ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಇಂಡಿಯಾದಿಂದ ದಾಖಲೆ, ಒಂದೇ ತಿಂಗಳಲ್ಲಿ ಕೋಟಿ ಮಂದಿ ಪ್ರಯಾಣ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜೂನ್ 21: ಇಂಡಿಯನ್ ಏರ್ ಲೈನ್ಸ್ ಹೊಸ ದಾಖಲೆ ಬರೆದಿದೆ. ಇದು ತುಂಬ ಖುಷಿ ಹಾಗೂ ಹೆಮ್ಮೆ ತರುವ ಸಂಗತಿ ಅನ್ನೋದರಲ್ಲಿ ಅನುಮಾನವೇ ಇಲ್ಲ. ಅದೇನು ದಾಖಲೆ ಅಂತೀರಾ? ಇಂಡಿಯನ್ ಏರ್ ಲೈನ್ಸ್ ನ ದೇಶೀಯವಾಗಿ ಸಂಚರಿಸುವ ವಿಮಾನಗಳಲ್ಲಿ ಮೇ ತಿಂಗಳಲ್ಲಿ ಒಂದು ಕೋಟಿ ಮಂದಿ ಪ್ರಯಾಣಿಸಿದ್ದಾರೆ.

ವಿಮಾನದಲ್ಲಿ ಜನಿಸಿದ ಶಿಶುವಿಗೆ ಜೀವನ ಪರ್ಯಂತ ಫ್ರೀ ಟಿಕೆಟ್!ವಿಮಾನದಲ್ಲಿ ಜನಿಸಿದ ಶಿಶುವಿಗೆ ಜೀವನ ಪರ್ಯಂತ ಫ್ರೀ ಟಿಕೆಟ್!

ತಿಂಗಳ ಸಂಚಾರ ಮಾಹಿತಿಯನ್ನು ನಾಗರಿಕ ವಿಮಾನಯಾನದ ನಿರ್ದೇಶನಾಲಯವೇ ಈ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. 1.01 ಕೋಟಿ ಪ್ರಯಾಣಿಕರು ಮೇ ತಿಂಗಳಿನಲ್ಲಿ ಪ್ರಯಾಣ ಮಾಡಿದ್ದಾರೆ. 2016ರ ಮೇ ತಿಂಗಳಲ್ಲಿ 86.69 ಲಕ್ಷ ಮಂದಿ ಪ್ರಯಾಣಿಸಿದ್ದರು. ಆ ಮೂಲಕ ಶೇ 17.36ರಷ್ಟು ಹೆಚ್ಚಳ ದಾಖಲಾಗಿದೆ.

ಮೇ ತಿಂಗಳಲ್ಲಿ ವಿಮಾನ ಯಾನ ಮಾಡಿದವರ ಸಂಖ್ಯೆಯಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಒಂದೇ ತಿಂಗಳಲ್ಲಿ ಒಂದು ಕೋಟಿಗೂ ಹೆಚ್ಚು ಮಂದಿ ಪ್ರಯಾಣಿಸಿದ್ದಾರೆ ಎಂದು ವಿಮಾನ ಯಾನ ಖಾತೆಯ ರಾಜ್ಯ ಸಚಿವ ಜಯಂತ್ ಸಿನ್ಹಾ ಟ್ವೀಟ್ ಮಾಡಿದ್ದಾರೆ. ಈ ವರ್ಷದ ಜನವರಿಯಿಂದ ಮೇವರೆಗೆ 4.65 ಕೋಟಿ ಮಂದಿ ಪ್ರಯಾಣಿಸಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣ ಸ್ಮಾರ್ಟ್ ಆಗೋದು ಯಾವಾಗ?ಮಂಗಳೂರು ವಿಮಾನ ನಿಲ್ದಾಣ ಸ್ಮಾರ್ಟ್ ಆಗೋದು ಯಾವಾಗ?

ಕಳೆದ ವರ್ಷ ಇದೇ ಅವಧಿಯಲ್ಲಿ 3.96 ಕೋಟಿ ಮಂದಿ ಪ್ರಯಾಣಿಸಿದ್ದರು. ಆ ಮೂಲಕ ಶೇ 17.63ರಷ್ಟು ಹೆಚ್ಚಳ ದಾಖಲಿಸಿದಂತಾಗಿದೆ.

ಏಪ್ರಿಲ್ ನಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ

ಏಪ್ರಿಲ್ ನಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ

ಈ ವರ್ಷದ ಫೆಬ್ರವರಿ ಹಾಗೂ ಮಾರ್ಚ್ ನಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. ಆ ನಂತರ ಏಪ್ರಿಲ್ ನಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣಿಸಿಕೊಂಡಿತು. ಜನವರಿವರೆಗೆ ಸತತವಾಗಿ ಹದಿಮೂರು ತಿಂಗಳ ಕಾಲ ಶೇ ಇಪ್ಪತ್ತರಷ್ಟು ಹೆಚ್ಚಳ ದಾಖಲಾಗಿತ್ತು.

ಇಂಡಿಗೋ ಸಿಂಹಪಾಲು

ಇಂಡಿಗೋ ಸಿಂಹಪಾಲು

ಈ ವರ್ಷದ ಫೆಬ್ರವರಿಯಲ್ಲಿ ಶೇ ಹತ್ತರಷ್ಟು ಕುಸಿಯುವ ಮೂಲಕ 15.77ಕ್ಕೆ ತಲುಪಿತು. ಇನ್ನು ಮಾರ್ಚ್ ನಲ್ಲಿ ಮತ್ತಷ್ಟು ಕುಸಿತ ಕಂಡು 14.91ಕ್ಕೆ ತಲುಪಿತು. ಕಳೆದ ತಿಂಗಳ ವರದಿ ಆಧಾರದಲ್ಲಿ ಹೇಳಬೇಕು ಅಂದರೆ ವಿಮಾನಯಾನ ಮಾರ್ಕೆಟ್ ಪ್ರಮಾಣದಲ್ಲಿ 41.91 ಲಕ್ಷ ಪ್ರಯಾಣಿಕರ ಮೂಲಕ ಇಂಡಿಗೋ ಸಿಂಹಪಾಲು ಪಡೆದಿದೆ.

ಆ ನಂತರದ ಸ್ಥಾನಗಳಲ್ಲಿ

ಆ ನಂತರದ ಸ್ಥಾನಗಳಲ್ಲಿ

ಆ ನಂತರದ ಸ್ಥಾನದಲ್ಲಿ ಜೆಟ್ ಏರ್ ವೇಸ್ ಇದ್ದು, 15.51 ಪ್ರಯಾಣಿಕರು ಹಾಗೂ ಏರ್ ಇಂಡಿಯಾದು 13.23 ಲಕ್ಷ ಪ್ರಯಾಣಿಕರಿದ್ದಾರೆ. ಸ್ಪೈಸ್ ಜೆಟ್ 12.79 ಲಕ್ಷ, ಗೋ ಏರ್ 8.64 ಲಕ್ಷ, ವಿಸ್ತಾರ 3.34 ಲಕ್ಷ ಹಾಗೂ ಏರ್ ಏಷ್ಯಾ 3.32 ಲಕ್ಷದ ಮೂಲಕ ನಂತರದ ಸ್ಥಾನಗಳಲ್ಲಿವೆ.

ಮುಂದಿನ ಮಾರ್ಚ್ ಹೊತ್ತಿಗೆ ಮೂರನೇ ಸ್ಥಾನ

ಮುಂದಿನ ಮಾರ್ಚ್ ಹೊತ್ತಿಗೆ ಮೂರನೇ ಸ್ಥಾನ

ಸಿಡ್ನಿ ಮೂಲದ ವಿಮಾನಯಾನ ಥಿಂಕ್ ಟ್ಯಾಂಕ್ ಪ್ರಕಾರ ದೇಶೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಮೊದಲೆರಡು ಸ್ಥಾನದಲ್ಲಿ ಅಮೆರಿಕ ಹಾಗೂ ಚೀನಾ ಇದೆ. ದೇಶೀಯ ಅಂತರರಾಷ್ಟ್ರೀಯ ಎರಡೂ ಪ್ರಯಾಣಿಕರ ಸಂಖ್ಯೆಯಲ್ಲಿ ಮುಂದಿನ ಮಾರ್ಚ್ ಹೊತ್ತಿಗೆ ನಾಲ್ಕರಿಂದ ಮೂರನೇ ಸ್ಥಾನಕ್ಕೆ ಏರಲಿದೆ.

English summary
The Indian Airline has set a new record after it flew over 1 crore passengers in May. Data available suggests that this is a new record for the maximum number of passengers flown domestically in a month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X