ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ನಾಡ್ ಫ್ರೆಶ್ -ಮನೆ ಮನೆಗೆ ಮಲೆನಾಡು ಉತ್ಪನ್ನ

ಕಳೆದ ಐದು ವರ್ಷಗಳಿಂದ ಚಿಕ್ಕಮಗಳೂರಿನಲ್ಲಿ ಕೃಷಿ ಉತ್ಪನ್ನಗಳ ಮಾರಾಟ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಮಲ್ನಾಡ್ ಆಗ್ರೋ ಇಂಡಸ್ಟ್ರೀಸ್ ಸಂಸ್ಥೆ ಈ ಹೊಸ ಆನ್‌ಲೈನ್ ಮಾರುಕಟ್ಟೆ ತಾಣ ಮಲ್ನಾಡ್ ಫ್ರೆಶ್.ಕಾಂ ಹೊರ ತಂದಿದೆ.

By Mahesh
|
Google Oneindia Kannada News

ಮಲೆನಾಡಿನ ರೈತರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ರೂಪುಗೊಂಡ ವೇದಿಕೆಯೇ Malnaadfresh.com ಕಳೆದ ಐದು ವರ್ಷಗಳಿಂದ ಚಿಕ್ಕಮಗಳೂರಿನಲ್ಲಿ ಕೃಷಿ ಉತ್ಪನ್ನಗಳ ಮಾರಾಟ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಮಲ್ನಾಡ್ ಆಗ್ರೋ ಇಂಡಸ್ಟ್ರೀಸ್ ಸಂಸ್ಥೆ ಈ ಹೊಸ ಆನ್‌ಲೈನ್ ಮಾರುಕಟ್ಟೆ ತಾಣಕ್ಕೆ ಬಂಡವಾಳ ಹೂಡಿಕೆ ಮಾಡಿದೆ.

ಗ್ರಾಮೀಣ ಪ್ರದೇಶಗಳಲ್ಲಿನ ರೈತರ ದಿನನಿತ್ಯದ ಸಂಕ?ಗಳನ್ನು ಕಳೆದ ಐದು ವರ್ಷಗಳ ಅವಧಿಯಲ್ಲಿ ಅಧ್ಯಯನ ನಡೆಸಿದ ಈ ಸಂಸ್ಥೆ ಅಂತಿಮವಾಗಿ ರೈತರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಕಾರ್ಯ ಯೋಜನೆ ರೂಪಿಸಿತು.

ಈ ನಿಟ್ಟಿನಲ್ಲಿ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟ, ಕೊಡಗು, ಮೈಸೂರು, ಸಕಲೇಶಪುರ, ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಕೊಪ್ಪ, ತೀರ್ಥಹಳ್ಳಿ, ಸಾಗರ, ಶಿರಸಿ, ಕಾರವಾರದವರೆಗೆ ಸಂಚರಿಸಿ, ರೈತರು, ಮಹಿಳಾ ಸ್ವ-ಸಹಾಯ ಸಂಘಗಳ ಕಾರ್ಯಕರ್ತರು ಹಾಗೂ ರೈತ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ (ಎನ್.ಜಿ.ಒ) ಪದಾಧಿಕಾರಿಗಳನ್ನು ಭೇಟಿ ಮಾಡಲಾಯಿತು.

ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೂಲಂಕುಷವಾಗಿ ಚರ್ಚೆ ನಡೆಸಿ ಮಾಹಿತಿ ಕಲೆ ಹಾಕಲಾಯಿತು. ಈ ಅಧ್ಯಯನದ ಸಂದರ್ಭದಲ್ಲಿ ಕಂಡು ಬಂದ ಪ್ರಮುಖ ಅಂಶ ಎಂದರೆ ರೈತರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು.

ಆರ್ಥಿಕವಾಗಿ ಸದೃಢವಾಗಿರುವ ಬಂಡವಾಳಶಾಹಿಗಳು ಹಾಗೂ ಮಧ್ಯವರ್ತಿಗಳು ರೈತರ ಉತ್ಪನ್ನಗಳನ್ನು ಅತೀ ಕಡಿಮೆ ಬೆಲೆಗೆ ಖರೀದಿಸಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವ ಅಂಶ ಗಮನಕ್ಕೆ ಬಂತು. ಇಂತಹ ಸನ್ನಿವೇಶದಲ್ಲಿಯೇ ಈ ರೈತರ ನೆರವಿಗೆ ಧಾವಿಸಲು ಮುಂದಾದ ಮಲ್ನಾಡ್ ಆಗ್ರೋ ಇಂಡಸ್ಟ್ರೀಸ್ ಸಂಸ್ಥೆ malnaadfresh.com ಎಂಬ ಆನ್‌ಲೈನ್ ಮಾರಾಟ ತಾಣ ಆರಂಭಿಸಲು ನಿರ್ಧರಿಸಿತು.

ರೈತರಿಗೆ ಗರಿಷ್ಠ ಬೆಲೆ

ರೈತರಿಗೆ ಗರಿಷ್ಠ ಬೆಲೆ

ಮಲೆನಾಡಿನಲ್ಲಿ ಸಿಗುವ ವಿಶೇಷ ಆಹಾರ ಉತ್ಪನ್ನಗಳನ್ನು ರೈತರು, ಮಹಿಳಾ ಸ್ವ ಸಹಾಯ ಸಂಘಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಸಂಸ್ಕರಿಸಿ, ಪ್ಯಾಕಿಂಗ್ ಮಾಡಿಸಿ ರೈತರಿಗೆ ಗರಿಷ್ಠ ಬೆಲೆ ಒದಗಿಸಿ ಕೊಡಲು ನಮ್ಮ ಸಂಸ್ಥೆ ಸಜ್ಜುಗೊಂಡಿದೆ. ಈ ಪದಾರ್ಥಗಳ ಗುಣಮಟ್ಟ ಕಾಪಾಡಿಕೊಳ್ಳಲು ವಿವಿಧ ಹಂತಗಳಲ್ಲಿ ಪರಿಶೀಲನೆಗಾಗಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ.

ನಮ್ಮ ಸಂಸ್ಥೆಯಲ್ಲಿ ಮಾರಾಟವಾಗುವ ಯಾವುದೇ ಆಹಾರ ಪದಾರ್ಥಗಳಿಗೆ ಕೃತಕ ಬಣ್ಣ ಮಿಶ್ರಣಗೊಳಿಸುವುದಿಲ್ಲ. ರುಚಿ ಹೆಚ್ಚಿಸಲು ಯಾವುದೇ ರಾಸಾಯನಿಕ ಬಳಸುವುದಿಲ್ಲ. ಪ್ರಕೃತಿಯಲ್ಲಿ ಸಹಜವಾಗಿ ಲಭ್ಯವಾಗುವ ಮಾದರಿಯಲ್ಲಿಯೇ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ.

ಕಾಡುವಾಸಿಗಳಿಗೆ ರೈತರಿಗೆ ನೆರವು

ಕಾಡುವಾಸಿಗಳಿಗೆ ರೈತರಿಗೆ ನೆರವು

ಮೂಡಿಗೆರೆಯ ಗ್ರಾಮೀಣ ಭಾಗದ ಮಹಿಳೆಯರು ನಮಗಾಗಿ ಉಪ್ಪಿನಕಾಯಿ ಮತ್ತು ತೊಕ್ಕುಗಳನ್ನು ತಯಾರಿಸಿ ಕೊಡಲಿದ್ದಾರೆ. ಬಿಳಿಗಿರಿರಂಗನ ಬೆಟ್ಟದ ಸೋಲಿಗರು, ಶಿರಸಿ, ದಾಂಡೇಲಿ ಸುತ್ತ ಮುತ್ತಲಿನ ಕುಣುಬಿ ಜನಾಂಗದವರು, ಕೊಪ್ಪ, ಶೃಂಗೇರಿ, ಕುದುರೆಮುಖ ಮೊದಲಾದ ಕಡೆಗಳಲ್ಲಿ ಅರಣ್ಯಗಳಲ್ಲಿ ವಾಸಿಸುವ ಮಲೆಕುಡಿಯರು ನಮಗಾಗಿ ಜೇನುತುಪ್ಪ, ವಾಟೆಹುಳಿ, ಉಪ್ಪಾಗೆ, ಸೀಗೆಕಾಯಿಪುಡಿ, ಅಂಟುವಾಳಪುಡಿ ಮೊದಲಾದವುಗಳನ್ನು ಸಂಗ್ರಹಿಸಿ ಕೊಡಲಿದ್ದಾರೆ.

ಮಲ್ನಾಡ್ ಫ್ರೆಶ್.ಕಾಂ ಆರಂಭಗೊಳ್ಳುವುದರ ಮೂಲಕ ರಾಜ್ಯದ ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ಸುಮಾರು 6500 ರೈತರಿಗೆ ಅನುಕೂಲ ಆಗಲಿದೆ.

ನಗರ ಪ್ರದೇಶಗಳ ಗ್ರಾಹಕರಿಗೆ

ನಗರ ಪ್ರದೇಶಗಳ ಗ್ರಾಹಕರಿಗೆ

ನಮ್ಮೊಂದಿಗೆ ಸುಮಾರು 100ಕ್ಕೂ ಹೆಚ್ಚು ಗ್ರಾಮೀಣ ಮಹಿಳಾ ಸಂಘಗಳು ಹಾಗೂ 25ಕ್ಕೂ ಹೆಚ್ಚು ಸ್ವಯಂ ಸೇವಾ ಸಂಸ್ಥೆಗಳು ಕೈ ಜೋಡಿಸಲಿವೆ. ಮಲ್ನಾಡ್ ಫ್ರೆಶ್.ಕಾಂ ಯಾವುದೇ ರೀತಿ ಕಲಬೆರಕೆ ಇಲ್ಲದೆ ಪರಿಶುದ್ಧ ಆಹಾರ ಪದಾರ್ಥಗಳನ್ನು ಗಿರಿ ಶ್ರೇಣಿಗಳ ತಪ್ಪಲಿನಿಂದ ಸಂಗ್ರಹಿಸಿ ನಗರ ಪ್ರದೇಶಗಳ ಗ್ರಾಹಕರಿಗೆ ತಲುಪಿಸಲಿದೆ. ಕೇವಲ ಮಲೆನಾಡಿನಲ್ಲಷ್ಟೆ ಲಭ್ಯವಾಗುವ ಕೆಲವು ವಿಶಿಷ್ಟ ಪದಾರ್ಥಗಳನ್ನು ನಾವು ಗ್ರಾಹಕರ ಮನೆಬಾಗಿಲಿಗೆ ಕೊಂಡೊಯ್ಯಲಿದ್ದೇವೆ.

ಸಾವಯವ ಹಾಗೂ ನೈಸರ್ಗಿಕ ಉತ್ಪನ್ನ

ಸಾವಯವ ಹಾಗೂ ನೈಸರ್ಗಿಕ ಉತ್ಪನ್ನ

ಮಲ್ನಾಡ್ ಆಗ್ರೋ ಇಂಡಸ್ಟ್ರೀಸ್ ಮಲ್ನಾಡ್ ಫ್ರೆಶ್ ಎಂಬ ಹೆಸರಿನಲ್ಲಿ ಹಲವು ಸಾವಯವ ಹಾಗೂ ನೈಸರ್ಗಿಕ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸಿರಿಧಾನ್ಯಗಳು, ಸಾವಯವ ಅಕ್ಕಿ, ಬೇಳೆಕಾಳುಗಳು, ಮಸಾಲೆ ಪದಾxಗಳು, ವಿವಿಧ ಬಗೆಯ ಎಣ್ಣೆಗಳು, ನೈಸರ್ಗಿಕವಾಗಿ ದೊರಕುವ ಜೇನುತುಪ್ಪ, ಕಾಫಿ ಪುಡಿ, ದೇಶೀಯವಾಗಿ ಆಹಾರದ ಜೊತೆಗೆ ಔಷಧಿಯಾಗಿಯೂ ಉಪಯೋಗಿಸಲ್ಪಡುವ ಕೆಸುವಿನ ಸೊಪ್ಪು, ಬಾಳೆಹೂ, ಕರಿಬೇವಿನ ಸೊಪ್ಪು, ನುಗ್ಗೇಸೊಪ್ಪು, ಪುದಿನಾ ಸೊಪ್ಪು, ಕೊತ್ತಂಬರಿ ಸೊಪ್ಪು, ಹಾಗಲಕಾಯಿ ಮೊದಲಾದವುಗಳಿಂದ ರುಚಿಕರವಾದ ತೊಕ್ಕು (ಗೊಜ್ಜು) ತಯಾರಿಸಲಾಗಿದ್ದು ಇವು ಮಲ್ನಾಡ್ ಫ್ರೆಶ್ ಎಂಬ ಹೆಸರಿನ ಬ್ರ್ಯಾಂಡ್ ನೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಿದೆ.

 ಸಂಸ್ಕರಿಸಲ್ಪಡುವ ಎಣ್ಣೆ

ಸಂಸ್ಕರಿಸಲ್ಪಡುವ ಎಣ್ಣೆ

ರಿಫೈನ್ಡ್ ಎಣ್ಣೆಗೆ ಬದಲಾಗಿ ಗಾಣದ ಮೂಲಕ ಸಂಸ್ಕರಿಸಲ್ಪಡುವ ಎಣ್ಣೆಗಳನ್ನು ನಾವು ಸರಬರಾಜು ಮಾಡಲಿದ್ದೇವೆ. ತೆಂಗಿನಕಾಯಿ ಎಣ್ಣೆ, ಕೊಬ್ಬರಿ ಎಣ್ಣೆ, ಸೂರ್ಯಕಾಂತಿ, ಕುಸುಬೆ, ಅಗಸೆ, ಎಳ್ಳು, ಹರಳೆಣ್ಣೆಗಳನ್ನು ಅತ್ಯಂತ ನಾಜೂಕಾಗಿ ಸಂಸ್ಕರಿಸಿ ಮಾರಾಟಕ್ಕೆ ಸಿದ್ದಪಡಿಸಲಾಗುತ್ತಿದೆ. ಸಭೆ ಸಮಾರಂಭಗಳಿಗೆ ಬೇಕಾಗುವ ವಿವಿಧ ಆಕಾರದ ಅಡಿಕೆ ತಟ್ಟೆಗಳು, ಮನೆ ಸುತ್ತಮುತ್ತಲಿನ ಕೈತೋಟಕ್ಕೆ ಬೇಕಾಗುವ ಸಾವಯವ ಗೊಬ್ಬರವನ್ನು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಲಿದೆ.

ವಿಡಿಯೋ ಮೂಲಕ ಮಾಹಿತಿ

ಮಲೆನಾಡು ಉತ್ಪನ್ನ, ಕೃಷಿ ಚಟುವಟಿಕೆ, ಸಾವಯವ ಬೆಳೆ, ರೈತರಿಗೆ ನೆರವಾಗುವುದು, ಮಲ್ನಾಡ್ ಫ್ರೆಶ್ ಉದ್ದೇಶಗಳನ್ನು ತಿಳಿಸುವ ವಿಡಿಯೋ ಇಲ್ಲಿದೆ. ಹೆಚ್ಚಿನ ಮಾಹಿತಿಗೆ ವ್ಯವಸ್ಥಾಪಕ ನಿರ್ದೇಶಕರಾದ ಜಾನ್ ಮಥಾಯಿಸ್ ರನ್ನು ಸಂಪರ್ಕಿಸಬಹುದು.
* [email protected]
* +91 82772 34333

English summary
The purpose of malnaadfresh.com is to provide fresh, natural and organic food products to its customers at their doorsteps and to create suitable marketing platform for the farmers, tribes, SHGs (Self Help Groups) and NGOs of Malnaad region, without middlemen or brokers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X