ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಪ್ರಭಾವಿಗಳ ಪಟ್ಟಿಯಲ್ಲಿ ಮರ್ಕೆಲ್ ಮುಂದೆ, ಮೋದಿ ಹಿಂದೆ

By Mahesh
|
Google Oneindia Kannada News

ನ್ಯೂಯಾರ್ಕ್, ಅ. 06: ಬ್ಲೂಮ್‌ಬರ್ಗ್ ಮಾರ್ಕೆಟ್ಸ್ ಪ್ರಕಟಿಸಿರುವ ವಿಶ್ವದ ಟಾಪ್ 50 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು 13ನೇ ಸ್ಥಾನ ಪಡೆದುಕೊಂಡಿದ್ದಾರೆ. ಯುಎಸ್ ಫೆಡರಲ್ ರಿಸರ್ವ್‌ನ ಮುಖ್ಯಸ್ಥೆ ಜಾನೆಟ್ ಯೆಲೆನ್ ಮೊದಲ ಸ್ಥಾನದಲ್ಲಿದ್ದರೆ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಎರಡನೇ ಸ್ಥಾನದಲ್ಲಿದ್ದಾರೆ.

ಜಗತ್ತಿನ ಜನಪ್ರಿಯ ರಾಜಕಾರಣಿಗಳು, ಆರ್ಥಿಕ ತಜ್ಞರು, ಬ್ಯಾಂಕರ್‌ಗಳು, ತಂತ್ರಜ್ಞಾನ ಮುಖ್ಯಸ್ಥರು, ಉದ್ಯಮಿಗಳು, ಹೂಡಿಕೆದಾರರು ಹಾಗೂ ಹಣಕಾಸು ನಿರ್ವಾಹಕರನ್ನು ಶ್ರೇಣೀಕರಿಸುವ ವಾರ್ಷಿಕ ಪಟ್ಟಿಯನ್ನು ಬ್ಲೂಮ್ ಬರ್ಗ್ ಮಾರ್ಕೆಟ್ಸ್ ಪ್ರಕಟಿಸುತ್ತದೆ. ಇದು ಐದನೇ ವಾರ್ಷಿಕ ಪಟ್ಟಿಯಾಗಿದೆ. ಈ ಬಾರಿ ಪಟ್ಟಿಗೆ ಸೇರಿರುವವರ ಪೈಕಿ ಅರ್ಧದಷ್ಟು ಜನ ಹೊಸಬರಾಗಿರುವುದು ವಿಶೇಷ.

Narendra Modi in Bloomberg Markets 50 Most Influential list

ರಾಜಕಾರಣಿಗಳ ಪೈಕಿ ಮೋದಿಗಿಂತ ಉನ್ನತ ಸ್ಥಾನದಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಇದ್ದಾರೆ. ಆಪಲ್ ಸಿಇಒ ಟಿಮ್ ಕುಕ್ ಮೂರನೇ ಸ್ಥಾನದಲ್ಲಿದ್ದು, ಬ್ಲಾಕ್‌ರಾಕ್‌ನ ಸಹಸಂಸ್ಥಾಪಕ ಲ್ಯಾರಿ ಫಿಂಕ್ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಇತರ ಭಾರತೀಯರ ಪೈಕಿ ಮೋರ್ಗನ್ ಸ್ಟಾನ್ಲಿ ಇನ್‌ವೆಸ್ಟ್‌ಮೆಂಟ್ ಮ್ಯಾನೇಜ್‌ಮೆಂಟ್‌ನ ಮುಖ್ಯಸ್ಥ 41ರ ಹರೆಯದ ರುಚಿರ್ ಶರ್ಮಾ(50ನೇ ಸ್ಥಾನ) ಸೇರಿದ್ದಾರೆ.

English summary
Indian Prime Minister Narendra Modi ranked 13 on the ‘Bloomberg Markets Most Influential’ list. Angela Merkel - German Chancellor ranked higher than Modi. The list is headed by US Federal Reserve chairperson Janet Yellen, followed by Chinese president Xi Jinping and Apple CEO Tim Cook.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X