ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ನಾಡೆಲ್ಲ, ಫ್ಲಿಪ್ ಕಾರ್ಟ್ ಜತೆಗೆ ಮೈಕ್ರೋಸಾಫ್ಟ್ ಒಪ್ಪಂದ

ಡಿಜಿಟಲ್ ಇಂಡಿಯಾ ಎಂಬ ಭಾರತದ ಆಲೋಚನೆ ಜಗತ್ತಿನ ಶ್ರೇಷ್ಠ ಕಂಪೆನಿಗಳನ್ನು ಸೆಳೆಯುತ್ತಿದೆ, ಇದೀಗ ಮೈಕ್ರೋಸಾಫ್ಟ್ ಸಿಇಒ ಮೂರು ದಿನಗಳ ಪ್ರವಾಸಕ್ಕಾಗಿ (ಫೆಬ್ರವರಿ 20ರಿಂದ) ದೇಶಕ್ಕೆ ಬಂದಿದ್ದಾರೆ. ಅವರ ಉದ್ದೇಶ ತಿಳಿಯಲು ಈ ಲೇಖನ ಓದಿ

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಫೆಬ್ರವರಿ 20: ಮೈಕ್ರೋಸಾಫ್ಟ್ ಕಂಪೆನಿಯು ಫ್ಲಿಪ್ ಕಾರ್ಟ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಅಂದಹಾಗೆ ಭಾರತೀಯ ಮೂಲದ, ಮೈಕ್ರೋಸಾಫ್ಟ್ ಕಂಪೆನಿ ಸಿಇಒ ಸತ್ಯ ನಾಡೆಲ್ಲ ಸೋಮವಾರದಿಂದ (ಫೆಬ್ರವರಿ 20) ಮೂರು ದಿನ ಭಾರತದ ಪ್ರವಾಸದಲ್ಲಿದ್ದಾರೆ. ಅದರಲ್ಲೂ ಸೋಮವಾರ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಇದೇನು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮ ಅಂತೀರಾ, ಮುನ್ನೂರಕ್ಕೂ ಹೆಚ್ಚು ಸ್ಟಾರ್ಟ್ ಅಪ್ಸ್ ಕಂಪೆನಿಗಳಿಗೆ ಹೊಸ ಅಪ್ಲಿಕೇಷನ್ ಅಭಿವೃದ್ಧಿ ಪಡಿಸಲು ಮತ್ತು ಕ್ಲೌಡ್ ತಂತ್ರಜ್ಞಾನ ಬಳಕೆಗೆ ನೆರವಾಗುವ ಮೂಲಕ ಮೈಕ್ರೋಸಾಫ್ಟ್ ವ್ಯಾಪಾರ ಅಭಿವೃದ್ಧಿಗೆ ಕೂಡ ಪ್ರಯತ್ನಿಸಲಿದ್ದಾರೆ.[ಟಾಟಾ ಮೋಟರ್ಸ್, ಮೈಕ್ರೋಸಾಫ್ಟ್ ಸಮ್ಮಿಲನ: ನಾವು ತಿಳಿಯಬೇಕಾದ 5 ಅಂಶಗಳು]

Nadella announces strategic partnership with Flipkart

ಭಾರತದಲ್ಲಿ ಆಗುತ್ತಿರುವ ಡಿಜಿಟಲ್ ಬದಲಾವಣೆಗೆ ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಜತೆ ಸೇರಿ ಕೆಲಸ ಮಾಡಲಿದ್ದಾರೆ. ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಹಾಗೆ ನಂದನ್ ನಿಲೇಕಣಿ ಅವರ ಆಲೋಚನೆ ಬಗ್ಗೆ ಕೂಡ ಚರ್ಚೆಯಾಗಲಿದೆ.

ಅಪ್ಲಿಕೇಷನ್ ಆಧಾರಿತ ತರಬೇತಿಯನ್ನು ರೂಪಿಸಿ, ಭಾರತದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅದರಲ್ಲೂ ವಿಜ್ಞಾನ, ಗಣಿತ ಹಾಗೂ ಭಾಷಾ ಕಲಿಕೆಯಲ್ಲಿ ನೆರವಾಗುವ ಉದ್ದೇಶ ನಿಲೇಕಣಿ ಅವರಿಗಿದೆ. ಆರಂಭದಲ್ಲೇ ಕಂಪೆನಿಗಳಿಗೆ ತಂತ್ರಜ್ಞಾನದ ನೆರವು ನೀಡಿದರೆ ಮುಂದೆ ಹಲವು ವರ್ಷಗಳ ಕಾಲ ಮೈಕ್ರೋಸಾಫ್ಟ್ ಜತೆಗೆ ಅವರಿರುತ್ತಾರೆ ಎಂಬ ನಂಬಿಕೆಯಲ್ಲಿ ಈ ನಿರ್ಧಾರ ಮಾಡಲಾಗಿದೆ.[ಟ್ರಂಪ್ ವಲಸೆ ನೀತಿ ವಿರುದ್ಧ ಮೈಕ್ರೋಸಾಫ್ಟ್, ಗೂಗಲ್, ಆ್ಯಪಲ್ ದಾವೆ]

ಭಾರತದಲ್ಲಿ ಆಗುತ್ತಿರುವ ಡಿಜಿಟಲ್ ಕ್ರಾಂತಿಯು ಜಗತ್ತಿನ ಅತ್ಯುತ್ತಮ ಕಂಪೆನಿಗಳನ್ನು ಸೆಳೆಯುತ್ತಿದೆ. ಒಂದು-ಒಂದೂವರೆ ತಿಂಗಳ ಹಿಂದೆ ಗೂಗಲ್ ಕಂಪೆನಿ ಸಿಇಒ ಸುಂದರ್ ಪಿಚೈ ಬಂದಿದ್ದರು. ದೇಶದ ಸಣ್ಣ ವ್ಯಾಪಾರಿಗಳಿಗೆ ನೆರವಾಗುವ, ಡಿಜಿಟಲ್ ವ್ಯವಹಾರಕ್ಕೆ ಅನುಕೂಲವಾಗುವಂತೆ ತಂತ್ರಜ್ಞಾನ ಅಭಿವೃದ್ಧಿ ಮಾಡಿಕೊಡುವ ಬಗ್ಗೆ ಮಾತನಾಡಿದ್ದರು.

ಅಂದಹಾಗೆ, ಸತ್ಯ ನಾಡೆಲ್ಲ ತಮ್ಮ ಮೂರು ದಿನದ ಪ್ರವಾಸದಲ್ಲಿ ಮುಂಬೈನಲ್ಲಿ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದ್ದಾರೆ.

English summary
Satya Nadella, the Indian-born chief executive of Microsoft, will kick-start a three-day visit to India on Monday. Nadella announces strategic partnership with Flipkart
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X