ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಸ್ ಪೋರ್ಟ್ ಕಳೆದುಕೊಂಡ ಮಲ್ಯ ಮುಂದಿರುವ ಆಯ್ಕೆಗಳು?

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 25: ಮನಿ ಲಾಂಡ್ರಿಂಗ್ ಹಾಗೂ ಬ್ಯಾಂಕ್ ಸಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಕಾಸ್ ನೋಟಿಸ್ ಗೆ ಮಲ್ಯ ಅವರು ಸಮರ್ಪಕ ಉತ್ತರ ನೀಡದ ಕಾರಣ, ಅವರ ಪಾಸ್ ಪೋರ್ಟ್ ರದ್ದುಗೊಳಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಪ್ರಕಟಿಸಿದೆ.

ಆದರೆ, ವಿಜಯ್ ಮಲ್ಯ ಅವರು ಭಾರತಕ್ಕೆ ಹಿಂತಿರುಗದೆ ತಮ್ಮ ಮುಂದಿನ ನಡೆ ಇಡಬಹುದು. ಮಲ್ಯ ಅವರ ಮುಂದಿರುವ ಪ್ರಮುಖ ಆಯ್ಕೆಗಳ ವಿವರ ಮುಂದಿದೆ. [ಮಲ್ಯ ಒಡೆತನದಲ್ಲಿದ್ದ 6 ಕಂಪನಿಗಳ ಸ್ಥಿತಿ ಗತಿ ಏನಾಗಿದೆ?]

ಮನಿಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಯ ಅವರ ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳುವಂತೆ ವಿದೇಶಾಂಗ ಸಚಿವಾಲಯಕ್ಕೆ ಜಾರಿ ನಿರ್ದೇಶನಾಲಯ ಏಪ್ರಿಲ್ 15ರಂದು ಮನವಿ ಸಲ್ಲಿಸಿತ್ತು.[ಮಲ್ಯ ಅವರ ಪಾಸ್ ಪೋರ್ಟ್ ರದ್ದು : ವಿದೇಶಾಂಗ ಸಚಿವಾಲಯ]

ಈ ಹಿಂದೆ ಅನೇಕ ಬಾರಿ ರೆಡ್ ಕಾರ್ನರ್, ಜಾಮೀನು ರಹಿತ ವಾರೆಂಟ್, ನೋಟಿಸುಗಳು ಜಾರಿಯಾದರೂ ಮಲ್ಯ ಅವರ ಪಾಸ್ ಪೋರ್ಟ್ ಜಪ್ತಿ ಮಾಡಲು ಆಗಿರಲಿಲ್ಲ. ಸದ್ಯ ವಿದೇಶದಲ್ಲಿರುವ ಮಲ್ಯ ಅವರ ಸಂಪರ್ಕ ಕೂಡಾ ಸಾಧ್ಯವಾಗಿರಲಿಲ್ಲ.

ಪಾಸ್ ಪೋರ್ಟ್ ಕಾಯ್ದೆ 1967ರ ಸೆಕ್ಷನ್ 10 (3) ಸಿ ಹಾಗೂ ಎಚ್ ಅನ್ವಯ ಪ್ರಯಾಣಿಕರೊಬ್ಬರ ಮೇಲೆ ಕ್ರಿಮಿನಲ್ ಮೊಕದ್ದಮೆ ನಡೆಯುತ್ತಿದ್ದು, ಅವರ ವಿರುದ್ಧ ಅರೆಸ್ಟ್ ವಾರೆಂಟ್ ಗಾಗಿ ಅರ್ಜಿ ಸಲ್ಲಿಕೆಯಾಗಿದ್ದರೆ (ಈ ಪ್ರಕರಣದಲ್ಲಿ ಬಾಂಬೆ ಹೈಕೋರ್ಟಿನಿಂದ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ), ಅವರ ಪಾಸ್ ಪೋರ್ಟ್ ಹಾಗೂ ಪ್ರಯಾಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಏರ್ ಪೋರ್ಟ್ ನ ಅಧಿಕಾರಿಗಳು ವಶಪಡಿಸಿಕೊಳ್ಳಬಹುದು.

ಮಲ್ಯ ಅವರೇನು ಮಾಡ್ತಾರೋ ಗೊತ್ತಿಲ್ಲ., ಸದ್ಯಕ್ಕೆ ಆವರಿಗಿರುವ ಆಯ್ಕೆಗಳಲ್ಲಿ ಒಂದನ್ನು ನೀವು ಸೂಚಿಸಿ ಮತ ಹಾಕಲು ಕ್ಲಿಕ್ ಮಾಡಿ

ವಿಜಯ್ ಮಲ್ಯ ಅವರ ಮುಂದಿರುವ ಆಯ್ಕೆಗಳ ವಿವರ ಮುಂದಿದೆ...

ಕಾನೂನು ಹೋರಾಟ ಮುಂದುವರೆಸಬಹುದು

ಕಾನೂನು ಹೋರಾಟ ಮುಂದುವರೆಸಬಹುದು

ಕಾನೂನು ಹೋರಾಟ ಮುಂದುವರೆಸಿ, ವಿದೇಶಾಂಗ ಸಚಿವಾಲಯದ ನಿರ್ಣಯವನ್ನು ಪ್ರಶ್ನಿಸಬಹುದು. ತನಿಖಾ ಸಂಸ್ಥೆಗಳ ದೂರಿನ ಮೇಲೆ ಮೇಲ್ಮನವಿ ಸಲ್ಲಿಸಬಹುದು. ಅನೇಕ ದೂರುಗಳಿಗೆ ಸಾಕ್ಷಿಗಳಿಲ್ಲ ಎಂದು ಸಾಬೀತು ಪಡಿಸಬಹುದು.

ಕಾನೂನಿನ ಕರೆಗೆ ತಲೆಬಾಗಬಹುದು

ಕಾನೂನಿನ ಕರೆಗೆ ತಲೆಬಾಗಬಹುದು

ಕಾನೂನಿನ ಕರೆಗೆ ತಲೆಬಾಗಿ ಭಾರತಕ್ಕೆ ವಾಪಸ್ ಬರಬಹುದು. ಸುಪ್ರೀಂಕೋರ್ಟ್ ಮುಂದೆ ವಿಚಾರಣೆಗೆ ಹಾಜರಾಗಬಹುದು. ಬ್ಯಾಂಕುಗಳ ಜತೆ ಒಪ್ಪಂದ ಮಾಡಿಕೊಂಡು, ಸಾಲ ವಾಪಸ್ ಮಾಡುವ ವಿಧಾನವನ್ನು ವಿವರಿಸಬಹುದು.

ವಿದೇಶದಲ್ಲಿ ಪೌರತ್ವಕ್ಕೆ ಅರ್ಜಿ ಹಾಕಬಹುದು

ವಿದೇಶದಲ್ಲಿ ಪೌರತ್ವಕ್ಕೆ ಅರ್ಜಿ ಹಾಕಬಹುದು

ಐಪಿಎಲ್ ಮಾಜಿ ಚೇರ್ಮನ್ ಲಲಿತ್ ಮೋದಿ ಮಾದರಿಯಲ್ಲಿ ವಿದೇಶದಲ್ಲಿ ಪೌರತ್ವಕ್ಕೆ ಅರ್ಜಿ ಹಾಕಬಹುದು. ಹೆಚ್ಚು ಪ್ರಚಲಿತವಿಲ್ಲದ ಮಾಲ್ಟ ಮುಂತಾದ ದೇಶಗಳಲ್ಲಿ ಪೌರತ್ವ ಪಡೆಬಹುದು. ಇಂಥ ದೇಶಗಳೊಡನೆ ಭಾರತವು ಪಲಾಯನವಾದಿಗಳನ್ನು ಕರೆತರುವ ಒಪ್ಪಂದ ಮಾಡಿಕೊಳ್ಳದ ಕಾರಣ ಮಲ್ಯಗೆ ಇದು ಉತ್ತಮ ಅವಕಾಶ.

ಯುಕೆಯಲ್ಲೇ ವಿಹಾರ ಮುಂದುವರೆಸಬಹುದು

ಯುಕೆಯಲ್ಲೇ ವಿಹಾರ ಮುಂದುವರೆಸಬಹುದು

2011ರಲ್ಲೇ ಲಲಿತ್ ಮೋದಿ ಅವರ ಪಾಸ್ ಪೋರ್ಟ್ ರದ್ದಾಗಿದೆ. ಭಾರತಕ್ಕೆ ಬಂದರೆ ವಿಮಾನ ನಿಲ್ದಾಣದಲ್ಲೇ ಅರೆಸ್ಟ್ ಆಗುತ್ತಾರೆ. ಆದರೆ, ಯುಕೆಯಲ್ಲೇ ನೆಲೆ ಕಂಡುಕೊಂಡಿರುವ ಮೋದಿ ಅವರು ಬ್ರಿಟಿಷರ ಕಾನೂನಿನ ಪ್ರಕಾರ ಉದ್ಯಮಿಯಾಗಿ ಭದ್ರತೆ ಹೊಂದಿದ್ದಾರೆ. ಗಡಿಪಾರಾದ ವ್ಯಕ್ತಿಯಾದರೂ 200,000 ಪೌಂಡ್ ಗಳಿಗೂ ಅಧಿಕ ಮೊತ್ತದ ಬಂಡವಾಳ ಹೂಡಿಕೆ ಮಾಡಿದರೆ ಯುಕೆಯಲ್ಲಿ ಭದ್ರ ನೆಲೆ ಸಿಗಲಿದೆ.

English summary
The Ministry of External Affairs on Sunday announced that it has revoked the passport of Vijay Mallya, the wanted boss of Kingfisher Airlines,But Mallya has many options available with him including fighting it out legally and applying for 'Indefinite leave to remain'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X