ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಎಸ್ ಇನ್ನೋವೇಟರ್ಸ್ ಪೋಗ್ರಾಂಗೆ ಕರ್ನಾಟಕದ ಶಾಲೆ ಆಯ್ಕೆ

By Mahesh
|
Google Oneindia Kannada News

ಬೆಂಗಳೂರು, ಫೆ.16: ಮೈಕ್ರೊಸಾಫ್ಟ್ ಇಂಡಿಯಾ ತನ್ನ ಕ್ಲಾಸ್ ಆಫ್ ಎಜ್ಯುಕೇಷನ್ ಇನ್ನೋವೇಟರ್ಸ್ 2015-16ರ ಕಾರ್ಯಕ್ರಮಕ್ಕೆ ಕರ್ನಾಟಕದಿಂದ 11 ಸಂಶೋಧನಾತ್ಮಕ ಶಿಕ್ಷಕರು ಮತ್ತು 5 ಶೋಕೇಸ್ ಶಾಲೆಗಳನ್ನು ಆಯ್ದುಕೊಂಡಿರುವುದಾಗಿ ಘೋಷಿಸಿದೆ.

ಕಾರ್ಯಕ್ರಮ ಕಲಿಕೆ ಹಂತದಲ್ಲಿ ಪ್ರತಿನಿತ್ಯ ತಂತ್ರಜ್ಞಾನ ಅಳವಡಿಸಿಕೊಂಡ ಶಿಕ್ಷಕರು ಮತ್ತು ಶಾಲೆಗಳನ್ನು ಗುರುತಿಸುತ್ತದೆ. ಸಂಕೀರ್ಣವಾದ ಆಯ್ಕೆ ಪ್ರಕ್ರಿಯೆ ಮೂಲಕ ಆಯ್ದ ಈ ಶಾಲೆಗಳು ಹಾಗೂ ಶಿಕ್ಷಕರು ಈಗ ಮೈಕ್ರೊಸಾಫ್ಟ್ ಜಾಗತಿಕ ಸಮುದಾಯದ ಭಾಗವಾಗಿದ್ದು 3,700 ಎಂಐಇ ಎಕ್ಸ್ ಪರ್ಟ್ ಗಳು ಮತ್ತು 400 ಶೋಕೇಸ್ ಶಾಲೆಗಳನ್ನು ಹೊಂದಿದೆ.

ಆಯ್ಕೆಯಾದ ಎಂಐಇ ತಜ್ಞರು ಮೈಕ್ರೊಸಾಫ್ಟ್ ನಿಂದ ವೃತ್ತಿಪರ ಮತ್ತು ಭವಿಷ್ಯ ಅಭಿವೃದ್ಧಿ ಅವಕಾಶಗಳು ಹಾಗೂ ಪತ್ರವನ್ನು ಪಡೆಯಲಿದ್ದಾರೆ. ಅವರು ವಿಶ್ವದ ಜನಪ್ರಿಯ ತಜ್ಞರು ಮತ್ತು ಪರಿಣತರ ಜೊತೆ ತಮ್ಮ ಅನುಭವ ಹಂಚಿಕೊಳ್ಳುವ, ಸಂಶೋಧನೆ ವಿನಿಮಯದ ಅವಕಾಶವನ್ನು ಮೈಕ್ರೊಸಾಫ್ಟ್ ಜಾಗತಿಕ ಶಿಕ್ಷಕ ಚಿಂತನೆ ವಿನಿಮಯ ಕಾರ್ಯಕ್ರಮದ ಮೂಲಕ ಪಡೆಯುತ್ತಾರೆ.

ಆಯ್ಕೆಯಾದ ಶೋಕೇಸ್ ಶಾಲೆಗಳು ಮೈಕ್ರೊಸಾಫ್ಟ್ ಶಾಲೆಗಳ ಜೊತೆ ಸಹಭಾಗಿತ್ವದ, ಚಟುವಟಿಕೆ ನಡೆಸುವ ಅವಕಾಶ ಪಡೆಯುತ್ತವೆ ಎಂದು ಮೈಕ್ರೊಸಾಫ್ಟ್ ಇಂಡಿಯಾ ಶಿಕ್ಷಣ ನಿರ್ದೇಶಕ ಪ್ರತೀಕ್ ಮೆಹ್ತಾ ಹೇಳಿದರು.

Microsoft Selects 11 Educators and Five Schools from Karnataka as Education Innovators 2015-2016

ತಂತ್ರಜ್ಞಾನ ನೀಡಲು ಆಯ್ದ ಶಿಕ್ಷಕರು ಅನನ್ಯವಾದ, ಪರಿಣಾಮಕಾರಿ ಯೋಜನೆಗಳನ್ನು ರೂಪಿಸಿ ಕಲಿಕೆ ನೀಡುತ್ತಿದ್ದಾರೆ. ಬೆಂಗಳೂರಿನ ಶ್ರೀ ಚೈತನ್ಯ ಟೆಕ್ನೊ ಶಾಲೆಯ ನಿತ್ಯ, ವಿದ್ಯಾರ್ಥಿಗಳಿಗೆ ವಿಭಿನ್ನ ಭಾಷೆಯಲ್ಲಿ ಕಲಿಸುವ ಯೋಜನೆ ರೂಪಿಸಿದ್ದಾರೆ. ಅದೇ ಶಾಲೆಯ ರಾಮಶಾಂತಿ ದೇಶದ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಯೋಜನೆ ಸೃಷ್ಟಿಸಿದ್ದಾರೆ. ತಸೀಮ ಬೇರೆ ಬೇರೆ ಪಕ್ಷಿಗಳ ಕುರಿತು ಮಾಹಿತಿ ನೀಡುವ ಯೋಜನೆಯೊಂದನ್ನು ರೂಪಿಸಿದ್ದಾರೆ.

ಆಯ್ಕೆಯಾದವರು: ಬಸವನಗುಡಿ, ಕೂಡ್ಲು, ರಾಮಮೂರ್ತಿ ನಗರ, ವಿದ್ಯಾರಣ್ಯ ಪುರ, ಮಾರತ್ ಹಳ್ಳಿಯಲ್ಲಿರುವ ಶ್ರೀ ಚೈತನ್ಯ ಶಾಲೆಯ ರಚನಾ, ಶೈನಿ, ನಿತ್ಯಾ, ಪಲ್ಲವಿ, ಲಕ್ಷ್ಮಿ, ಸುಚಿತ್ರಾ, ಮಮತಾ, ನಿಧಿ

ಶಿಕ್ಷಣದಲ್ಲಿ ತಂತ್ರಜ್ಞಾನ ನೀಡುವಿಕೆಯ ನಂಬಿಕೆಯಿಂದ ನಡೆಯುತ್ತಿರುವ ಕಾರ್ಯಕ್ರಮ ಭಾರತದ 20 ರಾಜ್ಯಗಳ 5 ಕೋಟಿ ಜನರನ್ನು ಕಳೆದ ಒಂದು ದಶಕದಲ್ಲಿ ತಲುಪಿದೆ.

ಮೈಕ್ರೊಸಾಫ್ಟ್ ಪಿಐಎಲ್ ಕುರಿತು: ಮೈಕ್ರೊಸಾಫ್ಟ್ ಪಿಐಎಲ್ ಬೆಳೆಯುವ ಯುವಕರು ಮತ್ತು ಮಕ್ಕಳಿಗೆ ಅತ್ಯುತ್ತಮವಾಗಿದ್ದನ್ನು ನೀಡುವ ಪರಿಕರ ಮತ್ತು ತಂತ್ರಜ್ಞಾನವನ್ನು ಶಿಕ್ಷಕರಿಗೆ ನೀಡುತ್ತದೆ. ಕಳೆದ 10 ವರ್ಷದಲ್ಲಿ 500 ದಶಲಕ್ಷ ಡಾಲರ್ ನ ಕಾರ್ಯಕ್ರಮ ಕಲಿಕೆ ಮತ್ತು ಬೋಧನೆ ಕೌಶಲ್ಯ ವೃದ್ಧಿ ಗುರಿ ಹೊಂದಿದೆ. 2003ರಿಂದ ಮೈಕ್ರೊಸಾಫ್ಟ್ ಬೋಧಕರೊಂದಿಗೆ ಪಾಲುದಾರಿಕೆ ಮಾಡಿಕೊಂಡಿದ್ದು, 80 ಲಕ್ಷ ಶಿಕ್ಷಕರನ್ನು ತಲುಪಿದೆ.

190 ದಶಲಕ್ಷ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದೆ. ಮೊದಲ 7 ವರ್ಷದಲ್ಲಿ 114 ರಾಷ್ಟ್ರಗಳಲ್ಲಿ ಈ ಸಾಧನೆ ಮಾಡಿದೆ. ಭಾರತದಲ್ಲಿ ಪ್ರಾಜೆಕ್ಟ್ ಶಿಕ್ಷ ಎಂದು ಗುರುತಿಸಿಕೊಂಡಿರುವ ಯೋಜನೆ 7,60,00ಕ್ಕೂ ಅಧಿಕ ಸರ್ಕಾರಿ ಶಾಲಾ ಶಿಕ್ಷಕರಿಗೆ ಐಟಿ ಕೌಶಲ್ಯ ತರಬೇತಿ ನೀಡಿದೆ. 38.2 ದಶಲಕ್ಷ ವಿದ್ಯಾರ್ಥಿಗಳಿಗೆ ನೆರವಾಗಿದೆ.

English summary
Microsoft Selects 11 Educators and Five Schools from Karnataka as Education Innovators 2015-2016. Selected among 168 Microsoft Innovative Educator (MIE) Experts and 45 Microsoft Showcase Schools across India. these schools and educators are now part of Microsoft's global community of 3,700 MIE Experts and 400 Showcase Schools.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X