ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾರ್ಟ್ನರ್ ವಿರುದ್ಧ ತಿರುಗಿ ಬಿದ್ದ ವಿಜಯ್ ಮಲ್ಯ

By Mahesh
|
Google Oneindia Kannada News

ಬೆಂಗಳೂರು, ಏ.27: ಮದ್ಯದ ದೊರೆ ವಿಜಯ ಮಲ್ಯ ಸಕತ್ ಗರಂ ಆಗಿದ್ದಾರೆ. ತಾನು ಕಟ್ಟಿ ಬೆಳೆಸಿದ ಮದ್ಯದ ಸಾಮ್ರಾಜ್ಯದಿಂದ ತನಗೆ ಗೇಟ್ ಪಾಸ್ ಸಿಗುವ ಘಳಿಗೆ ಬಂದಿದೆ. ಅದರೆ, ತನ್ನ ಕಂಪನಿಯ ಪಾರ್ಟ್ನರ್ ಡಿಯಾಜಿಯೋ ವಿರುದ್ಧ ವಿಜಯ್ ಮಲ್ಯ ತಿರುಗಿ ಬಿದ್ದಿದ್ದಾರೆ. ತಾಕತ್ ಇದ್ರೆ ನನ್ನನ್ನು ಬೋರ್ಡ್ ನಿಂದ ಹೊರಗೆ ಹಾಕಿ ಎಂದು ಸವಾಲು ಎಸೆದಿದ್ದಾರೆ.

ಯುನೈಟೆಡ್ ಸ್ಪಿರಿಟ್ಸ್ ನ ಕಾರ್ಯಕಾರ್ತಿ ನಿರ್ದೇಶಕ ಸಿಎಫ್ ಒ ಮುರಳಿ ಅವರ ಕೈಯಿಂದ ಬಲವಂತವಾಗಿ ರಾಜೀನಾಮೆ ಬರೆಸಿಕೊಂಡ ಡಿಯಾಜಿಯೋ ಅವರನ್ನು ಕಂಪನಿಯಿಂದ ಹೊರಗೆ ಹಾಕಿತ್ತು. ನಂತರ ಪಾಲುದಾರ ಮಲ್ಯರ ಹೆಗಲ ಮೇಲೆ ಕೈ ಇಟ್ಟಿತು. ಅದರೆ, ಅದೇ ಕೈ ಅರ್ಧಚಂದ್ರ ಪ್ರಯೋಗ ಮಾಡಲು ಮುಂದಾದಾಗ ಮಲ್ಯ ಸಿಟ್ಟಿಗೆದ್ದಿದ್ದಾರೆ.

[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]

'ಯುನೈಟೆಡ್ ಸ್ಪಿರೀಟ್ಸ್ ನಲ್ಲಿ ಪಾಲು ಕಡಿಮೆ ಇರಬಹುದು ಆದರೆ, ನಾನು ಸಂಸ್ಥೆಯ ನಿರ್ದೇಶಕ ಮಂಡಳಿಯಲ್ಲಿ ಇರಬೇಕೋ ಬೇಡವೋ ಎನ್ನುವುದನ್ನು ಷೇರುದಾರರು ನಿರ್ಧರಿಸುತ್ತಾರೆ. ನಾನು ಯುನೈಟೆಡ್ ಸ್ಪಿರೀಟ್ಸ್ ಬೋರ್ಡ್ ನಿರ್ದೇಶಕನಾಗಿ ಮುಂದುವರೆಯುತ್ತೇನೆ' ಎಂದು ಗುಡುಗಿದ್ದಾರೆ. [ಮಲ್ಯ ಅಂಗಡಿ ತೊರೆದ ಆರ್ಥಿಕ ತಜ್ಞ ಮುರಳಿ]

Mallya says only shareholders can ‘oust’ him from USL

ಮಲ್ಯ ಅವರ ಯುಬಿ ಸಮೂಹದಿಂದ ಕಳೆದ ವರ್ಷ ಯುನೈಟೆಡ್ ಸ್ಪಿರೀಟ್ಸ್ ನಿಂದ ಡಿಯಾಜಿಯೋ ಶೇ 25.02 ಪಾಲು ಪಡೆದುಕೊಂಡ ಮೇಲೆ ಅನೇಕ ದೊಡ್ಡ ತಲೆಗಳಿಗೆ ಗೇಟ್ ಪಾಸ್ ನೀಡುತ್ತಾ ಬಂದಿರುವುದು ಗುಟ್ಟಾಗಿ ಉಳಿದಿಲ್ಲ. ಇದೆಲ್ಲವೂ ಗೊತ್ತಿದ್ದರೂ ಏನೂ ಮಾಡದ ಪರಿಸ್ಥಿತಿಯಲ್ಲಿ ಮಲ್ಯ ಇದ್ದಾರೆ.

ಯುಎಸ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಮಲ್ಯ ಅವರ ಬಿಯರ್ ಉದ್ಯಮ ಬೆಳೆಯಲು ಮಲ್ಯ ಅವರ ಆಪ್ತ ಮುರಳಿ ಕಾರಣರಾಗಿದ್ದರು. ಯುಬಿ ಸಮೂಹ ಬಿಯರ್ ಉತ್ಪಾದನಾ ಕ್ಷೇತ್ರದಲ್ಲಿ ವಿಶ್ವದಲ್ಲೇ ನಂ.1 ಎನಿಸಿಕೊಂಡಿತ್ತು.

ಡಿಯಾಜಿಯೋ ವಿಶ್ವದ ಅಗ್ರಗಣ್ಯ ಡಿಸ್ಟಿಲರ್ ಸಂಸ್ಥೆಯಾಗಿದ್ದು ಯುನೈಟೆಡ್ ಸ್ಪಿರೀಟ್ಸ್ ನಲ್ಲಿ ಶೇ 54.78ರಷ್ಟು ಪಾಲು ಹೊಂದಿದೆ. ಕಳೆದ ಜುಲೈ ತಿಂಗಳಿನಲ್ಲಿ ಯುಬಿ ಸಮೂಹದಿಂದ ಶೇ 26ರಷ್ಟು ಪಾಲನ್ನು 1.11 ಬಿಲಿಯನ್ ಪೌಂಡ್ ನೀಡಿ ಪಡೆದುಕೊಂಡಿತ್ತು. ಹೀಗಾಗಿ ಮಲ್ಯ ಅವರ ಮದ್ಯದಂಗಡಿ ಈಗ ಡಿಯಾಜಿಯೋ ಕಂಟ್ರೋಲ್ ನಲ್ಲಿದೆ.

ಆದರೆ, ಯುಎಸ್ಎಲ್ ಹೆಸರಿನಲ್ಲಿ ಮಲ್ಯ ಅವರು 1,337 ಕೋಟಿ ರು ಸಾಲ ಪಡೆದುಕೊಂಡಿದ್ದಾರೆ. ಯುಎಸ್ಎಲ್ ನಲ್ಲಿದ್ದ ಷೇರುಗಳನ್ನು ಅಡ ಇಟ್ಟಿದ್ದಾರೆ. ಮಲ್ಯ ಮುಂದಿನ ನಡೆ ಹೇಗಿರುತ್ತೆ ಕಾದು ನೋಡಬೇಕಿದೆ. (ಪಿಟಿಐ)

English summary
Asked to quit United Spririts’ board, Vijay Mallya struck a defiant note saying he ‘intends’ to continue as its Chairman and refuted the charges made by the company’s board with regard to its prior-period accounts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X