ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗ್ಳೂರಲ್ಲಿ ಜರ್ಮನಿಯ 'ಮ್ಯಾನ್' ಇಂಧನ ಘಟಕ

By Mahesh
|
Google Oneindia Kannada News

ಬೆಂಗಳೂರು.ಜೂ.29: ಮ್ಯಾನ್ ಎಸ್‍ಇ (ವೋಕ್ಸ್‍ವ್ಯಾಗನ್ ಎಜಿ ಭಾಗವಾಗಿರುವ) ಯ ಸಂಪೂರ್ಣ ಅಂಗಸಂಸ್ಥೆ ಮ್ಯಾನ್ ಡೀಸೆಲ್ &ಟರ್ಬೊ ಎಸ್‍ಇ, ಭಾರತದ ಎಂಜಿನಿಯರಿಂಗ್, ಉತ್ಪಾದನೆ ಮತ್ತು ಸ್ಟೀಮ್ ಟರ್ಬೈನ್ ಸೇವಾ ಸಂಸ್ಥೆ ಮ್ಯಾಕ್ಸ್‍ವ್ಯಾಟ್ ಪ್ರೈ.ಲಿ.ನ ಶೇ.100ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಂಡಿದೆ.

ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಮ್ಯಾಕ್ಸ್‍ವ್ಯಾಟ್, ಇಂಜಿನಿಯರಿಂಗ್, ಉತ್ಪಾದನೆ, ಮಾರಾಟ ಮತ್ತು ಸೇವಾ ವಿಭಾಗದಲ್ಲಿ 150ಕ್ಕೂ ಹೆಚ್ಚು ಸಿಬ್ಬಂದಿ ಹೊಂದಿದೆ. 3 ಡಿಜಿಟ್ ಸಂಖ್ಯೆಯ ಸ್ಟೀಮ್ ಟರ್ಬೈನ್ ಗಳನ್ನು ಇನ್‍ಸ್ಟಾಲ್ ಮಾಡಿದ್ದು ವಿಶ್ವದಾದ್ಯಂತ ಸೇವೆ ಒದಗಿಸುತ್ತಿದೆ. 2003ರಲ್ಲಿ ಸಂಸ್ಥೆ ಆರಂಭಗೊಂಡಿತ್ತು.

ಮ್ಯಾಕ್ಸ್‍ವ್ಯಾಟ್ ಸಂಸ್ಥೆ ಮ್ಯಾನ್ ಡೀಸೆಲ್ ಸುಪರ್ದಿಗೆ ಬರಲಿದ್ದು ಭಾರತದಲ್ಲಿ 650ಕ್ಕೂ ಹೆಚ್ಚು ಸಿಬ್ಬಂದಿ ಹೊಂದಲಿದೆ. ಮ್ಯಾಕ್ಸ್‍ವ್ಯಾಟ್ ನ ಬೆಂಗಳೂರಿನ ಹಿಂದಿನ ಕಚೇರಿ ಮ್ಯಾನ್ ಡೀಸೆಲ್ ನ ಮೊದಲ ಉತ್ಪಾದನೆ ತಾಣವಾಗಲಿದೆ.

MAN Diesel & Turbo acquires MaxWatt Turbines

ಮ್ಯಾನ್ ಡೀಸೆಲ್ ಭಾರತದಲ್ಲಿ ಈಗಾಗಲೆ ಸಾಕಷ್ಟು ಟರ್ಬೊ ಯಂತ್ರಗಳನ್ನು ಅಳವಡಿಸಿದೆ. ಟರ್ಬೊ ಮೆಷಿನ್‍ಗಾಗಿ ವಡೋದರಾದಲ್ಲಿ(ಗುಜರಾತ್) ಮಳಿಗೆ ಹೊಂದಿದೆ. ಮಹಾರಾಷ್ಟ್ರದ ಔರಂಗಾಬಾದಿನಲ್ಲಿ ಬೃಹತ್ ಡೀಸೆಲ್ ಎಂಜಿನ್ ಉತ್ಪಾದನೆ ಕೇಂದ್ರ ಹೊಂದಿದೆ. ಸಾಕಷ್ಟು ಮಾರಾಟ ಮಳಿಗೆ ಹೊಂದಿದೆ.

ಮ್ಯಾಕ್ಸ್ ವ್ಯಾಟ್ ಖರೀದಿಯ ನಂತರ ಟರ್ಬೋ ವಹಿವಾಟು ಎಂಡಿಟಿಯೊಂದಿಗೆ ವಿಲೀನವಾಗಲಿದ್ದು ಮ್ಯಾನ್ ಟರ್ಬೊಮೆಷಿನರಿ ಇಂಡಿಯಾ ಪ್ರೈ.ಲೀ ಎಂಬ ಹೊಸ ಸಂಸ್ಥೆಯೊಂದಿಗೆ ವಹಿವಾಟುಗಳು ನಡೆಯಲಿವೆ.

'ಭಾರತ ಮತ್ತು ಏಷ್ಯಾದ ಪವರ್ ಉತ್ಪಾದನೆ ವಹಿವಾಟಿನಲ್ಲಿ ಮ್ಯಾಕ್ಸ್‍ವ್ಯಾಟ್ ಅತ್ಯಂತ ಅಭಿವೃದ್ಧಿಗೊಂಡ ಸಂಸ್ಥೆ. ಅದರ ಸ್ವಾಧೀನದೊಂದಿಗೆ ನಾವು ನಮ್ಮ ವ್ಯಾಪ್ತಿ ವಿಸ್ತರಿಸುತ್ತೇವೆ ಮತ್ತು ನಮ್ಮ ಉತ್ಕೃಷ್ಟ ಉತ್ಪನ್ನ ಸರಣಿಗೆ ಸ್ಟೀಮ್ ಟರ್ಬೈನ್ ಸೇರಿಸುತ್ತೇವೆ.

ಇದೇ ಸಮಯದಲ್ಲಿ ನಾವು ಹೊಸ ಗ್ರಾಹಕ ಕಂಪನಿಯನ್ನು ಮತ್ತು ಮಾರುಕಟ್ಟೆ ವಲಯವನ್ನು ಗಳಿಸಿದ್ದೇವೆ. ಮ್ಯಾನ್ ಡೀಸೆಲ್ & ಟರ್ಬೊ ಸದಾ ಎಂ&ಎ ಯೋಜನೆಗಳನ್ನು ಬೆನ್ನತ್ತಿತ್ತು. ಅವರು ಮ್ಯಾಕ್ಸ್‍ವ್ಯಾಟ್ ನೊಂದಿಗೂ ಮುಂದುವರಿಯುತ್ತಾರೆ ಎಂದರು ಮ್ಯಾನ್ ಡೀಸೆಲ್ &ಟರ್ಬೊ ಎಸ್‍ಇ, ಸಿಇಒ ಮತ್ತು ಮುಖ್ಯ ಮಾರಾಟ ಅಧಿಕಾರಿ ಯುವೆ ಲೌಬರ್.

ಮ್ಯಾಕ್ಸ್ ವ್ಯಾಟ್ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ.ವೆಂಕಟೇಶ್ ಪ್ರತಿಕ್ರಿಯಿಸಿ, ಮ್ಯಾನ್ ಡೀಸೆಲ್ & ಟರ್ಬೊ ಜಾಗತಿಕ ಪ್ರಾಥಮಿಕ ಬ್ರ್ಯಾಂಡ್ ಮತ್ತು ಪವರ್ ಉತ್ಪಾದನೆ ಕ್ಷೇತ್ರದಲ್ಲಿ ಮುಂಚೂಣಿ ಕಂಪನಿ. ವಿಶ್ವದಾದ್ಯಂತದ ಮ್ಯಾಕ್ಸ್‍ವ್ಯಾಟ್ ಗ್ರಾಹಕರು ವಿಸ್ತೃತ ಉತ್ಪನ್ನ ಸರಣಿಯಿಂದ, ಮಾರಾಟ ಮತ್ತು ಸೇವಾ ಜಾಲದಿಂದ ಲಾಭ ಪಡೆಯಬಹುದು ಎಂದರು.

English summary
MAN Diesel & Turbo SE, a wholly owned subsidiary of MAN SE (part of Volkswagen AG) today said it has acquired 100 per cent shares of engineering firm MaxWatt Turbines Pvt Ltd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X