಲ್ಲಿ ಮಲ್ಯ ಹಾಗೂ ಹೆನ್​ಕೆನ್ ಸಮಾನ ಪಾಲುದಾರರಾಗಿದ್ದರು. ಇಬ್ಬರ ಬಳಿಯೂ ಕಂಪನಿಯ ತಲಾ ಶೇ. 37.5ರಷ್ಟು ಷೇರುಗಳಿದ್ದವು. ಯುಬಿ ಆಡಳಿತ ಮಂಡಳಿಯಲ್ಲೂ ಇಬ್ಬರಿಗೆ ಸಮಾನ ಸ್ಥಾನವಿತ್ತು. ಆದರೆ, ಕಿಂಗ್ ಫಿಷರ್ ವಿಮಾನವನ್ನು ಮೇಲಕ್ಕೆತ್ತಲು ಮಲ್ಯ ಅವರು ಯುಬಿ ಷೇರುಗಳನ್ನು ಮಾರಾಟ ಮಾಡತೊಡಗಿದರು.

ಯುನೈಟೆಡ್ ಸ್ಪಿರಿಟ್ಸ್​ನ ಸಂಪೂರ್ಣ ಹಿಡಿತ ಡಿಯಾಜಿಯೋ ಕಂಪನಿ ಪಾಲಾಗಿದೆ. ಯುನೈಟೆಡ್ ಸ್ಪಿರಿಟ್ಸ್​ನ ಅಧ್ಯಕ್ಷ ಹುದ್ದೆಯಿಂದ ಕೆಳಕ್ಕಿಳಿಯುವಂತೆ ಮಲ್ಯರನ್ನು ಕೇಳಿಕೊಳ್ಳಲಾಗಿದೆ. ಭಾರತೀಯ ಬಿಯರ್ ಮಾರುಕಟ್ಟೆಯಲ್ಲಿ ಶೇ. 50ರಷ್ಟು ಪಾಲು ಹೊಂದಿರುವ ಕಿಂಗ್ ಫಿಷರ್ ಸ್ಥಾನಕ್ಕೆ ಹಾಲೆಂಡಿನ ಹೆನ್ ಕೆನ್ ತನ್ನ ಬಿಯರ್ ಉತ್ಪನ್ನಗಳನ್ನು ಪ್ರಚಾರ ಮಾಡುವ ದಿನಗಳು ದೂರವಿಲ್ಲ. (ಪಿಟಿಐ)

English summary
Dutch beer major Heineken today ruled out changes in the ownership structure of United Breweries Ltd and its partnership with Vijay Mallya, despite its stake in the Indian firm going up to 42.1 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X