ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರುಕಟ್ಟೆಯಲ್ಲಿ 10 ಸಾವಿರ ಅಂಶಗಳ ಗಡಿ ದಾಟಿದ ನಿಫ್ಟಿ

ಸೋಮವಾರದ ಷೇರು ವ್ಯವಹಾರದಲ್ಲಿ ಭಾರತೀಯ ಉದ್ದಿಮೆಗಳ ಪ್ರತಿನಿಧಿಯಾದ ನಿಫ್ಟಿ 50, ಇದೇ ಮೊದಲ ಬಾರಿಗೆ 10 ಸಾವಿರ ಅಂಶಗಳ ಗಡಿಯನ್ನು ದಾಟಿದೆ. ಝೀ ಎಂಟರ್ ಟೈನ್ ಮೆಂಟ್, ಎಚ್ ಡಿಎಫ್ ಸಿ ಮುಂತಾದ ಸಂಸ್ಥೆಗಳು ಹೂಡಿಕೆದಾರರನ್ನು ಹೆಚ್ಚಾಗಿ ಆಕರ್ಷಿಸಿದ್

|
Google Oneindia Kannada News

ಮುಂಬೈ, ಜುಲೈ 25: ದೇಶೀಯ ಮಾರುಕಟ್ಟೆಯ ಷೇರುಗಳಾದ ನಿಫ್ಟಿ 50ಯು ಸೋಮವಾರ ಉತ್ತಮ ಏರಿಕೆ ಕಂಡಿದ್ದು ಇದೇ ಮೊದಲ ಬಾರಿಗೆ ಐದು ಅಂಕಿಗಳ ಗಡಿ ದಾಟಿದೆ. ಇದು ಷೇರು ವಹಿವಾಟುದಾರರ ಮೊಗದಲ್ಲಿ ಮಂದಹಾಸ ತಂದಿದೆ.

30 ನಿಮಿಷದಲ್ಲಿ 7 ಸಾವಿರ ಕೋಟಿ ಕಳೆದುಕೊಂಡ ಎಲ್ ಐಸಿǃ30 ನಿಮಿಷದಲ್ಲಿ 7 ಸಾವಿರ ಕೋಟಿ ಕಳೆದುಕೊಂಡ ಎಲ್ ಐಸಿǃ

ಸೋಮವಾರದ ವ್ಯವಹಾರದಲ್ಲಿ ಎಸಿಸಿ, ಅಂಬುಜಾ ಸಿಮೆಂಟ್ಸ್, ಎಚ್ ಡಿಎಫ್ ಸಿ ಬ್ಯಾಂಕ್, ಭಾರ್ತಿ ಏರ್ ಟೆಲ್, ಐಸಿಐಸಿಐ ಬ್ಯಾಂಕ್, ಎಚ್ ಡಿಎಫ್ ಸಿ, ಝೀ ಎಂಟರ್ ಟೈನ್ ಮೆಂಟ್, ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್, ಹೀರೋಮೋಟೋ ಕಾರ್ಪ್ ಹಾಗೂ ವೇದಾಂತ ಕಂಪನಿಗಳ ಷೇರುಗಳು ಭಾರೀ ಬಂಡವಾಳ ಆಕರ್ಷಿಸಿದ ಹಿನ್ನೆಲೆಯಲ್ಲಿ ನಿಫ್ಟಿ 50ಯು ಭಾರೀ ಏರಿಕೆಯನ್ನು ದಾಖಲಿಸಿತು.

Nifty 50 hits 10000 for the first time ever

ಒಟ್ಟು 40 ಅಂಶಗಳಷ್ಟು ಏರಿಕೆ ಕಂಡ ನಿಫ್ಟಿ, ದಿನಾಂತ್ಯದ ಹೊತ್ತಿಗೆ 10 ಸಾವಿರ ಅಂಕಗಳ ಗಡಿ ದಾಟಿ, ಹೊಸ ದಾಖಲೆ ಮೆರೆಯಿತು. ನಿಫ್ಟಿ ಗ್ರೂಪ್ ನ 2ನೇ ಅತಿ ದೊಡ್ಡ ಸಂಸ್ಥೆಯಾದ ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್, ಮಿಕ್ಕೆಲ್ಲಾ ಸಂಸ್ಥೆಗಳಿಗಿಂತ ಹೆಚ್ಚು (ಶೇ. 25) ಏರಿಕೆ ಕಂಡಿತು.

ಭಾರತೀಯ ಕಂಪನಿಗಳ ಈ ಸಾಧನೆಯನ್ನು ಬೆರಗಾಗಿರುವ ವಿಶ್ವ ಸಂಸ್ಥೆಯ ಅಂಗ ಸಂಸ್ಥೆಯಾದ, ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್), 2018ರ ಹೊತ್ತಿಗೆ ಭಾರತವು ತನ್ನ ಆರ್ಥಿಕ ಪ್ರಗತಿಯಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಎಂದು ಅಂದಾಜಿಸಿದೆ.

English summary
The domestic markets hit record highs on Monday as the broader Nifty 50 hit the historical five-digit mark of 10,000 points in the early morning trade.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X