ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್ 1ರಿಂದ ಇಳಿಮುಖವಾಗಲಿದೆ ಮೊಬೈಲ್ ಕರೆ ದರ

ಅಂತರ ಸಂಪರ್ಕ ಬಳಕೆ ಶುಲ್ಕವನ್ನು ಶೇ. 57ರಷ್ಟು ಇಳಿಸಿದ ಟ್ರಾಯ್. ಈ ನಿರ್ಧಾರದಿಂದ ಅ. 1ರಿಂದ ಮೊಬೈಲ್ ಕರೆಗಳ ದರ ಇಳಿಕೆ.

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 20: ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ ಮಾಡುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿರುವ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್), ವಿವಿಧ ಟೆಲಿಕಾಂ ಸಂಸ್ಥೆಗಳಿಗೆ ತಾನು ವಿಧಿಸುತ್ತಿದ್ದ 'ಅಂತರ ಸಂಪರ್ಕ ಬಳಕೆ ಶುಲ್ಕ'ವನ್ನು (ಇಂಟರ್ ಕನೆಕ್ಟ್ ಯೂಸೇಜ್ ಚಾರ್ಜಸ್- ಐಯುಸಿ) ಶೇ. 57ರಷ್ಟು ಇಳಿಸಿದೆ.

ಇದರಿಂದಾಗಿ, ಪ್ರತಿ ಕರೆಗೆ ಈಗ ಚಾಲ್ತಿಯಲ್ಲಿರುವ 14 ಪೈಸೆ ಐಯುಸಿ ದರ, 6 ಪೈಸೆಗೆ ಇಳಿಯಲಿದೆ. ಮುಂದಿನ ತಿಂಗಳ 1ನೇ ದಿನಾಂಕದಿಂದ (ಅ. 1) ಈ ಹೊಸ ದರ ಜಾರಿಗೆ ಬರಲಿದೆ. ಇದರಿಂದಾಗಿ, ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂದು ಹೇಳಲಾಗಿದೆ.

ಟ್ರಾಯ್ ನ ಈ ನಿರ್ಧಾರದಿಂದಾಗಿ, ವಿವಿಧ ಮೊಬೈಲ್ ಸೇವಾ ಕಂಪನಿಗಳ ದರಗಳೂ ಇಳಿಮುಖವಾಗಲಿದ್ದು, ಗ್ರಾಹಕರಿಗೆ ಇದರಿಂದ ಅನುಕೂಲವಾಗಲಿದೆ.

ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಟ್ರಾಯ್, ಐಯುಸಿ ದರದ ಇಳಿಕೆಯಿಂದಾಗಿ ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಹೆಚ್ಚು ಸ್ಪರ್ಧೆಯ ವಾತಾವರಣ ತರಲಿದೆ. ಗ್ರಾಹಕರಿಗೂ ಇದು ಅನುಕೂಲವಾಗಲಿದೆ ಎಂದು ಹೇಳಿದೆ.

ಶೂನ್ಯ ದರಕ್ಕೆ ಚಿಂತನೆ

ಶೂನ್ಯ ದರಕ್ಕೆ ಚಿಂತನೆ

ಅಂದಹಾಗೆ, ಟ್ರಾಯ್ ನ ನಿರ್ಧಾರ ಇಷ್ಟಕ್ಕೇ ನಿಲ್ಲುವುದಿಲ್ಲವಂತೆ, ಮುಂಬರುವ ದಿನಗಳಲ್ಲಿ ಐಯುಸಿ ದರವನ್ನು ಶೂನ್ಯಕ್ಕಿಳಿಸುವ ಪ್ರಸ್ತಾವನೆ ಟ್ರಾಯ್ ಮುಂದೆಯಂತೆ. 2022ರ ಜನವರಿ 1ರ ವೇಳೆಗೆ ಐಯುಸಿ ದರವನ್ನು ಶೂನ್ಯಕ್ಕಿಳಿಸಲು ಆಲೋಚಿಸಲಾಗಿದೆಯಂತೆ.

ಜಿಯೋಗೆ ವಾರ್ಷಿಕ 3000

ಜಿಯೋಗೆ ವಾರ್ಷಿಕ 3000

ಟ್ರಾಯ್ ನ ಈ ನಿರ್ಧಾರ, ರಿಲಯನ್ಸ್ ಸಂಸ್ಥೆಯ ಜಿಯೋ ಟೆಲಿಕಾಂ ಸಂಸ್ಥೆಗೆ ದೊಡ್ಡ ವರದಾನ ಎಂದೆನಿಸಿದೆ. ಇತ್ತೀಚೆಗೆ, ಭಾರತೀಯ ಟೆಲಿಕಾಂ ರಂಗಕ್ಕೆ ಕಾಲಿಟ್ಟ ಜಿಯೋ ಸಂಸ್ಥೆ, ತನ್ನ ಲೈಫ್ ಟೈಂ ವಾಯ್ಸ್ ಕಾಲ್ ಆಫರ್ ನೀಡಿದೆ. ಅಸಲಿಗೆ ಇದು ಜಿಯೋ ಸಂಸ್ಥೆಗೆ ಭಾರ ಎನಿಸುವ ನಿರ್ಧಾರವಾಗಿತ್ತು. ಇದೀಗ, ಟ್ರಾಯ್ ಐಯುಸಿ ದರ ಇಳಿಸಿರುವುದರಿಂದ ಜಿಯೋ ಸಂಸ್ಥೆಗೆ ವಾರ್ಷಿಕವಾಗಿ 3,800 ಕೋಟಿ ರು.ಗಳಷ್ಟು ಭಾರ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಟ್ರಾಯ್ ನ ಹೊಸ ನಿರ್ಧಾರದಿಂದ ಜಿಯೋ ಮತ್ತಷ್ಟು ಹೊಸ ಆಫರ್ ಬಿಡಬಹುದೆಂದು ಅಂದಾಜಿಸಲಾಗಿದೆ.

ಸಾವಿರಾರು ಕೋಟಿ ರು. ನಷ್ಟ?

ಸಾವಿರಾರು ಕೋಟಿ ರು. ನಷ್ಟ?

ಟ್ರಾಯ್ ನ ಈ ನಿರ್ಧಾರ ದೇಶದ ಇತರ ಮೂರು ದೊಡ್ಡ ಮೊಬೈಲ್ ಸೇವಾ ಸಂಸ್ಥೆಗಳಾದ ಏರ್ ಟೆಲ್, ವೊಡಾಫೋನ್ ಹಾಗೂ ಐಡಿಯಾ ಸಂಸ್ಥೆಗಳಿಗೆ ದೊಡ್ಡ ಹೊಡೆತ ಎಂದು ಹೇಳಲಾಗಿದೆ. ಈ ಸಂಸ್ಥೆಗಳು ಇತರ ಸಂಸ್ಥೆಗಳ ನೆಟ್ ವರ್ಕ್ ಗಳಿಂದ ಒಳಬರುವ ಕರೆಗಳಿಗೆ ವಿಧಿಸುತ್ತಿದ್ದ ಶುಲ್ಕವನ್ನು ಈಗ ಟ್ರಾಯ್ ನ ಆದೇಶದಂತೆ 14 ಪೈಸೆಯಿಂದ 6 ಪೈಸೆಗೆ ಇಳಿಕೆ ಮಾಡಲೇಬೇಕಿರುವುದರಿಂದ ಇವುಗಳ ಆದಾಯ ವಾರ್ಷಿಕವಾಗಿ ಸಾವಿರಾರು ಕೋಟಿ ರು.ಗಳಷ್ಟು ಕುಗ್ಗಲಿದೆ.

ಸ್ಪರ್ಧೆಯಂತೂ ಖಾತ್ರಿ

ಸ್ಪರ್ಧೆಯಂತೂ ಖಾತ್ರಿ

ಟ್ರಾಯ್ ನ ಈ ನಿರ್ಧಾರ ಏರ್ ಟೆಲ್, ವೊಡಾಫೋನ್, ಐಡಿಯಾ ಸಂಸ್ಥೆಗಳಿಗೆ ನೀಡುವ ಹೊಡೆತವನ್ನು ಅವು ಹೇಗೋ ಸಹಿಸಿಕೊಂಡಾವು. ಆದರೆ, ಇತರ ಸಣ್ಣಪುಟ್ಟ ಟೆಲಿಕಾಂ ಕಂಪನಿಗಳ ಕಥೆ ಶೋಚನೀಯವಾಗಲಿದೆ ಎಂದು ಟೆಲಿಕಾಂ ಕ್ಷೇತ್ರದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅದೇನೇ ಇರಲಿ, ಶೀಘ್ರದಲ್ಲೇ ಎಲ್ಲಾ ನೆಟ್ ವರ್ಕ್ ಗಳ ಕರೆಗಳ ದರಗಳು ಇಳಿಮುಖವಾಗಲಿದೆ ಎಂದು ಹೇಳಲಾಗಿದೆ.

English summary
The Telecom Regulatory Authority of India (Trai) has cut the interconnect usage charges (IUC, also known as terminating charges) by 57 per cent to 6 paise per minute effective October 1, from 14 paise currently. This benefits to customers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X